ಹಾಸನ: ಕಾವೇರಿ ಗ್ರಾಮೀಣ ಬ್ಯಾಂಕ್ ಕಾರ್ಯನಿರ್ವಹಣೆ ಬಗ್ಗೆ ಮಾಜಿ ಸಚಿವ ರೇವಣ್ಣ ಗರಂ ಆಗಿ ಸಿಬ್ಬಂದಿಗೆ ಅವಾಚ್ಯ ಶಬ್ದ ಬಳಸಿ ರೇಗಾಡಿರುವ ಘಟನೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದಿದೆ.
ಕಾವೇರಿ ಗ್ರಾಮೀಣ ಬ್ಯಾಂಕ್ ರೈತರ ಮನೆ ಹಾಳು ಮಾಡುತ್ತಿದೆ. ಜನರ ಹಣವನ್ನು ಲೂಟಿ ಮಾಡಿಕೊಂಡು ಜನರಿಗೆ ಅನ್ಯಾಯ ಮಾಡುತ್ತಿದೆ ನನ್ನ ಜೀವನದಲ್ಲಿ ಒಂದೇ ಗುರಿ ಕಾವೇರಿ ಗ್ರಾಮೀಣ ಬ್ಯಾಂಕ್ ಮುಚ್ಚುವುದು ಎಂದು ಆಕ್ರೋಶಗೊಂಡರು. ಈ ವೇಳೆ, ಬ್ಯಾಂಕ್ ಸಿಬ್ಬಂದಿ ವಿರುದ್ಧ ಏಕವಚನದಲ್ಲೇ ರೇಗಾಡಿ, ಅವಾಚ್ಯ ಪದ ಬಳಕೆ ಮಾಡಿ ಏರುಧ್ವನಿಯಲ್ಲಿ ಬೈದರು.
ಓರ್ವ ಮಾಜಿ ಪ್ರಧಾನಿ ತವರೂರಲ್ಲಿ ಇಂತಹ ಪರಿಸ್ಥಿತಿ ಇದೆ ಎಂದರೆ ಬೇರೆ ಕಡೆ ಯಾವ ರೀತಿ ಪರಿಸ್ಥಿತಿ ಇರಬಹುದು ಎಂದು ತಾಳ್ಮೆ ಕಳೆದುಕೊಂಡು ಸಭೆಯಲ್ಲಿ ಕೂಗಾಡಿದ್ದಾರೆ.