ಹಾಸನ: ಜೈನ ಸುಮುದಾಯ ಬೇರೆಯವರಿಗೆ ಕೆಡುಕನ್ನು ಬಯಸದೆ ಸಮಾಜದ ಒಳಿತಿಗೆ, ಅಭಿವೃದ್ಧಿಗೆ ತನ್ನದೇಯಾದ ಕೊಡುಗೆ ನೀಡುತ್ತಾ ಬಂದಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು.
ನಗರದ ಮಹಾವೀರ ಭವನದಲ್ಲಿ ಜೈನ ಮಂಡಳಿ ಪತ್ತಿನ ಸಹಕಾರ ಸಂಘದ ಶತಮಾನೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜೈನ ಪತ್ತಿನ ಸಹಕಾರ ಸಂಘ ಹಿಂದುಳಿದವರಿಗೆ ನೆರವಾಗುತ್ತಾ ಬಂದಿದೆ. ಆದ್ದರಿಂದ ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿದೆ. ಮುಂದೆಯೂ ಬಡವರಿಗೆ ಆರ್ಥಿಕವಾಗಿ ನೆರವಾಗಲಿ ಎಂದರು. ಶಾಸಕರ ನಿಧಿಯಿಂದ ಪ್ರತಿ ವರ್ಷ ಜೈನ ಸಮಾಜದ ಅಭಿವೃದ್ಧಿಗೆ ಐದು ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು.
ಶತಕ ಸಂಭ್ರಮ ಸ್ಮರಣ ಸಂಚಿಕೆಯನ್ನು ಶ್ರವಣಬೆಳಗೊಳದ ಜಗದ್ಗುರು ಕರ್ಮಯೋಗಿ ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಬಿಡುಗಡೆ ಮಾಡಿದರು.