ETV Bharat / state

ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ :ಅಧಿಕಾರಿಗಳ ವಿರುದ್ಧ ಹೆಚ್​.ಡಿ.ರೇವಣ್ಣ ಗರಂ

ಹಾಸನದ ಸಬ್ ರಿಜಿಸ್ಟ್ರಾರ್ ಆಫೀಸ್​​ನಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ ಕಚೇರಿಗೆ ದಿಢೀರ್​ ಎಂಟ್ರಿ ಕೊಟ್ಟ ಶಾಸಕ ಹೆಚ್​​.ಡಿ.ರೇವಣ್ಣ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ.

hd revanna visits to register office
ಅಧಿಕಾರಿಗಳ ವಿರುದ್ಧ ಹೆಚ್​.ಡಿ.ರೇವಣ್ಣ ಗರಂ
author img

By

Published : Aug 17, 2020, 9:31 PM IST

ಹಾಸನ:ನಗರದ ಕುವೆಂಪುನಗರದಲ್ಲಿರುವ ಸಬ್ ರಿಜಿಸ್ಟ್ರಾರ್​ ಕಚೇರಿಯಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದ ಹಿನ್ನೆಲೆ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಭೇಟಿ ನೀಡಿ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡರು.

ಅಧಿಕಾರಿಗಳ ವಿರುದ್ಧ ಹೆಚ್​.ಡಿ.ರೇವಣ್ಣ ಗರಂ

ಕಚೇರಿಗೆ ಬಂದ ಗ್ರಾಹಕರ ಬಳಿ ಪ್ರತಿ ತಿಂಗಳು ನೀವು ಲಂಚ ತೆಗೆದುಕೊಂಡು ಯಾರಿಗೆ ಕೊಡ್ತೀರಾ? ತಿಂಗಳಿಗೆ ನಾಲ್ಕು ಲಕ್ಷ ರೂಪಾಯಿ ವಸೂಲಿ ಮಾಡುವುದು ಎಂದರೇನು? ಇಂತಹ ದಂಧೆ ಮಾಡುವ ಬದಲು ರಾಜೀನಾಮೆ ಕೊಟ್ಟು ಮನೆಗೆ ಹೋಗಿ ಎಂದು ಗುಡುಗಿದರು.

ಅದಕ್ಕೆ ಮರು ಉತ್ತರ ನೀಡಲು ಕಕ್ಕಾಬಿಕ್ಕಿಯಾದ ಅಧಿಕಾರಿ, ನಿಮ್ಮ ಆರೋಪಗಳಲ್ಲಿ ಸುಳ್ಳಿಲ್ಲ ಎಂಬುದು ನನಗೆ ಗೊತ್ತು. ಆದರೆ ಇನ್ನು ಮುಂದೆ ಇಂತಹ ಪ್ರಕರಣಗಳು ನಡೆಯದಂತೆ ನೋಡಿಕೊಳ್ಳುತ್ತೇನೆ. ಯಾರಾದರೂ ಬಂದು ಈ ಬಗ್ಗೆ ನನಗೆ ಗಮನಕ್ಕೆ ತಂದರೆ, ದೂರುದಾರರ ಹೆಸರನ್ನು ಗೌಪ್ಯವಾಗಿಟ್ಟು, ತಪ್ಪಿತಸ್ಥ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸುವುದಾಗಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.