ETV Bharat / state

ಮಾಡಾಳು ಗೌರಮ್ಮನ ವಿಜೃಂಭಣೆಯ ಜಾತ್ರಾ ಮಹೋತ್ಸವ

ರಾಜ್ಯದೆಲ್ಲೆಡೆ ಗಣೇಶೋತ್ಸವಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದರೆ, ಹೊಯ್ಸಳರ ನಾಡು, ಶಿಲ್ಪಕಲೆಗಳ ಬೀಡು ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ವಿಘ್ನೇಶ್ವರನ ತಾಯಿ ಗೌರಿ ದೇವಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರ ಮೂಲಕ ಪ್ರತಿ ವರ್ಷದ ಭಾದ್ರಪದ ಮಾಸದ ತದಿಗೆ ದಿನದಂದು ಗ್ರಾಮದ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಹಾರನಹಳ್ಳಿ ಕೋಡಿಮಠ ಸ್ವಾಮೀಜಿ ಅವರಿಂದ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಮಾಡಾಳು ಗೌರಮ್ಮ
author img

By

Published : Sep 3, 2019, 11:14 AM IST

ಹಾಸನ: ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಶಕ್ತಿ ದೇವತೆ ಶ್ರೀ ಸ್ವರ್ಣಗೌರಿ ದೇವಿ ಜಾತ್ರಾ ಮಹೋತ್ಸವ ಒಂಭತ್ತು ದಿನಗಳ ಕಾಲ ನಡೆಯುತ್ತದೆ. ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿ ವಿಧಾನಗಳಿಂದ ಉತ್ಸವ ಆರಂಭವಾಗಿವೆ.

ಮಾಡಾಳು ಗೌರಮ್ಮನ ವಿಜೃಂಭಣೆಯ ಜಾತ್ರಾ ಮಹೋತ್ಸವ

ರಾಜ್ಯದೆಲ್ಲೆಡೆ ಗಣೇಶೋತ್ಸವಕ್ಕೆ ಹೆಚ್ಚು ಪ್ರಾಮುಖ್ಯತೆ ಇದ್ದರೆ ಹೊಯ್ಸಳರ ನಾಡು, ಶಿಲ್ಪಕಲೆಗಳ ಬೀಡು, ಕಲ್ಪವೃಕ್ಷಗಳ ತವರೂರು ಎನಿಸಿದ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ವಿಘ್ನೇಶ್ವರನ ತಾಯಿ ಗೌರಿದೇವಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದರ ಮೂಲಕ ಪ್ರತಿ ವರ್ಷದ ಭಾದ್ರಪದ ಮಾಸದ ತದಿಗೆ ದಿನದಂದು ಗ್ರಾಮದ ಹೃದಯ ಭಾಗದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಹಾರನಹಳ್ಳಿ ಕೋಡಿಮಠ ಸ್ವಾಮೀಜಿ ಅವರಿಂದ ಗೌರಿಯನ್ನು ಪ್ರತಿಷ್ಠಾಪಿಸಲಾಗುತ್ತದೆ.

ಕ್ಷೇತ್ರದ ಧಾರ್ಮಿಕ ಹಿನ್ನೆಲೆ : ಕಳೆದ 145 ವರ್ಷಗಳ ಹಿಂದೆ ಹಾರನಹಳ್ಳಿ ಕೋಡಿಮಠದ ಪರಮ ತಪಸ್ವಿ ಹಾಗೂ ಮಹಾಸ್ವಾಮೀಜಿಗಳಾದ ಶಿವಲಿಂಗ ಸ್ವಾಮೀಜಿ ಅವರು ವಜ್ರದ ಮೂಗುತಿಯನ್ನು ಆಶೀರ್ವದಿಸಿ ಸ್ವರ್ಣಗೌರಿ ದೇವಿ ಮೂರ್ತಿಗೆ ಆಭರಣ ಸಿಂಗರಿಸಿದ್ದರು. ನಂತರ ಧಾರ್ಮಿಕ ವಿಧಿ ವಿಧಾನಗಳಂತೆ ಗೌರಿ ದೇವಿಯನ್ನು ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ತಮ್ಮ ಪರಮಭಕ್ತರಾದ ಮಾದೇಗೌಡರಿಗೆ ಬರಮಾಡಿಕೊಂಡು ದೇವಿಯ ಚರಿತ್ರೆ ಬಗ್ಗೆ ವಿವರಣೆ ನೀಡುತ್ತಾ ಈ ದೇವಿಯ ಮೂರ್ತಿಯು ಸಾಧಾರಣ ಮೂರ್ತಿ ಆಗಿರದೆ ಸಾಕ್ಷಾತ್ ಪಾರ್ವತಿ ದೇವಿ ಎಂದು ಅದರ ಮಹಿಮೆಯನ್ನು ತಿಳಿಸಿದರು.

ಸೆಪ್ಟಂಬರ್ 10 ಅಥವಾ 13 ನಿಮಜ್ಜನ ಮಹೋತ್ಸವ: ಈ‌ ಬಾರಿಯ ಸ್ವರ್ಣ ಗೌರಿ ನಿಮಜ್ಜನ ಮಹೋತ್ಸವವು ಸೆಪ್ಟೆಂಬರ್ 10ರಂದು ಮಹಾಮಂಗಳಾರತಿಯೊಂದಿಗೆ ಪ್ರಾರಂಭವಾಗುತ್ತದೆ. ಮೂರನೇ ದಿನ ಹದಿಮೂರರ ಪ್ರಾತಃಕಾಲದಲ್ಲಿ ಚಂದ್ರ ಮಂಡಲ ಉತ್ಸವ ಹಾಗೂ ದುಗ್ಗಳೋತ್ಸವ ನಡೆಯುವ ಸಮಯದಲ್ಲಿ ಸಹಸ್ರ ಸಂಖ್ಯೆಯಲ್ಲಿ ಜಮಾಯಿಸುವ ಮಹಿಳೆಯರು, ತಲೆಯ ಮೇಲೆ ದುಗ್ಗಳದ ಬಟ್ಟಲನ್ನು, ಒಂದು ಬಟ್ಟಲಿನಲ್ಲಿ ಕರ್ಪೂರದಾರತಿ ಸೇವೆ ಮಾಡುವ ಅಪೂರ್ವ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ನಾಡಿನ ದೂರದ ಊರುಗಳಿಂದ ಸಾಗರೋಪಾದಿಯಲ್ಲಿ ಜನತೆ ಆಗಮಿಸುತ್ತಾರೆ.

ಈ ಎರಡು ದಿನಗಳಂದು ಸ್ವರ್ಣ ಗೌರಿ ದೇವಿಯನ್ನು ಪುಷ್ಪಾಲಂಕೃತವಾದ ಮಂಟಪದ ರಥದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರತಿ ಮನೆಯ ಬಾಗಿಲಿಗೆ ಉತ್ಸವದೊಡನೆ ತೆರಳಿದಾಗ ಮನೆಯ ಗೃಹಿಣಿಯರು ದೇವಿಗೆ ಪೂಜೆ ಸಲ್ಲಿಸಿ ತವರು ಮನೆಯ ಸಂಪ್ರದಾಯದಂತೆ ಮಡಲಕ್ಕಿ ಸಲ್ಲಿಸುತ್ತಾರೆ. ಸಂಜೆ ಐದು ಗಂಟೆಗೆ ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಹಾರನಹಳ್ಳಿ ಕೋಡಿಮಠದ ಸ್ವಾಮೀಜಿ ಸಮ್ಮುಖದಲ್ಲಿ ಕರ್ಪೂರದಾರತಿ ಬೆಳಗಿ ನೀರಿನಲ್ಲಿ ನಿಮಜ್ಜನ ಮಾಡಲಾಗುತ್ತದೆ.

ದಿನನಿತ್ಯ ದಾಸೋಹ: ಗೌರಿದೇವಿ ಹಬ್ಬದಿಂದ ವನಿಮಜ್ಜನ ದಿನದ 10 ದಿನಗಳ ಕಾಲ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನದಾಸೋಹ ನಡೆಸಲಾಗುತ್ತದೆ. ಬರುವ ಭಕ್ತರ ಅನುಕೂಲಕ್ಕಾಗಿ ಆಧುನಿಕವಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಬಸ್‌ಗಳ ವ್ಯವಸ್ಥೆ ಮಾಡಿದೆ. ಖಾಸಗಿ ವಾಹನಗಳೂ ಲಭ್ಯವಿವೆ. ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ವ್ಯತ್ಯಯವಾಗದಂತೆ ಸಿದ್ಧತೆ ಭರದಿಂದ ಸಾಗಿದೆ.

Intro:ಹಾಸನ : ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ಪ್ರತಿವರ್ಷದಂತೆ ಈ ಬಾರಿಯೂ ಶಕ್ತಿ ದೇವತೆ ಶ್ರೀ ಸ್ವರ್ಣಗೌರಿ ದೇವಿ ಜಾತ್ರಾ ಮಹೋತ್ಸವ ಒಂಭತ್ತು ದಿನಗಳ ಕಾಲ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನಗಳಿಂದ ಆರಂಭವಾಗಿವೆ.

Body:ರಾಜ್ಯದ ಎಲ್ಲೆಡೆ ಗಣೇಶೋತ್ಸವಕ್ಕೆ ಪ್ರಾಮುಖ್ಯತೆ ಇದ್ದರೆ ಹೊಯ್ಸಳರ ನಾಡು, ಶಿಲ್ಪಕಲೆಗಳ ಬೀಡು, ಕಲ್ಪವೃಕ್ಷಗಳ ತವರೂರು ಎನಿಸಿ್ದದ ಅರಸೀಕೆರೆ ತಾಲೂಕಿನ ಮಾಡಾಳು ಗ್ರಾಮದಲ್ಲಿ ವಿಘ್ನೇಶ್ವರನ ತಾಯಿ ಗೌರಿದೇವಿಗೆ ಹೆಚ್ಚು
ನೀಡುವುದರ ಮೂಲಕ ಪ್ರತಿ ವರ್ಷದ ಭಾದ್ರಪದ ಮಾಸದ ತದಿಗೆ ದಿನದಂದು ಗ್ರಾಮದ ಹೃದಯಭಾಗದಲ್ಲಿರುವ ಬಸವೇಶ್ವರ ದೇವಾಲಯದಲ್ಲಿ ಹಾರನಹಳ್ಳಿ ಕೋಡಿಮಠ ಸ್ವಾಮೀಜಿ ಅವರಿಂದ ಪ್ರತಿಷ್ಠಾಪಿಸಲ್ಪಡುತ್ತದೆ.

ಸ್ಥಾಪಿಸಲಾಗುವ ಈ ಸ್ವರ್ಣಗೌರಿ ದೇವಿಗೆ ಒಂಭತ್ತು ದಿನಗಳ ಕಾಲ ಬೆಳಗ್ಗೆ, ಮಧ್ಯಾಹ್ನ ಹಾಗೂ ಸಂಜೆ ಸಮಯಕ್ಕೆ ಸರಿಯಾಗಿ ತ್ರಿಕಾಲ ಪೂಜಾ ಧಾರ್ಮಿಕ ವಿಧಿ ವಿಧಾನಗಳಿಂದ ಶಾಸ್ತ್ರೋಕ್ತವಾಗಿ ನಡೆಯಲಿದ್ದು, ವಿಶೇಷ ಸಂದರ್ಭವಾಗಿದೆ.

ತಿಂಗಳ 2 ರಂದು ಬೆಳಗ್ಗೆ ಗ್ರಾಮದಲ್ಲಿರುವ ಗೌಡರ ಬಾವಿಗೆ ಗೌರಿದೇವಿ ಮೂಲ ಸನ್ನಿಧಿಯಲ್ಲಿ ಹಾರನಹಳ್ಳಿ ಸುಕ್ಷೇತ್ರ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಅರ್ಪಿಸುವ ಪೂಜೆಯೊಂದಿಗೆ ಮಧ್ಯಾಹ್ನದ ವೇಳೆಗೆ ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಯಿತು.
ನಂತರ ನಡೆಯುವ 9ದಿನಗಳ ಜಾತ್ರಾ ಮಹೋತ್ಸವದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ಒಟ್ಟಾಗಿ ಸೇರಿ ಕೊಳ್ಳುವುದರ ಮೂಲಕ ಹೊರ ಊರುಗಳಿಂದ ಆಗಮಿಸುವ ಸಹಸ್ರಾರು ಭಕ್ತಾದಿಗಳಿಗೆ ಊಟ ಉಪಚಾರ ವ್ಯವಸ್ಥೆಯೊಂದಿಗೆ ಯಾವುದೇ ಕೊರತೆಯಾಗದಂತೆ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲು ಸಿದ್ದರಾಗುವುದು ಮತ್ತೊಂದು ವಿಶೇಷವಾಗಿದೆ.

ಕ್ಷೇತ್ರದ ಧಾರ್ಮಿಕ ಹಿನ್ನೆಲೆ :
ಕಳೆದ 145 ವರ್ಷಗಳ ಹಿಂದೆ ಹಾರನಹಳ್ಳಿ ಕೋಡಿಮಠದ ಪರಮ ತಪಸ್ವಿ ಹಾಗೂ ಮಹಾಸ್ವಾಮೀಜಿಗಳಾದ ಶಿವಲಿಂಗ ಸ್ವಾಮೀಜಿ ಅವರು ವಜ್ರದ ಮೂಗುತಿಯನ್ನು ಆಶೀರ್ವದಿಸಿ ಸ್ವರ್ಣಗೌರಿ ದೇವಿ ಮೂರ್ತಿಗೆ ಆಭರಣ ಸಿಂಗರಿಸಿದ್ದರು. ನಂತರ ಧಾರ್ಮಿಕ ವಿಧಿವಿಧಾನಗಳಂತೆ ಗೌರಿ ದೇವಿಯನ್ನು ಬಸವೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಿ ತಮ್ಮ ಪರಮಭಕ್ತರಾದ ಮಾದೇಗೌಡರಿಗೆ ಬರಮಾಡಿಕೊಂಡು ದೇವಿಯ ಚರಿತ್ರೆ ಬಗ್ಗೆ ವಿವರಣೆ ನೀಡುತ್ತಾ ಈ ದೇವಿಯ ಮೂರ್ತಿಯು ಸಾಧಾರಣ ಮೂರ್ತಿ ಆಗಿರದೆ ಸಾಕ್ಷಾತ್ ಪಾರ್ವತಿ ದೇವಿ ಎಂದು ಅದರ ಮಹಿಮೆಯನ್ನು ತಿಳಿಸಿದರು.
ಒಂದು ಶಿವಲಿಂಗಜ್ಜಯ್ಯ ಹಾಕಿದ ಮೂಗುತಿ ಮಹಿಮೆಯಿಂದ ಇಂದಿನವರೆಗೂ ಈ ಕುಗ್ರಾಮವು ಲಕ್ಷಾಂತರ ಭಕ್ತರನ್ನು ಆಕರ್ಷಿಸುವ ಮೂಲಕ ವಿಶೇಷವಾಗಿ ಹೆಂಗಳೆಯರ ಧಾರ್ಮಿಕ ಭಾವನೆಗೆ ಪುಷ್ಟಿ ನೀಡಿದೆ.
ಈ ಜಾತ್ರಾ ಮಹೋತ್ಸವ 9 ದಿನಗಳಲ್ಲಿ ಭಕ್ತರ ಭಕ್ತಿಯೇ ಮಹಾ ಪ್ರಧಾನವಾಗಿದ್ದು, ಸ್ವರ್ಣಗೌರಿ ದೇವಿ ಯಾವುದೇ ಆಡಂಬರ ಸೇರಿದಂತೆ ಬೆಳ್ಳಿ-ಬಂಗಾರ ಛತ್ರಿ ಚಾಮರಗಳಿಗೆ ಪ್ರಾಮುಖ್ಯತೆ ನೀಡದೆ. ಭಕ್ತರು ತಮ್ಮ ಕಷ್ಟ ಕಾರ್ಪಣ್ಯಗಳಿಗೆ ಹರಕೆ ಮಾಡಿಕೊಳ್ಳುವ ಸೀರೆ, ಅಕ್ಕಿ ಹಾಗೂ ಕರ್ಪೂರ ಸೇವೆಗೆ ದೇವಿ ತನ್ನ ಕೃಪಾಕಟಾಕ್ಷ ನೀಡುವುದು ಪ್ರತಿಯೊಬ್ಬ ಭಕ್ತರ ಜೀವನದಲ್ಲಿ ಆಶಾಭಾವನೆ ಮೂಡಿಸಿದೆ.
ಈ ಧಾರ್ಮಿಕ ಕಾರ್ಯಕ್ರಮವು ಒಂದು ಕೋಮು ಅಥವಾ ಜನಾಂಗದ ಜಾತಿಯ ಜನರು ಸೇರಿ ನಡೆಸುವ ಜಾತ್ರೆಯಾಗಿದೆ ಇಲ್ಲಿ ಸರ್ವ ಜನಾಂಗದ ಜನರು ಸೇರಿ ನಡೆಸುವ ಜಾತ್ರೆಯಾಗದೆ, ಇಲ್ಲಿ ಸರ್ವ ಜನಾಂಗದ ಜನರು ಭಾಗಿಯಾಗಿ ತಮ್ಮ ಸೇವೆ ಸಲ್ಲಿಸುವುದು ಒಂದು ವಿಶೇಷವಾಗಿದೆ. ಎಲ್ಲಾ ವರ್ಗದ ಜನರು ನೇರವಾಗಿ ದೇವಿಯ ದರ್ಶನವನ್ನು ಪಡೆದು ಧನ್ಯರಾಗುವ ಸುವರ್ಣಾವಕಾಶ ಈ ಜಾತ್ರಾ ಮಹೋತ್ಸವದ ವೈಶಿಷ್ಟ್ಯವಾಗಿದೆ.

ಸೆಪ್ಟಂಬರ್ 10 ಅಥವಾ 13 ವಿಸರ್ಜನಾ ಮಹೋತ್ಸವ :
ಈ‌ ಭಾರಿಯ ಸ್ವರ್ಣ ಗೌರಿ ವಿಸರ್ಜನ ಮಹೋತ್ಸವವು ಸೆಪ್ಟೆಂಬರ್ 10ರಂದು ಮಹಾಮಂಗಳಾರತಿಯೊಂದಿಗೆ ಪ್ರಾರಂಭವಾಗುತ್ತದೆ ಮೂಲಕ ಮೂರನೆಯದಿನ ಹದಿಮೂರರ ಪ್ರಾತಃಕಾಲದಲ್ಲಿ ಚಂದ್ರ ಮಂಡಲ ಉತ್ಸವ ಹಾಗೂ ದುಗ್ಗಳೋತ್ಸವ ನಡೆಯುವ ಸಮಯದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜಮಾಯಿಸುವ ಮಹಿಳೆಯರು ತಲೆಯ ಮೇಲೆ ದುಗ್ಗಳ ದ ಬಟ್ಟಲನ್ನು ಒಂದು ಬಟ್ಟಲಿನಲ್ಲಿ ಕರ್ಪೂರದಾರತಿ ಸೇವೆ ಮಾಡುವ ಅಪೂರ್ವ ದೃಶ್ಯಾವಳಿಗಳನ್ನು ಕಣ್ತುಂಬಿಕೊಳ್ಳಲು ನಾಡಿನ ದೂರದ ಊರುಗಳಿಂದ ಸಾಗರೋಪಾದಿಯಲ್ಲಿ ಜನತೆ ಆಗಮಿಸುತ್ತಾರೆ.

ಈ ಎರಡು ದಿನಗಳಂದು ಸ್ವರ್ಣ ಗೌರಿ ದೇವಿಯನ್ನು ಪುಷ್ಪಾಲಂಕೃತವಾದ ಮಂಟಪದ ರಥದಲ್ಲಿ ಕುಳ್ಳಿರಿಸಿ ಗ್ರಾಮದ ಪ್ರತಿ ಮನೆಯ ಬಾಗಿಲಿಗೆ ಉತ್ಸವದೊಡನೆ ತೆರಳಿದಾಗ ಮನೆಯ ಗೃಹಿಣಿಯರು ದೇವಿಗೆ ಪೂಜೆ ಸಲ್ಲಿಸಿ ತವರು ಮನೆಯ ಸಂಪ್ರದಾಯದಂತೆ ಮಾಡಲಕ್ಕಿ ಸಲ್ಲಿಸುತ್ತಾರೆ. ಸಂಜೆ ಐದು ಗಂಟೆಗೆ ಗ್ರಾಮದ ಮುಂಭಾಗದಲ್ಲಿರುವ ಕಲ್ಯಾಣಿಯಲ್ಲಿ ಹಾರನಹಳ್ಳಿ ಕೋಡಿಮಠದ ಸ್ವಾಮೀಜಿ ಸಮ್ಮುಖದಲ್ಲಿ ಕರ್ಪೂರದಾರತಿ ಯೋಜನೆಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ.

Conclusion:ದಿನನಿತ್ಯ ದಾಸೋಹ :
ಗೌರಿದೇವಿ ಹಬ್ಬದಿಂದ ವಿಸರ್ಜನಾ ದಿನದ 10 ದಿನಗಳ ಕಾಲ ಗ್ರಾಮದ ಮುಂಭಾಗದಲ್ಲಿರುವ ನೂತನವಾಗಿ ನಿರ್ಮಾಣ ಮಾಡಿರುವ ಸಮುದಾಯ ಭವನದಲ್ಲಿ ಜಾತ್ರಾ ಮಹೋತ್ಸವಕ್ಕೆ ಬರುವ ಭಕ್ತರಿಗೆ ಅನ್ನದಾಸೋಹ ನಡೆಸಲಾಗುತ್ತದೆ, ಬರುವ ಭಕ್ತರ ಅನುಕೂಲಕ್ಕಾಗಿ ಆಧುನಿಕವಾಗಿ ಸಾಮೂಹಿಕ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ವಿಶೇಷ ಬಸ್‌ಗಳನ್ನು ವ್ಯವಸ್ಥೆ ಮಾಡಿದೆ. ಖಾಸಗಿ ವಾಹನಗಳು ಲಭ್ಯವಿದೆ ಕ್ಷೇತ್ರಕ್ಕೆ ಬರುವಂತಹ ಭಕ್ತಾದಿಗಳಿಗೆ ಯಾವುದೇ ವ್ಯತ್ಯಯವಾಗದಂತೆ ಸಿದ್ಧತೆ ಭರದಿಂದ ಸಾಗಿದೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.