ETV Bharat / state

ಹಾಸನಾಂಬೆ ದರ್ಶನಕ್ಕೆ ಹರಿದುಬಂದ ಭಕ್ತಸಾಗರ: ಬೆಳಗ್ಗೆ 4 ಗಂಟೆಯಿಂದಲೇ ಕ್ಯೂ - hasanamba temple news

ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ದೇವಿಯ ದರುಶನಕ್ಕೆ ರಾಜ್ಯದ ಮೂಲೆ-ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ.

ಹಾಸನಾಂಬೆ ದರುಶನಕ್ಕೆ ಹರಿದು ಬಂದ ಜನಸಾಗರ
author img

By

Published : Oct 23, 2019, 9:41 AM IST

ಹಾಸನ : ವರ್ಷಕೊಮ್ಮೆ ಮಾತ್ರ ಬಾಗಿಲು ತೆರೆದು ದರ್ಶನ ನೀಡುವ ಹಾಸನಾಂಬೆ ಭಕ್ತರ ಪಾಲಿಗೆ ಬೇಡಿದ್ದನ್ನು ಕರುಣಿಸುವ ಶಕ್ತಿದೇವತೆ. ಈ ದೇವಿಯ ದರುಶನಕ್ಕೆ ರಾಜ್ಯದ ಮೂಲೆ-ಮೂಲೆಗಳಿಂದ ಜನಸಾಗರವೇ ಹರಿದು ಬರುತ್ತಿದೆ. ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕಾಗಿ ಭಕ್ತರ ದಂಡೇ ಹರಿದು ಬರುತ್ತಿದೆ. ಪ್ರಾತ:ಕಾಲ ಜಾವ 4 ಗಂಟೆಯಿಂದಲೇ ಸಹಸ್ರಾರು ಭಕ್ತರು ಸರತಿ ಸಾಲಿನಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾಗುತ್ತಿದ್ದಾರೆ.

ಹಾಸನಾಂಬೆ ದರುಶನಕ್ಕೆ ಹರಿದು ಬಂದ ಜನಸಾಗರ
ವರ್ಷದಲ್ಲಿ ಒಮ್ಮೆ ಬಾರಿ ಮಾತ್ರ ದರುಶನ ಭಾಗ್ಯ ಕಲ್ಪಿಸುವ ಹಾಸನಾಂಬೆ ದೇವಿ ದೇಗುಲಕ್ಕೆ ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ತುಮಕೂರು ಸೇರಿದಂತೆ ನಾನಾ ಭಾಗಗಳಿಂದ ಬರ್ತಿದ್ದಾರೆ. ಈ ಮೂಲಕ ದೇವಿಯ ಕೃಪೆಗೆ ಪಾತ್ರರಾಗುತ್ತಿದ್ದಾರೆ.ಅಕ್ಕಮಹಾದೇವಿ ಅಂಗಡಿ ಭಕ್ತರು ಇನ್ನು ದೇವಿಯ ದರ್ಶನಕ್ಕೆ ಗಣ್ಯಾತಿ ಗಣ್ಯರೂ ಆಗಮಿಸಿದ್ದರಿಂದ ದೇಗುಲದ ಆವರಣದಲ್ಲಿ ನೂಕುನುಗ್ಗಲು ಉಂಟಾಯಿತು. ಹಾಗಾಗಿ ಭಕ್ತರು ಸರತಿ ಸಾಲಿನಲ್ಲಿ ಕೆಲಕಾಲ ನಿಂತಲ್ಲೇ ನಿಂತು ಕೊಂಚ ತೊಂದರೆ ಅನುಭವಿಸಿದರು.ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿಯುತ್ತಿರುವುದರಿಂದ ರಾತ್ರಿಗಿಂತ ಹಗಲಲ್ಲೇ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಅಲ್ಲದೇ ಮಧ್ಯಾಹ್ನ 1ರಿಂದ 3ರವರೆಗೆ ನೈವೇದ್ಯದ ಸಮಯದಲ್ಲಿ ದರ್ಶನಕ್ಕೆ ಅವಕಾಶ ಇಲ್ಲದ ಕಾರಣ ಜನಸಂದಣಿ ಹೆಚ್ಚಾಗುತ್ತಿದೆ.

Intro:ಹಾಸನ : ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಶಕ್ತಿ ದೇವತೆ ಹಾಸನಾಂಬೆ ದರ್ಶನಕ್ಕೆ ಮಂಗಳವಾರ ಹೆಚ್ಚಿನ ಸಂಖ್ಯೆಯಲ್ಲಿ ಸಹಸ್ರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದ್ರು. ಹಾಗಿದ್ರೆ ಈ ದಿನ ಆ ದರ್ಶನ ಹೇಗಿತ್ತು ಅಂತ ನೋಡೋಣ ಬನ್ನಿ.

ಹೌದು...ಇಂದು ಮಂಗಳವಾರ ಸಂತೆ ದಿನವಾದ್ದರಿಂದ ನಸುಕಿನ ಜಾವ 4 ರಿಂದಲೇ ಸರತಿ ಸಾಲಿನಲ್ಲಿ ನಿಂತಿದ್ದ ಭಕ್ತರು ದರ್ಶನ ಪಡೆದು ಪುನೀತರಾದರು. ಆ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿದರು. ಮಧ್ಯಾಹ್ನ 1ರಿಂದ 3ರವರೆಗೆ ನೈವೇದ್ಯದ ಸಮಯದಲ್ಲಿ ದರ್ಶನಕ್ಕೆ ಅವಕಾಶ ಇಲ್ಲದ ಕಾರಣ ಜನದಟ್ಟಣೆ ಹೆಚ್ಚಾಗಿ ಸ್ವಲ್ಪ ಸಮಯ ಅಡಚಣೆ ಉಂಟಾಯಿತು.

ಕಳೆದ ಐದು ದಿನಗಳಿಂದ 300 ಹಾಗೂ 1000 ರೂ. ವಿಶೇಷ ದೇವಿಯ ದರ್ಶನಕ್ಕೆ ಭಕ್ತರ ಸಂಖ್ಯೆ ಭಾರಿ ವಿರಳವಾಗಿತ್ತು. ಇಂದು ಹಾಸನ, ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು, ತುಮಕೂರು ಸೇರಿದಂತೆ ನಾನಾ ಭಾಗಗಳಿಂದ ಬಂದಿದ್ದ ಭಕ್ತರು ದೇಗುಲಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.

ಬೆಳಗ್ಗೆ ದೇವಿಯ ದರ್ಶನಕ್ಕೆ ಗಣ್ಯರು ಆಗಮಿಸಿದ್ದರಿಂದ ನೂಕುನುಗ್ಗಲು ಉಂಟಾಯಿತು. ಮಹಿಳೆಯರು, ಮಕ್ಕಳು ಹಾಗೂ ವಿಕಲಚೇತನರು ಸರತಿ ಸಾಲಿನಲ್ಲಿ ನಿಂತು ತೊಂದರೆ ಅನುಭವಿಸಿದರು.

ರಾತ್ರಿ ಸಮಯದಲ್ಲಿ ಮಳೆ ಸುರಿಯುತ್ತಿರುವ ಪರಿಣಾಮ ಹೆಚ್ಚುತ್ತಿರುವ ಜನರು ಬೆಳಗ್ಗೆಯೇ ದರ್ಶನಕ್ಕೆ ಬರುತ್ತಿದ್ದಾರೆ‌. ಹೀಗಾಗಿ ಜಿಲ್ಲಾಡಳಿತ ‌ಧರ್ಮ ದರ್ಶನ ಹಾಗೂ ವಿಶೇಷ ದರ್ಶನಕ್ಕಾಗಿ ಕ್ರಮವಾಗಿ 300, 1000 ನಿಗಧಿ ಮಾಡಿದೆ. ಆದರೆ ಈ ಸರತಿ ಸಾಲುಗಳು ಕೂಡ ವಿಸ್ತಾರಗೊಂಡು ಜನರು ಗಂಟೆಗಟ್ಟಲೆ ನಿಲ್ಲಿಸಬೇಕಾಗಿದೆ.

ಒಟ್ಟಿನಲ್ಲಿ ಜನ ಸಾಮಾನ್ಯರ ದೇವಿ ದರ್ಶನಕ್ಕೆ ರಾತ್ರಿವೇಳೆ ಮಳೆಯ ಕಾಟ ವಾದರೆ, ಹಗಲಿನ ವೇಳೆ ಗಣ್ಯರ ಕಾಟ ಹೆಚ್ಚಾಗುತ್ತಿದೆ. ಮುಂದಿನ ದಿನಗಳಲ್ಲಾದರೂ ಸಾರ್ವಜನಿಕರ ದರ್ಶನಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸುವುದೇ ಎಂಬುದನ್ನು ಕಾದುನೋಡಬೇಕಾಗಿದೆ.

ಬೈಟ್ 1 : ಪ್ರೀಯಾಂಕ, ಮೈಸೂರು, ಭಕ್ತರು. ( ಹಸಿರು ಕಲರ್ ಬಟ್ಟೆ ಧರಿಸಿರುವ ಹುಡುಗಿ )

ಬೈಟ್ 2 : ತಾರಾ, ಹಾಸನ, ಭಕ್ತರು. ( ಪಿಂಕ್ ಕಲರ್ ಸೀರೆ ಧರಿಸಿರುವವರು )

ಬೈಟ್ 3 : ಅಕ್ಕಮಹಾದೇವಿ ಅಂಗಡಿ, ರಾಯಚೂರು, ಭಕ್ತರು.

- ಅರೆಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:೦

Conclusion:೦
ETV Bharat Logo

Copyright © 2025 Ushodaya Enterprises Pvt. Ltd., All Rights Reserved.