ಹಾಸನ : ಆಹಾರ ಅರಸಿ ಬಂದು ಆಕಸ್ಮಿಕವಾಗಿ ಮನೆ ಸೇರಿದ್ದ 8-10 ಅಡಿ ಉದ್ದದ ಹೆಬ್ಬಾವನ್ನು ರಕ್ಷಣೆ ಮಾಡುವಲ್ಲಿ ಸ್ನೇಕ್ ಕೆಂಪರಾಜು ಯಶಸ್ವಿಯಾಗಿದ್ದಾರೆ.
ಜಿಲ್ಲೆಯ ಅರಸೀಕೆರೆ ಪಟ್ಟಣದ ಶ್ರೀನಿವಾಸನಗರದ ಶ್ಯಾಮ್ ಎಂಬುವರ ಮನೆಗೆ ಆಕಸ್ಮಿಕವಾಗಿ 8-10 ಅಡಿ ಉದ್ದದ ಹೆಬ್ಬಾವು ಬಂದಿತ್ತು. ಬೃಹತ್ ಗಾತ್ರದ ಹಾವನ್ನು ಕಂಡ ಮನೆಯವರು ಸೇರಿದಂತೆ ಸ್ಥಳೀಯರು ಭಯಭೀತರಾಗಿದ್ದರು.
ಸ್ಥಳೀಯ ನಿವಾಸಿ ಯೋಗೀಶ್ ಎಂಬುವರು ತಕ್ಷಣ ಸ್ನೇಕ್ ಕೆಂಪರಾಜು ಅವರಿಗೆ ಕರೆ ಮಾಡಿದ್ದರು. ವಿಷಯ ತಿಳಿದು ಸ್ಥಳಕ್ಕೆ ಬಂದ ಕೆಂಪರಾಜು ಅವರು, ಮನೆಯಲ್ಲಿ ಅಡಗಿ ಕುಳಿತಿದ್ದ ಹೆಬ್ಬಾವನ್ನು ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು ಹತ್ತು ಅಡಿಗೂ ಹೆಚ್ಚು ಉದ್ದವಿರುವ ಹೆಬ್ಬಾವು 25 ಕೆಜಿಗೆ ಅಧಿಕ ತೂಕ ಹೊಂದಿದೆ ಎನ್ನಲಾಗಿದೆ.
ಸದ್ಯ ರಕ್ಷಣೆ ಮಾಡಿದ ಹೆಬ್ಬಾವನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸೂಚನೆಯ ಮೇರೆಗೆ ಮಾಲೆಕಲ್ಲು ತಿರುಪತಿ ಅರಣ್ಯಕ್ಕೆ ಬಿಡಲಾಗಿದೆ. ಕೆಂಪರಾಜು ಕಾರ್ಯಕ್ಕೆ ಸ್ಥಳೀಯರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.