ಅರಕಲಗೂಡು: ತಾಲೂಕಿನ ಮುಂಡಗೋಡು ಗ್ರಾಮದಲ್ಲಿ ನೀರಿಗಾಗಿ ಜನರು ಪರದಾಡುವಂತಾಗಿದೆ. ನೀರಿನ ಹಾಹಾಕಾರವನ್ನು ನೀಗಿಸುವಂತೆ ತಾಲೂಕು ಕರವೇ ವಿದ್ಯಾರ್ಥಿ ಘಟಕದ ಮುಖಂಡನೊಬ್ಬ ಅಧಿಕಾರಿಗಳಿಗೆ ಮನವಿ ಮಾಡಿದ್ದಾನೆ.
ಗ್ರಾಮದಲ್ಲಿ ಮೂರ್ನಾಲ್ಕು ದಿನಕ್ಕೊಮ್ಮೆ ನಲ್ಲಿಯಲ್ಲಿ ನೀರು ಹರಿಸಲಾಗುತ್ತಿದೆ. ಒಮ್ಮೆ ನೀರು ಹರಿಸಿದರೆ ಕೊಡಗಳನ್ನು ಪಾಳಿಯಲ್ಲಿಟ್ಟು ಗಂಟೆಗಟ್ಟಲೇ ಕಾಯಬೇಕು. ಕೆಲವರಿಗೆ ನೀರು ಸಿಗದೆ ಪರಿತಪಿಸುವ ಸ್ಥಿತಿಯೂ ಇದೆ. ನೀರಿನ ದಾಹ ತಾಳಲಾರದೆ ಊರಿನ ಹೊರಗೆ ಇರುವ ಮೋಟಾರ್ನಲ್ಲಿ ಹೊತ್ತು ತರುವ ಅನಿವಾರ್ಯತೆ ಎದುರಾಗಿದೆ. ಹಾಗಾಗಿ ನೀರಿನ ಸಮಸ್ಯೆ ಬಗೆಹರಿಸುವಂತೆ ತಾಲೂಕು ಕರವೇ ವಿದ್ಯಾರ್ಥಿ ಘಟಕದ ಮುಖಂಡ ಸೋಮು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇಲ್ಲದಿದ್ದರೇ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.