ಹಾಸನ : ಯಾರು ವಿಶ್ವನಾಥ್. ಓ,ಎಂಎಲ್ಸಿಯವರ.. ಅವರು ಹಿರಿಯರು, ಪಾರ್ಟಿಗೆ ಹೊಸಬರು.. ನಮ್ಮ ಪಾರ್ಟಿಯ ಆಚಾರ ವಿಚಾರ ಗೊತ್ತಿಲ್ಲದೇ ಮಾತನಾಡಿದ್ದಾರೆ. ಅವರು ನಮ್ಮ ಪಕ್ಷವನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯ ಬೇಕು ಎಂದು ಹಾಸನ ಶಾಸಕ ಪ್ರೀತಂ ಜೆ.ಗೌಡ ತಿರುಗೇಟು ನೀಡಿದ್ದಾರೆ.
ಯಾರು ಹೆಚ್ ವಿಶ್ವನಾಥ್, ಅವರಿಗೆ ಪಕ್ಷದ ಸಿದ್ಧಾಂತ ಗೊತ್ತಿಲ್ಲ ಬಿಡಿ : ಶಾಸಕ ಪ್ರೀತಂ ಜೆ.ಗೌಡ - h Vishwanath
ಹೆಚ್ ವಿಶ್ವನಾಥ್ ಆದ್ರೂ ಸರಿ ಅಥವಾ ಪ್ರೀತಂ ಗೌಡನಾದ್ರು ಸರಿ. ಪಕ್ಷ ಹಾಗೂ ಸಿಎಂ ವಿರುದ್ಧದ ಇಂತಹ ಹೇಳಿಕೆ ಅವರ ಹಿರಿತನಕ್ಕೆ ಶೋಭೆ ತರುವುದಿಲ್ಲ..
ಪ್ರೀತಂ ಜೆ.ಗೌಡ
ಹಾಸನ : ಯಾರು ವಿಶ್ವನಾಥ್. ಓ,ಎಂಎಲ್ಸಿಯವರ.. ಅವರು ಹಿರಿಯರು, ಪಾರ್ಟಿಗೆ ಹೊಸಬರು.. ನಮ್ಮ ಪಾರ್ಟಿಯ ಆಚಾರ ವಿಚಾರ ಗೊತ್ತಿಲ್ಲದೇ ಮಾತನಾಡಿದ್ದಾರೆ. ಅವರು ನಮ್ಮ ಪಕ್ಷವನ್ನು ತಿಳಿದುಕೊಳ್ಳಲು ಸಾಕಷ್ಟು ಸಮಯ ಬೇಕು ಎಂದು ಹಾಸನ ಶಾಸಕ ಪ್ರೀತಂ ಜೆ.ಗೌಡ ತಿರುಗೇಟು ನೀಡಿದ್ದಾರೆ.
ನಿನ್ನೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಆಗಮಿಸಿದ್ರು. ನಾನು ಮೊದಲ ಬಾರಿಗೆ ಶಾಸಕನಾಗಿರುವೆ. ಪಕ್ಷ ಸಂಘಟನೆ ಹೇಗೆ ಮಾಡಬಹುದೆಂಬುದರ ಬಗ್ಗೆ ನಾನೇ ಸಲಹೆ ಪಡೆದು, ಪಕ್ಷ ಸಂಘಟನೆ ಬಗ್ಗೆ ಮಾತನಾಡಿರುವೆ.
ಪಕ್ಷದ ಹಿರಿಯರು ಯಡಿಯೂರಪ್ಪನವರೇ ಮುಖ್ಯಮಂತ್ರಿಯಾಗಿರುತ್ತಾರೆ ಎಂದಿದ್ದಾರೆ. ಹಿರಿಯರ ಮಾತನ್ನು ಪರಿಪಾಲನೆ ಮಾಡುವುದು ನಮ್ಮ ಧರ್ಮ, ಅದಕ್ಕೆ ನಮ್ಮ ಸಹಮತವಿದೆ. ಜೊತೆಗೆ ನನ್ನ ಕ್ಷೇತ್ರದ ಅಭಿವೃದ್ಧಿ ವಿಚಾರವಾಗಿ ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ್ದೆ. ವಿಮಾನ ನಿಲ್ದಾಣದ ವಿಚಾರವಾಗಿಯೂ ಮಾತನಾಡಿರುವೆ. ಅಭಿವೃದ್ದಿ ಬಿಟ್ಟು ನಾನು ಮತ್ತೇನು ಮಾತನಾಡಿಲ್ಲ ಎಂದ್ರು.