ETV Bharat / state

ವಾಕ್ಸಿನ್ ನೀಡದೇ ನೆಟ್​​ವರ್ಕ್ ಸಮಸ್ಯೆ ಸಬೂಬು ಹೇಳಿದ ಹಿಮ್ಸ್: ಸಾರ್ವಜನಿಕರ ಪರದಾಟ - ಸರ್ಕಾರದ ವಿರುದ್ದ ಗರಂ

ಹಾಸನದ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸರ್ಕಾರವೇನೋ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತೇವೆ ಎಂದು ಹೇಳಿದೆ. ಆದರೆ, ಹಾಸನಕ್ಕೆ ಕಳೆದ ಮೂರು ದಿನಗಳಿಂದ ಲಸಿಕೆ ಸಿಗದೇ ನಿತ್ಯ ಅಲೆದಾಡುತ್ತಿದ್ದಾರೆ.

hims-hospital
ಸಬೂಬು ಹೇಳಿದ ಹಿಮ್ಸ್,
author img

By

Published : May 15, 2021, 4:36 PM IST

ಹಾಸನ: ಕಳೆದ ಮೂರು ದಿನಗಳಿಂದ ಬರ್ತನೆ ಇದ್ದೀವಿ, ಆದರೆ ಬಂದಾಗೆಲ್ಲ ನಾಳೆ ಬನ್ನಿ. ನೆಟ್​​ವರ್ಕ್ ಸಮಸ್ಯೆ ಇದೆ ಅಂತ ಸಬೂಬು ಹೇಳಿ ದಿನ ನಮ್ಮನ್ನ ಅಲೆಸುತ್ತಿದ್ದಾರೆ. ಇವರಿಗೆ ನಿರ್ವಹಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದರೆ, ರಾಜೀನಾಮೆ ಕೊಟ್ಟು ಮನೆಗೆ ಹೋಗಬೇಕು ಎಂದು ವಾಕ್ಸಿನ್ ಸಿಗದೇ ವಾಪಸ್ ಹೋಗುತ್ತಿದ್ದವರು ತಮ್ಮ ಆಕ್ರೋಶವನ್ನು ಹೊರ ಹಾಕಿದರು.

ಸಬೂಬು ಹೇಳಿದ ಹಿಮ್ಸ್,

ಓದಿ: ಹಾಸನ: ಯಾರೋ ಮಾಡಿದ ತಪ್ಪಿಗೆ, ಸೋಂಕಿತರ ಸಂಬಂಧಿಕರಿಗೆ ಕಣ್ಣೀರಿಡುವ ಶಿಕ್ಷೆ..

ಸರ್ಕಾರವೇನೋ 18ರ ನಂತರದ ವಯೋಮಾನದವರಿಗೆ ತಾತ್ಕಾಲಿಕವಾಗಿ ವ್ಯಾಕ್ಸಿನ್ ಸ್ಥಗಿತಗೊಳಿಸಿ 45 ವರ್ಷದ ವಯೋಮಾನದವರಿಗೆ ವಾಕ್ಸಿನ್ ನೀಡಲು ಮುಂದಾಗಿದೆ. ಆದರೆ, ಆಸ್ಪತ್ರೆಗೆ ಬಂದರೆ ಅಲ್ಲಿಯ ಪರಿಸ್ಥಿತಿಯೇ ಬೇರೆ. ಹಾಸನದ ಹಿಮ್ಸ್ ಆಸ್ಪತ್ರೆಯ ಆವರಣದಲ್ಲಿ ಸರ್ಕಾರವೇನೋ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ನೀಡುತ್ತೇವೆ ಎಂದು ಹೇಳಿದೆ. ಆದರೆ ಹಾಸನಕ್ಕೆ ಕಳೆದ ಮೂರು ದಿನಗಳಿಂದ ಲಸಿಕೆ ಸಿಗದೇ ನಿತ್ಯ ಅಲೆದಾಡುತ್ತಿದ್ದಾರೆ.

ಇನ್ನು ಆಸ್ಪತ್ರೆಯ ಮುಂದೇ ಒಂದು ಕಡೆ 45 ವರ್ಷದ ಮೇಲ್ಪಟ್ಟವರಿಗೆ ಲಸಿಕೆ ಹಾಕಲಾಗುವುದು ಎಂಬ ನಾಮಫಲಕವಿದೆ. ಅದರ ಎಡಭಾಗದಲ್ಲಿ 45 ವರ್ಷದ ವಯೋಮಾನದವರಿಗೆ ಲಸಿಕೆ ಲಭ್ಯವಿಲ್ಲ ಎಂಬ ನಾಮಫಲಕ ಸಾರ್ವಜನಿಕರಿಗೆ ಗೊಂದಲ ಸೃಷ್ಟಿಸಿದ್ದರಿಂದ ಸಾರ್ವಜನಿಕರು ಆಸ್ಪತ್ರೆಯ ವಿರುದ್ದ ಗರಂ ಆಗಿದ್ದಾರೆ.

ಇನ್ನು ನೋಂದಣಿ ಮಾಡಿಕೊಂಡವರಿಗೆ ಲಸಿಕೆ ಹಾಕಿಸಿಕೊಳ್ಳಿ ಎಂದು ಮೆಸೇಜ್ ಬಂದಿದ್ದು, ಆಸ್ಪತ್ರೆಗೆ ಬಂದಾಗ ಲಸಿಕೆ ರದ್ದಾಗಿದೆ ಎಂಬ ಮತ್ತೊಂದು ಮೆಸೇಜ್ ಬಂದು ಕಿರಿಕಿರಿ ಉಂಟು ಮಾಡಿದೆ. ಹೀಗಾಗಿ ಲಸಿಕೆ ಹಾಕಿಸಿಕೊಳ್ಳಲು ಬಂದವರು ಸರ್ಕಾರದ ವಿರುದ್ದ ಗರಂ ಆಗಿ ಸರ್ಕಾರ ನಡೆಸಲು ನಿಮಗೆ ಸಾಧ್ಯವಾಗದಿದ್ದರೇ ರಾಜೀನಾಮೆ ಕೊಟ್ಟು ಮನೆಗೆ ಹೋಗುವುದು ಉತ್ತಮ. ಸುಖಾ ಸುಮ್ಮನೆ ಜನರ ಪ್ರಾಣದ ಜೊತೆ ಚೆಲ್ಲಾಟವಾಡಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.