ETV Bharat / state

14 ತಿಂಗಳು ಕುಮಾರಸ್ವಾಮಿ ಅನುಭವಿಸಿದ್ದು ನರಕಯಾತನೆ; ಹೆಚ್‌ಡಿ ರೇವಣ್ಣ - ಹಾಸನ ಜಿಲ್ಲೆ

ಸಮ್ಮಿಶ್ರ ಸರ್ಕಾರದಲ್ಲಿ ನಾನೇ ಸಂಕಷ್ಟ ಅನುಭವಿಸಿದ್ದೇನೆ. ಕುಮಾರಸ್ವಾಮಿಗೆ ಏನ್ ಮಾಡೋಕ್ ಬಿಟ್ಟರು ಇವರು. 14 ತಿಂಗಳು ನರಕಯಾತನೆ ಅನುಭವಿಸಿದ್ದಾನೆ ಅವನು. ಅದನ್ನೆಲ್ಲಾ ಸಮಯ ಬಂದಾಗ ಹೇಳ್ತಿನಿ. ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು 2023ರ ಚುನಾವಣೆಯನ್ನು ಏಕಾಂಗಿಯಾಗಿ ಎದುರಿಸುತ್ತೇವೆ ಎಂದು ಶಾಸಕ ಹೆಚ್‌ಡಿ ರೇವಣ್ಣ ಶಪಥ ಮಾಡಿದ್ದಾರೆ.

Kumaraswamy suffered for 14 months; Tell us when the time comes - h d Revanna
14 ತಿಂಗಳು ಕುಮಾರಸ್ವಾಮಿ ಅನುಭವಿಸಿದ್ದು ನರಕಯಾತನೆ; ಹೆಚ್‌ಡಿ ರೇವಣ್ಣ
author img

By

Published : Jun 23, 2021, 4:41 AM IST

ಹಾಸನ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನನ್ನ ಒಂದು ಕಡತಕ್ಕೆ ಸಹಿ ಹಾಕಿದ್ದರೇ ನಾನು ರಾಜಕೀಯಿಂದಲೇ ನಿವೃತ್ತಿ ಆಗುತ್ತೇನೆ ಎಂದು ಎಂಎಲ್‌ಸಿ ಗೋಪಾಲಸ್ವಾಮಿ ಹೇಳಿಕೆಗೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸವಾಲು ಹಾಕಿದ್ದಾರೆ. ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ತು ಸದಸ್ಯರಾದ ನಮ್ಮ ಗೋಪಾಲಸ್ವಾಮಿ ಹೇಳಿಕೆ ನೀಡಿದ್ದಾರೆ. ಅವರು ಹೇಳುವಂತೆ ಯಡಿಯೂರಪ್ಪ ಅವರು ಏನಾದರೂ ನನ್ನ ಒಂದು ಕಡತಕ್ಕೆ ಸಹಿ ಹಾಕಿದ್ದಾರೆ ಎಂದು ಸಾಬೀತಾದರೇ ಇಂದೇ ನಾನು ರಾಜಕೀಯ ನಿವೃತ್ತಿ ಆಗ್ತೀನಿ. ಎರಡು ವರ್ಷದಿಂದ ಕೆಲಸ ನಿಲ್ಲಿಸಿದ್ದರೂ ಪರವಾಗಿಲ್ಲ. ನಮ್ಮ ಕೆಲಸ ಹಾಳು ಬಿದ್ದು ಹೋಗಲಿ. ಸಹಿ ಹಾಕಲು ನಾನು ಯಾವತ್ತೂ ಕೇಳಿಲ್ಲ. ಮೊನ್ನೆ ಬಂದಾಗಲೂ ಸಿಎಂಗೆ ಮನವರಿಗೆ ಮಾಡಿಕೊಟ್ಟೆ ಎಂದು ಹೇಳಿದ್ದಾರೆ.

14 ತಿಂಗಳು ಕುಮಾರಸ್ವಾಮಿ ಅನುಭವಿಸಿದ್ದು ನರಕಯಾತನೆ; ಹೆಚ್‌ಡಿ ರೇವಣ್ಣ

ನನೆಗುದಿಗೆ ಬಿದ್ದ ಎಲ್ಲ ಕೆಲಸ ಮಾಡಿಕೊಡಿ ಇಲ್ಲವಾದ್ರೆ ಬಿಡಿ ನಮಗೆ ಬೇಜಾರಿಲ್ಲ ಎಂದೆ. ವಿಮಾನ ನಿಲ್ದಾಣ ಕಾಮಗಾರಿ ಯಾರಿಗೆ ಕೊಡ್ಬೇಕು ಅಂದ್ರು. ಯಾರಿಗಾದ್ರು ಕೊಡಿ ಅಂತ ಹೇಳಿದ್ದೇನೆ. ಬಿಜೆಪಿಗೆ ನನ್ನಷ್ಟು ಬೈದವರು ಯಾರು ಇಲ್ಲ. ಸಿದ್ದರಾಮಯ್ಯ ಕೂಡ ಬೈದಿದ್ದಾರೆ. ದಯಮಾಡಿ ನಮ್ಮ ಜಿಲ್ಲೆಯ ಜನರನ್ನು ಉಳಿಸಿಕೊಡಿ ಎಂದು ಕೇಳಿದ್ದೇನೆ ಅಷ್ಟೆ ಎಂದಿದ್ದಾರೆ.

ಧ್ರುವನಾರಾಯಣ ಯಾರ ಪರ ಇದ್ದೇನೆ ಅಂತ ಹೇಳೋಕೆ ಹೇಳಿ. ಸಿದ್ದರಾಮಯ್ಯ ಇಲ್ಲ ಅಂದಿದ್ರೆ ಅವರು ಗೆಲ್ತಿದ್ದಾರಾ? ನಾವು ಬಿರುಕು ಎಲ್ಲೂ ಮೂಡಿಸಿಲ್ಲ. ಧ್ರುವನಾರಾಯಣ್ ಮೇಲೆ ನನಗೆ ಗೌರವ ಇದೆ. ಅವರಿಗೆ ಒಳ್ಳೆಯದಾಗಲಿ ಎಂದ ರೇವಣ್ಣ, ಸಿದ್ದರಾಮಯ್ಯ ಅವರನ್ನು ಬಿಟ್ಟೆ ಗೆಲ್ಲುವ ಶಕ್ತಿ ಕೊಡಲಿ ಎಂದು ಟಾಂಗ್ ನೀಡಿದರು.

ಯಡಿಯೂರಪ್ಪ ಅವರ ಮನೆ ಬಾಗಿಲಿಗೆ ನಾನು ಹೋಗಿಲ್ಲ. ಕೆಲಸದ ಮನೆ ಹಾಳುಬಿದ್ದು ಹೋಗಲಿ. ದಿನಾ ಇಲ್ಲಿ ಜನ ಸಾಯ್ತಾ ಇದಾರೆ. ಸಿಎಂ ಎದುರು ಕುಸ್ತಿ ಮಾಡ್ಲಾ ಎಂದು ಪ್ರಶ್ನಿಸಿದರು. ಬಿಜೆಪಿ-ಜೆಡಿಎಸ್ ಪಕ್ಷವನ್ನು ಎ-ಬಿ ಟೀಂ ಕರೆದರು. ದೇವೇಗೌಡರನ್ನು ಮುಗಿಸಲು ಇವರು ವ್ಯೂಹ ರಚಿಸಿದರು. ತಮ್ಮ ಸರ್ಕಾರ ಇದ್ದಾಗ ನಮಗೆ ಏನೆಲ್ಲ ತೊಂದರೆ ಕೊಟ್ಟರು ಗೊತ್ತಿರುವ ವಿಚಾರವಲ್ಲವೇ ಎಂದು ಕೈ ನಾಯಕರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ವರ್ಷಾಂತ್ಯದೊಳಗೆ ಎಲ್ಲರಿಗೂ ವ್ಯಾಕ್ಸಿನ್‌; ಸಿಎಂ ಯಡಿಯೂರಪ್ಪ

ಸಮ್ಮಿಶ್ರ ಸರ್ಕಾರದಲ್ಲಿ ನಾನೇ ಸಂಕಷ್ಟ ಅನುಭವಿಸಿದ್ದೇನೆ. ಕುಮಾರಸ್ವಾಮಿಗೆ ಏನ್ ಮಾಡೋಕ್ ಬಿಟ್ಟರು ಇವರು. ಎಚ್ಡಿಕೆ ಪರಿಸ್ಥಿತಿ ಅರ್ಥ ಮಾಡಿಕೊಳ್ಳಬೇಕು. 14 ತಿಂಗಳು ನರಕಯಾತನೆ ಅನುಭವಿಸಿದ್ದಾನೆ ಅವನು. ಅದನ್ನೆಲ್ಲಾ ಸಮಯ ಬಂದಾಗ ಹೇಳ್ತಿನಿ. ಮುಂದಿನ 2023ರ ಚುನಾವಣೆಯನ್ನು ಎರಡು ರಾಷ್ಟ್ರೀಯ ಪಕ್ಷಗಳನ್ನು ದೂರವಿಟ್ಟು ಏಕಾಂಗಿಯಾಗಿ ಹೋರಾಟ ಮಾಡುತ್ತೇವೆ ಎಂದು ಶಪಥ ಮಾಡಿದರು.

ನಾನು ಸೂಪರ್ ಸಿಎಂ ಆಗಿದ್ದರೇ ಹೆಚ್.ಡಿ. ಕುಮಾರಸ್ವಾಮಿಯಿಂದ ಬೆಂಗಳೂರಲ್ಲಿ ಹೊಲ, ಗದ್ದೆ ಮನೆಯನ್ನು ಏನಾದರೂ ಬರೆಯಿಸಿಕೊಂಡಿದ್ದೇನಾ ಎಂದು ಪ್ರಶ್ನೆಯೊಂದಕ್ಕೆ ರೇವಣ್ಣ ಉತ್ತರಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.