ETV Bharat / state

ಈ ಸರಿ ವೋಟ್ ಹಾಕ್ದೆ ಕೈ ಕೊಟ್ರೆ ನೀವು ನಮ್ಮನೆಗೆ ಬಂದಾಗ ಕಾಫಿ ಕೊಟ್ಟು ವಾಪಸ್ ಕಳಿಸ್ತೀನಿ: ಪ್ರೀತಂಗೌಡ

author img

By

Published : Dec 11, 2022, 5:33 PM IST

ನೀವು ಬಿಜೆಪಿಗೆ ವೋಟ್ ಹಾಕಲೇಬೇಕು, ಇಲ್ಲಾಂದ್ರೆ ನಾನು ನೀವು ಹೇಗೆ ನನಗೆ ಕೈ ಕೊಟ್ಟಿದ್ದೀರೋ ಅದೇ ರೀತಿ ನಾನು ಕೈಕೊಡುತ್ತೇನೆ ಎನ್ನುವ ಮೂಲಕ ಮತವನ್ನ ಬಲವಂತವಾಗಿ ನನಗೆ ಹಾಕಬೇಕು ಅಂತ ಶಾಸಕ ಪ್ರೀತಂ ಗೌಡ ಅವರು ತಾಕೀತು ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಶಾಸಕ ಪ್ರೀತಂ ಗೌಡ
ಶಾಸಕ ಪ್ರೀತಂ ಗೌಡ

ಶಾಸಕ ಪ್ರೀತಂ ಗೌಡ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ

ಹಾಸನ: ಎಲ್ಲಾ ಚುನಾವಣೆಯಲ್ಲೂ ಕೈ ಕೊಟ್ರಿ. ಈ ಚುನಾವಣೆಯಲ್ಲಿ ಮತ್ತೆ ನನಗೆ ಕೈ ಕೊಟ್ಟರೇ, ನಾನು ನಿಮಗೆ ಕೈ ಕೊಡ್ತೀನಿ. ಕಾಲು ಕೊಡ್ತೀನಿ. ನಿಮ್ಮ ಯಾವುದೇ ಕೆಲಸವನ್ನು ಮಾಡಿಕೊಡದೇ ನಮ್ಮ ಮನೆ ಮುಂದೆ ಬಂದಾಗ ಕಾಫಿ ಕುಡಿಸಿ ವಾಪಸ್ ಮನೆಗ್ ಕಳಿಸ್ತೀನಿ. ಹೀಗೆ ಪ್ರೀತಂ ಗೌಡ ಮತದಾರರಿಗೆ ವೋಟ್ ನನಗೆ ಹಾಕ್ಬೇಕು ಅಂತ ರಾತ್ರಿವೇಳೆ ಮತದಾರರಿಗೆ ತಾಕೀತು ಮಾಡಿದ್ದಾರೆ ಎನ್ನಲಾದ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ನಗರದ ಶ್ರೀನಗರ ಬಡಾವಣೆಯಲ್ಲಿ ರಸ್ತೆ ಮತ್ತು ಅಭಿವೃದ್ಧಿ ಚರಂಡಿಗಳಿಗೆ ಕಾಮಗಾರಿಗಳ ಪರಿವೀಕ್ಷಣೆ ಸಂದರ್ಭದಲ್ಲಿ ಸ್ಥಳೀಯ ಮಹಿಳೆಯೊಂದಿಗೆ ಮಾತನಾಡುತ್ತಾ ಇದ್ದ ಸಂದರ್ಭದಲ್ಲಿ, ವೋಟ್ ಹಾಕ್ತಿವಿ ಅಣ್ಣ ಅಂತ ಹೇಳಿ ಕಾಂಗ್ರೆಸ್​ ಹಾಗೂ ದಳದವರಿಗೆ ಓಟ್ ಹಾಕಿದ್ರೆ, ಕೆಲಸ ಮಾಡಿದ ಬಿಜೆಪಿ ಪಕ್ಷದ ನನಗೆ ಉರಿದು ಹೋಗುತ್ತೆ. ನಾನು ಚಿಕ್ಕ ಮಕ್ಕಳಿಗೆ ಹೇಳುವ ರೀತಿ ಹೇಳುತ್ತಿದ್ದೇನೆ. ಮುಸಲ್ಮಾನ್ ಬಾಂಧವರು ನನ್ನ ಅಣ್ಣ ತಮ್ಮಂದಿರು ಅಂತ ತಿಳಿದುಕೊಂಡು ನಾನು ನಿಮ್ಮಲ್ಲಿ ಮಾತನಾಡುತ್ತಿದ್ದೇನೆ. ನೀವು ಕೂಲಿ ಕೆಲಸ ಮಾಡಿ ಸಂಜೆ ಹೊತ್ತಿಗೆ ಕೂಲಿ ಕೊಡದಿದ್ದರೆ ನಿಮಗೆ ಬೇಜಾರಾಗುತ್ತೆ ಅಲ್ವಾ?. ಹಾಗೆ ನಾನು ಅಭಿವೃದ್ಧಿ ಕೆಲಸ ಮಾಡಿ ನನಗೆ ವೋಟ್ ಕೊಡದಿದ್ದರೆ ನನಗೂ ಬೇಜಾರಾಗುತ್ತೆ ಎಂದಿದ್ದಾರೆ.

ಬಿಜೆಪಿಗೆ ವೋಟ್ ಹಾಕಲೇಬೇಕು: ಈಗಾಗಲೇ ಮೂರು ಬಾರಿ ನಿಮ್ಮ ಬಿಜೆಪಿ ಪಕ್ಷಕ್ಕೆ ವೋಟ್ ಹಾಕದೆ ಕೈಕೊಟ್ಟಿದ್ದೀರಿ. ಕಳೆದ ಎಂಎಲ್ಎ ಚುನಾವಣೆಯಲ್ಲಿ ನಗರಸಭೆ ಚುನಾವಣೆಯಲ್ಲಿ ಹಾಗೂ ಎಂಪಿ ಚುನಾವಣೆಯಲ್ಲಿ ಈಗ ಮತ್ತೆ ಆರು ತಿಂಗಳ ಬಳಿಕ ವಿಧಾನಸಭಾ ಚುನಾವಣೆ ಬರುತ್ತದೆ. ನಾನು ನಿಮ್ಮ ಬಡಾವಣೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ನೀವು ಬಿಜೆಪಿಗೆ ವೋಟ್ ಹಾಕಲೇಬೇಕು, ಇಲ್ಲಾಂದ್ರೆ ನಾನು ನೀವು ಹೇಗೆ ನನಗೆ ಕೈ ಕೊಟ್ಟಿದ್ದೀರೋ ಅದೇ ರೀತಿ ನಾನು ಕೈಕೊಡುತ್ತೇನೆ ಎನ್ನುವ ಮೂಲಕ ಮತವನ್ನ ಬಲವಂತವಾಗಿ ನನಗೆ ಹಾಕಬೇಕು ಅಂತ ತಾಕೀತು ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಅಭಿವೃದ್ಧಿ ಕೆಲಸವನ್ನ ಮಾಡುತ್ತಿದ್ದೇನೆ: ಇನ್ನು, ಈಗಾಗಲೇ ಒಂದೇ ಕುಟುಂಬದ ಮಂದಿ ಮೂರು ಬಾರಿ ಮುಖ್ಯಮಂತ್ರಿ ಆಗಿದ್ರು. ದೊಡ್ಡವರು ಒಂದು ಸರಿ, ಕುಮಾರಣ್ಣ ಎರಡು ಸಾರಿ, ರೇವಣ್ಣ ನಾಲ್ಕು ಬಾರಿ ಮಂತ್ರಿಯಾಗಿದ್ದರು. ಯಾವತ್ತಾದ್ರೂ ಶ್ರೀನಗರಕ್ಕೆ ಬಂದು ನಿಮ್ಮ ಕಷ್ಟ ಸುಖ ಕೇಳಿದ್ದಾರಾ? ಪ್ರಧಾನಮಂತ್ರಿಯಾದ್ರೂ ಜಿಲ್ಲೆಯ ಶ್ರೀನಗರ ಅಭಿವೃದ್ಧಿಯಾಗಿಲ್ಲ ಅಂದ್ರೆ ಹೇಗೆ?. ಈಗ ನಾನು ಬಂದು ಎಲ್ಲಾ ಅಭಿವೃದ್ಧಿ ಕೆಲಸವನ್ನು ಮಾಡುತ್ತಿದ್ದೇನೆ ಎಂದಿದ್ದಾರೆ.

ವಾಪಸ್ ಹೋಗ್ತೀನಿ: ಈಗ ವೋಟ್ ಹಾಕ್ತಿರಾ, ಇಲ್ವಾ ಹೇಳಿ?. ಹಾಕಲ್ಲ ಅಂದ್ರೆ ನಾನು ಹೀಗೆ ಎಲ್ಲವನ್ನ ನಿಲ್ಲಿಸಿ ವಾಪಸ್ ಹೋಗ್ತೀನಿ. ಅವರ ಹತ್ತಿರಾನೆ ಮಾಡಿಸಿಕೊಳ್ಳಿ. ಬಡಾವಣೆಯಲ್ಲಿರುವ ಒಂದು 1500 ಮತ ನನಗೆ ಬಾರದಿದ್ದರೆ, ಚುನಾವಣೆ ಸಂದರ್ಭದಲ್ಲಿ ಬೇರೆ ಪಕ್ಷವಿದ್ದವರ ಜೊತೆ ಸುಮ್ಮನೇ ಓಡಾಡಿದೆ. ಮತ ನಿಮಗೆ ಹಾಕುತ್ತೇನೆ ಎಂದರೆ ನಮ್ಮ ಬಿಜೆಪಿಯವರು ಕೂಡ ನಿಮ್ಮ ಬಡಾವಣೆಗಳಲ್ಲಿದ್ದಾರೆ. ಅವರು ನನಗೆ ಮಾಹಿತಿ ನೀಡುತ್ತಾರೆ ಅಂತ ಎಚ್ಚರಿಕೆಯನ್ನು ಕೂಡ ನೀಡಿದ್ದಾರೆ.

ಓದಿ: ಪಕ್ಷ ಒಪ್ಪಿದ್ರೆ ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ: ಬಿ ವೈ ವಿಜಯೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.