ಹಾಸನ: ನಗರದ ಮಲೆನಾಡು ತಾಂತ್ರಿಕ ವಿದ್ಯಾಲಯಕ್ಕೆ ಮಾಜಿ ಕ್ರಿಕೆಟಿಗ ಹಾಗೂ ಕಾಲೇಜಿನ ಹಳೆ ವಿದ್ಯಾರ್ಥಿಯಾದ ಜಾವಗಲ್ ಶ್ರೀನಾಥ್ ಭೇಟಿ ನೀಡಿ ಕೆಲ ಸಮಯ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿ ತಮ್ಮ ಕಾಲೇಜಿನ ನೆನಪಿನ ಬುತ್ತಿಯನ್ನ ತೆರೆದಿಟ್ಟರು.
ಕಾಲೇಜು ವಿದ್ಯಾರ್ಥಿಗಳೂಂದಿಗೆ ಸಂವಾದ ಮಾಡಿದ ಅವರು, 1987ರಲ್ಲಿ ನಾನು ಇದೆ ಎಂಸಿಇ ಕಾಲೇಜಿನಲ್ಲಿ ಶಿಕ್ಷಣ ಪಡೆದೆ. ನಮ್ಮ ತಂದೆ-ತಾಯಿ ಮೈಸೂರಿನಲ್ಲಿ ವಾಸವಿದ್ರು. ನಾನು ನಗರದ ರಂಗೋಲಿ ಹಳ್ಳದಲ್ಲಿ ವಾಸವಾಗಿದ್ದು, ನಗರದ ಅನ್ನಪೂರ್ಣೇಶ್ವರಿ ಮೆಸ್ನಲ್ಲಿ ಊಟ ಮಾಡಿಕೊಂಡು ಓದಿದ್ದೆ ಎಂದು ತಮ್ಮ ನೆನಪಿನ ಬುತ್ತಿಯನ್ನ ತೆರೆದಿಟ್ಟರು.
ಇಂಜಿನಿಯರಿಂಗ್ ವಿದ್ಯಾಭ್ಯಾಸದ ಜೊತೆಯಲ್ಲಿ ನನ್ನ ಸ್ನೇಹಿತರ ಜೊತೆ ಕ್ರಿಕೆಟ್ ಆಟಕ್ಕೂ ಹೆಚ್ಚು ಹೊತ್ತು ನೀಡಿದೆ. ಹಾಗಾಗಿ ಕ್ರಿಕೆಟ್ ಕ್ಷೇತ್ರದಲ್ಲಿಯೂ ಕೂಡ ಬೆಳೆದಿದ್ದೇನೆ ಎಂದು ತಮ್ಮ ಮನದಾಳದ ಮಾತುಗಳನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.