ಅರಕಲಗೂಡು: ಜಿಲ್ಲಾಧಿಕಾರಿ ಆದೇಶದ ಮೇರೆಗೆ ಬೀದಿ ವ್ಯಾಪಾರಿಗಳಿಗೆ 10,000 ಸಾವಿರ ರೂ. ಸಾಲ ನೀಡಲಾಗುತ್ತದೆ ಎಂದು ಪಟ್ಟಣ ಪಂಚಾಯಿತಿ ಸಮುದಾಯ ಸಂಘಟಕರಾದ ಲತಾಮಣಿ ಅವರು ತಿಳಿಸಿದರು.
ಬೀದಿ ವ್ಯಾಪಾರಿಗಳು ಯಾವ ಬ್ಯಾಂಕ್ ನಲ್ಲಿ ತಮ್ಮ ಖಾತೆ ತೆರೆದಿರುತ್ತಾರೋ, ಆ ಬ್ಯಾಂಕ್ ನಲ್ಲಿ ಸಾಲವನ್ನು ಕೊಡಿಸಲಾಗುವುದು ಎಂದು ಪಟ್ಟಣ ಪಂಚಾಯಿತಿ ಸಮುದಾಯ ಸಂಘಟಕರಾದ ಲತಾಮಣಿ ಅವರು ತಿಳಿಸಿದರು.
18 ವರ್ಷ ಮೇಲ್ಪಟ್ಟವರು ಬೀದಿ ವ್ಯಾಪಾರಿಗಳು ಪಟ್ಟಣ ಪಂಚಾಯಿತಿಗೆ ಸಂಬಂಧಪಟ್ಟ ದಾಖಲೆಗಳಾದ ಬೀದಿ ವ್ಯಾಪಾರಿಯ ಗುರುತಿನ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಫೋಟೋ, ಆಧಾರ್ ಕಾರ್ಡ್, ಬಿಪಿಎಲ್ ಕಾರ್ಡ್ ದಾಖಲೆಗಳನ್ನು ಒದಗಿಸಬೇಕು ಎಂದು ತಿಳಿಸಿದರು.