ETV Bharat / state

ಕೊರೊನಾ ಹಿನ್ನೆಲೆ : ಹಾಸನಾಂಬೆ ದೇವಾಲಯದಲ್ಲಿ ಅತಿ ಕಡಿಮೆ ಕಾಣಿಕೆ ಸಂಗ್ರಹ ...

ಹಾಸನಾಂಬೆ ದೇವಾಲಯಕ್ಕೆ ಕೊರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರಿಂದ ಈ ವರ್ಷ ಭಕ್ತರಿಂದ ಬಂದ ಹುಂಡಿ ಕಾಣಿಕೆ ಒಟ್ಟು 22,79,772 ರೂ.ಗಳು ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತ ಅಧಿಕಾರಿ ಜಗದೀಶ್ ತಿಳಿಸಿದರು.

author img

By

Published : Nov 17, 2020, 6:12 PM IST

hassan
ಹುಂಡಿ ಹಣ ಎಣಿಕೆ

ಹಾಸನ : ವರ್ಷಕ್ಕೊಮ್ಮೆ ಬಾಗಿಲು ತೆಗೆದು ಸಾರ್ವಜನಿಕರಿಗೆ ದರ್ಶನ ನೀಡುವ ಹಾಸನಾಂಬೆ ದೇವಾಲಯಕ್ಕೆ ಕೊರೊನಾ ಹಿನ್ನೆಲೆ ಸಾರ್ವಜನಿಕರಿಗೆ ನಿರ್ಬಂಧ ಹೇರಿದ್ದರಿಂದ ಈ ವರ್ಷ ಭಕ್ತರಿಂದ ಬಂದ ಹುಂಡಿ ಕಾಣಿಕೆ ಒಟ್ಟು 22,79,772 ರೂ.ಗಳು ಸಂಗ್ರಹವಾಗಿದೆ ಎಂದು ದೇವಾಲಯದ ಆಡಳಿತ ಅಧಿಕಾರಿ ಜಗದೀಶ್ ತಿಳಿಸಿದರು.

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಭಕ್ತರಿಂದ ಅತಿ ಕಡಿಮೆ ಕಾಣಿಕೆ ಸಂಗ್ರಹವಾಗಿದೆ.

ಪ್ರತಿ ವರ್ಷದಂತೆ ಈ ವರ್ಷವೂ ಹಾಸನಾಂಬೆ ದೇವಾಲಯ ಬಾಗಿಲು ತೆರೆದಿತ್ತು. ಪ್ರತಿ ವರ್ಷ ಕೋಟ್ಯಾಂತರ ರೂಗಳ ಆದಾಯ ದೇವಸ್ಥಾನದಲ್ಲಿ ಬರುತಿತ್ತು. ಆದರೆ ಕೊರೊನಾ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಮುನ್ನೆಚ್ಚರಿಕೆ ಕ್ರಮವಾಗಿ ಈ ಬಾರಿ ಸಾರ್ವಜನಿಕರಿಗೆ ಎಲ್.ಇ.ಡಿ. ಪರದೆ ಮೂಲಕ ದೇವಿಯ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಿತ್ತು. ಆದರೆ ಕೊನೆಯ ಎರಡು ದಿನ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿ ದರ್ಶನಕ್ಕೆ ಅನುವು ಮಾಡಿಕೊಡಲಾಗಿತ್ತು. ಹೀಗಾಗಿ ಆ 2 ದಿನ ದೇವಿ ಭಕ್ತರಿಂದ ಹುಂಡಿ ಹಣ ಎಣಿಸಲಾಗಿದ್ದು, ಈ ವರ್ಷ ಭಕ್ತರಿಂದ ಅತಿ ಕಡಿಮೆ ಕಾಣಿಕೆ ಸಂಗ್ರಹವಾಗಿದೆ.

ಸೋಮವಾರದಂದು 2020 ರ ವರ್ಷದ ಹಾಸನಾಂಬೆ ಬಾಗಿಲನ್ನು ಮುಚ್ಚಲಾಗಿದ್ದು, ಭಕ್ತರಿಂದ ಬಂದ ಹಾಸನಾಂಬ ದೇವಾಲಯದ ಹುಂಡಿ ಕಾಣಿಕೆ ಹಣ 21.34.052 ರೂ. ಹಾಗೂ ಸಿದ್ದೇಶ್ವರ ದೇವಾಲಯದ ಹುಂಡಿ ಹಣ 1.45.720 ರೂ.ಗಳ ಆದಾಯ ಬಂದಿದೆ ಎಂದು ಶ್ರೀ ಸಿದ್ದೇಶ್ವರ ದೇವಾಲಯ ಆವರಣದಲ್ಲಿ ಬುಧವಾರ ನಡೆಸಿದ ಎಣಿಕೆ ಪ್ರಕ್ರಿಯೆಯಲ್ಲಿ ಅಂಕಿ ಅಂಶ ದೊರಕಿದೆ. ಬೆಳಿಗ್ಗೆಯಿಂದಲೇ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಅವರ ನೇತೃತ್ವದಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು, ಸ್ಕೌಟ್ಸ್ ಅಂಡ್ ಗೈಡ್ಸ್‌ನ ವಿದ್ಯಾರ್ಥಿಗಳು ಹಣ ಎಣಿಸುವ ಕಾರ್ಯ ಆರಂಭಿಸಿದರು.

ಹಾಸನಾಂಬೆ ದೇವಾಲಯದ ಹುಂಡಿ ಕಾರ್ಯ ಮುಗಿದ ನಂತರ ಶ್ರೀ ಸಿದ್ದೇಶ್ವರ ಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯವನ್ನು ಆರಂಭ ಮಾಡಲಾಗಿತ್ತು. ಹಾಗೆಯೇ ಅದರ ಜೊತೆಗೆ ದೇವಿಗೆ ಭಕ್ತರು ಅರ್ಪಿಸಿರುವ ಸೀರೆಗಳು, ರವಿಕೆ ಕಣಗಳು, ಬೆಳ್ಳಿ ಮತ್ತು ಚಿನ್ನದ ಆಭರಣಗಳು ಸೇರಿದಂತೆ ಇನ್ನಿತರೆ ವಸ್ತುಗಳ ಎಣಿಕೆ ಕಾರ್ಯ ಮುಗಿದ ನಂತರವಷ್ಟೇ ಒಟ್ಟು ಎಷ್ಟು ಹಣ ದೇವಾಲಯಕ್ಕೆ ಬಂದಿದೆ ಎಂಬುದು ತಿಳಿದು ಬಂದಿತು. ಈ ಸಂದರ್ಭ ದೇವಸ್ಥಾನದ ಆಡಳಿತಾಧಿಕಾರಿ ಜಗದೀಶ್, ತಹಶೀಲ್ದಾರ್ ಶಿವಶಂಕರಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.