ETV Bharat / state

ಕಸ ವಿಲೇವಾರಿ ಘಟಕಕ್ಕೆ ಸ್ಥಳೀಯರ ವಿರೋಧ.. ಜೆಸಿಬಿ ತಡೆದು ಅಧಿಕಾರಿಗಳೊಂದಿಗೆ ವಾಗ್ವಾದ - Development Authority

35 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥಿತ ಕಸ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ. ಹಸಿಕಸ, ಒಣಕಸ ವಿಂಗಡಿಸುವ ಘಟಕಗಳು, ಕಸದಿಂದ ಎರೆಹುಳು ಗೊಬ್ಬರ ತಯಾರಿಸುವ ಘಟಕ ಮತ್ತು ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ವಸತಿಗಳನ್ನು ನಿರ್ಮಿಸಲಾಗುತ್ತಿದೆ..

Local opposition to garbage disposal unit
ಕಸ ವಿಲೇವಾರಿ ಘಟಕಕ್ಕೆ ಸ್ಥಳಿಯರ ವಿರೋಧ: ಜೆಸಿಬಿ ತಡೆದು ಅಧಿಕಾರಿಗಳೊಂದಿಗೆ ವಾಗ್ವಾದ
author img

By

Published : Sep 4, 2020, 6:06 PM IST

ಅರಕಲಗೂಡು(ಹಾಸನ) : ರಾಮನಾಥಪುರ ಹೋಬಳಿಯ ರಾಮನಕೊಪ್ಪಲು ಸಮೀಪದಲ್ಲಿ ಕಸವಿಲೇವಾರಿ ಘಟಕ ನಿರ್ಮಾಣ ಕಾಮಗಾರಿ ಪ್ರಾರಂಭಿಸಲು ಗಡಿ ಗುರುತಿಸಿಲು ಬಂದಿದ್ದ ತಹಶೀಲ್ದಾರ್ ಮತ್ತು ಇತರೆ ಅಧಿಕಾರಿಗಳೊಂದಿಗೆ ಸ್ಥಳೀಯರು ವಾಗ್ವಾದಕ್ಕಿಳಿದು ಜೆಸಿಬಿಗೆ ಅಡ್ಡಲಾಗಿ ಮಲಗಿ ಕಾಮಗಾರಿ ನಿಲ್ಲಿಸಲು ಯತ್ನಿಸಿದ ಘಟನೆ ನಡೆದಿದೆ.

ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸುತ್ತಿರುವ ಸ್ಥಳೀಯರು

ಇಲ್ಲಿ ಕಸ ವಿಲೇವಾರಿ ಘಟಕವನ್ನು ನಿರ್ಮಿಸುವುದರಿಂದ ನಮಗೆ ತೊಂದರೆಯಾಗುತ್ತದೆ. ಅನೇಕ ತಿಂಗಳುಗಳಿಂದಲೂ ಸಹ ಇಲ್ಲಿ ಘಟಕ ನಿರ್ಮಿಸುವುದು ಬೇಡವೆಂದು ಹೇಳುತ್ತಲೇ ಬಂದಿದ್ರೂ ನೀವು ಮತ್ತೆ ಕಾಮಗಾರಿ ಪ್ರಾರಂಭಿಸಲು ಬಂದಿರುವುದು ಸರಿಯಲ್ಲ ಎಂದರು.

ಸ್ಥಳದಲ್ಲಿದ್ದ ತಹಶೀಲ್ದಾರ್ ವೈ ಎಂ ರೇಣುಕುಮಾರ್, ಇಲ್ಲಿ 35 ಲಕ್ಷ ರೂ. ವೆಚ್ಚದಲ್ಲಿ ವ್ಯವಸ್ಥಿತ ಕಸ ವಿಲೇವಾರಿ ಘಟಕ ನಿರ್ಮಿಸಲಾಗುತ್ತಿದೆ. ಅದರಲ್ಲಿ ಹಸಿಕಸ, ಒಣಕಸಗಳನ್ನು ವಿಂಗಡಿಸುವ ಘಟಕಗಳು, ಕಸದಿಂದ ಎರೆಹುಳು ಗೊಬ್ಬರ ತಯಾರಿಸುವ ಘಟಕ ಮತ್ತು ಇಲ್ಲಿ ಕೆಲಸ ನಿರ್ವಹಿಸುವ ಸಿಬ್ಬಂದಿಗೆ ವಸತಿಗಳನ್ನು ನಿರ್ಮಿಸಲಾಗುತ್ತಿದೆ. ಇದರಿಂದ ನಿಮಗೆ ಯಾವುದೇ ತೊಂದರೆಯಾಗುವುದಿಲ್ಲವೆಂದು ಗ್ರಾಮಸ್ಥರನ್ನ ಮನವೊಲಿಸಿ ಪೊಲೀಸ್ ಸಹಾಯದಿಂದ ಕಾಮಗಾರಿ ಆರಂಭಿಸಿದರು.

ಸ್ವಚ್ಛ ಭಾರತ್ ಯೋಜನೆಯಡಿ 20 ಲಕ್ಷ, ಗ್ರಾಪಂ 14ನೇ ಹಣಕಾಸು ಯೋಜನೆಯಡಿ 11 ಲಕ್ಷ ಮತ್ತು 4 ಲಕ್ಷ ಗ್ರಾಪಂ ಸ್ವಂತ ಸಂಪನ್ಮೂಲ ಸೇರಿ ಒಟ್ಟು 35 ಲಕ್ಷ ರೂ. ಯೋಜನೆ ಇದಾಗಿದೆ. ಕೆಲ ತಿಂಗಳ ಹಿಂದೆಯೇ ಅಳತೆ ಮಾಡಿ ನೆಟ್ಟಿದ್ದ ಕಲ್ಲುಗಳನ್ನು ಸ್ಥಳೀಯರು ಕಿತ್ತು ಹಾಕಿದ್ದಾರೆ. ಈಗ ಜೆಸಿಬಿಯಿಂದ ಸುತ್ತ 5 ಅಡಿ ಟ್ರಂಚ್ ಹೊಡೆಸಿ ಗಡಿ ನಿಗದಿ ಮಾಡಲಾಗಿದೆ.

11 ಲಕ್ಷ ವೆಚ್ಚದಲ್ಲಿ ಮನೆಗಳಿರುವ ಕಡೆಗೆ 10 ಅಡಿ ಎತ್ತರದ ಕಾಂಪೌಂಡ್ ನಿರ್ಮಿಸಿ ನಂತರ ಕಸ ವಿಲೇವಾರಿ ಘಟಕ ನಿರ್ಮಿಸಲಾಗುತ್ತದೆ ಎಂದು ಗ್ರಾಪಂ ಪಿಡಿಒ ವಿಜಯ್ ಕುಮಾರ್ ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.