ಅರಕಲಗೂಡು: 1999ರಲ್ಲಿ ಕಾರ್ಗಿಲ್ ಯುದ್ದದಲ್ಲಿ ವೀರ ಮರಣವನ್ನಪ್ಪಿರುವ ಅಗ್ರಹಾರದ ವೆಂಕಟ್ ಉ॥ ರಾಜೇಂದ್ರರವರ ಸಮಾಧಿ ಸ್ಥಳದ ಬಳಿ 74ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಣೆ ಮಾಡಲಾಯಿತು. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕು ಅಗ್ರಹಾರ ಗ್ರಾಮದಲ್ಲಿ, ಧ್ವಜಾರೋಹಣ ನೆರವೇರಿಸುವುದರ ಮೂಲಕ ವೀರ ಯೋಧ ವೆಂಕಟ ಉ॥ ರಾಜೇಂದ್ರ ಪ್ರತಿಮೆ ಸ್ಥಾಪನೆ ಸಮಿತಿ ವತಿಯಿಂದ ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿಯ ಗೌರವಾಧ್ಯಕ್ಷರಾದ ರೈತ ಸಂಘದ ಅಧ್ಯಕ್ಷ ಯೋಗೇಶ್ರವರು, ನಾಡಿನಾದ್ಯಂತ ರೈತರನ್ನು ಹಾಗೂ ಯೋಧರನ್ನು ಪ್ರತಿನಿತ್ಯ ನೆನೆಯಬೇಕು ಮತ್ತು ಅವರಿಗೆ ಸೂಕ್ತ ಗೌರವವನ್ನು ನೀಡಬೇಕು ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿ ತಾಲ್ಲೂಕಿನ ಪ್ರಮುಖ ವೃತ್ತದಲ್ಲಿ ವೆಂಕಟ್ ಅವರ ಪ್ರತಿಮೆಯನ್ನು ನಿರ್ಮಾಣ ಮಾಡಬೇಕು. ಇಲ್ಲದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಸರ್ಕಾರಕ್ಕೆ ಎಚ್ಚರಿಸಿದರು.
ಕಾರ್ಯಕ್ರಮದಲ್ಲಿ ಸಮಿತಿಯ ಅಧ್ಯಕ್ಷರಾದ ಪ್ರತಾಪ್ ರವರು, ಕರವೇ ತಾ॥ ಅಧ್ಯಕ್ಷರಾದ ಸೋಮು ರವರು, ಕರ್ನಾಟಕ ವಿಕಾಸ ಪರಿಷತ್ ತಾ॥ ಸಂಚಾಲಕರಾದ ರಮೇಶ್ ರವರು, ಧಾರ್ಮಿಕ ಅಲ್ಪಸಂಖ್ಯಾತರ ಒಕ್ಕೂಟದ ತಾ॥ ಅಧ್ಯಕ್ಷರಾದ ಅಬ್ದುಲ್ ರೆಹಮಾನ್, ಕಾವೇರಿ ಎಕ್ಸ್‌ಪ್ರೆಸ್ ಜಿಲ್ಲಾ ಸಂಪಾದಕರಾದ ರಾಮು ಮತ್ತು ವೀರ ಯೋಧ ವೆಂಕಟ್ ರವರ ಅಭಿಮಾನಿಗಳು, ಗ್ರಾಮಸ್ಥರು ಹಾಜರಿದ್ದರು.