ETV Bharat / state

ಕಿಂಗ್​ಪಿನ್​ ಹೆಸರು ಬಾಯಿಬಿಟ್ಟರೆ ಸರ್ಕಾರವೇ ಬಿದ್ದು ಹೋಗುತ್ತೆ: ಕುಮಾರಸ್ವಾಮಿ - ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿಯೂ ಪ್ರಶ್ನೆ ಸೋರಿಕೆ

ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿಯೂ ಪ್ರಶ್ನೆ ಸೋರಿಕೆ ಆಗಿದೆ. 500ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪ್ರಶ್ನೆ ಸೋರಿಕೆ ಯಾಗಿದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ.

Hd Kumarswamy
ಕುಮಾರಸ್ವಾಮಿ
author img

By

Published : May 6, 2022, 9:29 PM IST

ಹಾಸನ: ಪಿಎಸ್‌ಐ ಅಕ್ರಮದ ಮೂಲ ಕಿಂಗ್‌ಪಿನ್‌ ಹೆಸರು ಹೇಳಲು ಸಾಧ್ಯವಾ? ಆ ಕಿಂಗ್‌ಪಿನ್‌ ಹೆಸರು ಹೇಳಿದ್ರೆ ಸರ್ಕಾರವೇ ಉರುಳುತ್ತೆ ಎಂದು ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಹೊಸ ಬಾಂಬ್‌ ಸಿಡಿಸಿದ್ದಾರೆ.

ಜಿಲ್ಲೆಯ ಚನ್ನರಾಯಪಟ್ಟಣದಲ್ಲಿ ಮಾತನಾಡಿದ ಅವರು, ಪಿಎಸ್ಐ ಅಕ್ರಮದ ಮೂಲ ಕಿ೦ಗ್‌ಪಿನ್‌ನನ್ನು ಟಚ್‌ ಮಾಡೋಕೆ ಆಗಲ್ಲ. ಹೀಗಾಗಿ ಆ ಕಿ೦ಗ್‌ಪಿನ್‌ ಬಗ್ಗೆ ಮಾತಾಡಲು ಯಾರೂ ಮುಂದಾಗಿಲ್ಲ. ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿಯೂ ಪ್ರಶ್ನೆ ಸೋರಿಕೆ ಆಗಿದೆ. 500ಕ್ಕೂ ಹೆಚ್ಚು ಆಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ಹೋಗಿದೆ ಎಂದು ಮಾಜಿ ಸಿಎಂ ಹೇಳಿದರು.

ಅಶ್ವತ್ಥ ನಾರಾಯಣ್‌ ಹಲವಾರು ಯೂನಿವರ್ಸಿಟಿಗಳ ಪಿಂಚಣಿ ಹಣವನ್ನು ಡೈವರ್ಟ್‌ ಮಾಡಿದ್ದಾರೆ. ಕಟ್ಟಡ ಕಟ್ಟಲು ಐಐಟಿ ಕಟ್ಟಲು ಹಣ ಡೈವರ್ಟ್‌ ಮಾಡಿದ್ದಾರೆ. ಈ ಹಣವನ್ನ ಡೈವರ್ಟ್‌ ಮಾಡಿ ಯಾರಿಂದ ಕೆಲಸಮಾಡಿಸುತ್ತಿದ್ದೀರಿ. ನಿಮ್ಮ ಇಲಾಖೆಯಲ್ಲಿ ಇ೦ಜಿವಿಯರ್‌ಗಳಿಲ್ಲವೇ ಬೆ೦ಗಳೂರು ವಿಶ್ವವಿದ್ಯಾಲಯದಲ್ಲಿ ತಾಂತ್ರಿಕ ವಿಭಾಗದ ಕಟ್ಟಡ ಕಟ್ಟಲು ಹಣ ಮಂಜೂರಿಗೆ ಅಶ್ವತ್ಥ ನಾರಾಯಣ್‌ ಪತ್ರ ಬರೆದಿದ್ದಾರೆ. ಇದರಲ್ಲಿ 18 ಕೋಟಿಯಿಂದ 8 ಕೋಟಿಗೆ ಅದಾಜುವೆಚ್ಚ ಹೆಚ್ಚಾಗಿದೆ ಎ೦ದು ಕುಮಾರಸ್ವಾಮಿ ಆರೋಪಿಸಿದರು.

ರಾಜ್ಯದಲ್ಲಿ ನಿರಂತರವಾಗಿ ಆಡಳಿತದಲ್ಲಿ ದುಷ್ಕೃತ್ಯಗಳು ನಡೆಯುತ್ತಿದೆ. ಇದರಿ೦ದ ನಮ್ಮ ರಾಜ್ಯ ಎಲ್ಲಿಗೆ ಹೋಗಬಹುದು ಎಂದು ಭಯವಿದೆ. ಯಾರದ್ದೋ ಒಬ್ಬ ಮಂತ್ರಿಯ ತಲೆದ೦ಡದ ಬಗ್ಗೆ ನಾನು ಮಾತನಾಡುತ್ತಿಲ್ಲ. ನಾನು ಮೊದಲು ಬಿಜಿಪಿ ಜೊತೆ ಅಪ್ಪ ಮಕ್ಕಳನ್ನು ಮುಗಿಸುವುದೇ ನನ್ನ ಗುರಿ ಎಂದಿದ್ದರು. ನಾನು ನನ್ನ ಕೊನೆಯ ಭಾಷಣದಲ್ಲಿ ಉತ್ತಮ ಕೆಲಸ ಮಾಡಿ ಎಂದಿದ್ದೆ. ಅಲ್ಲಿಂದ ಇಲ್ಲಿವರೆಗೆ ಭ್ರಷ್ಠಾಚಾರದ ಬಗ್ಗೆಯೂ ಚರ್ಚಿಸಿಲ್ಲ. ಹಲವಾರು ಇಲಾಖೆಯಲ್ಲಿ ಭ್ರಷ್ಠಾಚಾರ ನಡೀತಿದೆ. ಇತ್ತೀಚೆಗೆ ನೇಮಕಾತಿ ವಿಚಾರದಲ್ಲಿ ದೊಡ್ಡ ಮಟ್ಟದ ಅಕ್ರಮ ನಡಿಯುತ್ತಿದೆ. ಏನೇ ತನಿಖೆ ಮಾಡಿದ್ರೂ ತಾರ್ಕಿಕ ಅಂತ್ಯ ಏನಾಗುತ್ತೆ.?

ಈ ಹಿಂದಿನ ಸರ್ಕಾರಗಳು ಯಾವ ರೀತಿ ತನಿಖೆಗೆ ಕ್ರಮ ಕೈಗೊಂಡಿವೆ.? ಅಂತಿಮವಾಗಿ ಇದರಿ೦ದ ಆಡಳಿತದ ಮೇಲೆ ದುಷ್ಪರಿಣಾಮ ಆಗುತ್ತೆ. ನಿನ್ನೆ ಅಮಿತ್‌ ಶಾ ನಿಮ್ಮ ಪಾಡಿಗೆ ನೀವು ಆಡಳಿತ ನಡಸಿ ಎಂದು ಹೇಳಿ ಹೋಗಿದ್ದಾರೆ. ಈ ನಾಡಿನಲ್ಲಿ ಏನೇ ಲೂಟಿ ಆದ್ರೂ ನಮಗೆ ಸರ್ಕಾರ ತರುವುದು ಗೊತ್ತಿದೆ ಎ೦ದು ಹೇಳಿ ಹೋಗಿದ್ದಾರೆ. ಈ ನಾಡಿನಲ್ಲಿ ಏನೇನು ನಡೆದಿದೆ ಎಂದು ಪಟ್ಟಿ ಮಾಡಿ ಹೇಳುತ್ತೇನೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದರು.

ಇದನ್ನೂ ಓದಿ: ಸಿಎಂ ಹುದ್ದೆಗಾಗಿ ಲಂಚ ಸತ್ಯ ಇರ್ಬೋದು ಎಂದ ಸಿದ್ದರಾಮಯ್ಯ: ತನಿಖೆ ನಡೆಸಲು ಸತೀಶ್​ ಜಾರಕಿಹೊಳಿ ಆಗ್ರಹ

ಮಂಗಳೂರು ಗೋಲೀಬಾರ್‌, ಬಾಂಬ್‌ ವಿಚಾರ, ಡ್ರಗ್‌ ವಿಚಾರ ಏನಾಯ್ತು? ಯಾವುದೇ ಒಂದು ವಿಚಾರ ತಾರ್ಕಿಕ ಅಂತ್ಯ ಕಾಣೋದಿಲ್ಲ. ಮಾಗಡಿಯಲ್ಲಿ ಒಂದೆರಡು ವಿದ್ಯಾರ್ಥಿಗಳು ಸೆಲೆಕ್ಟ್‌ ಆಗಿರೋದಕ್ಕೆ ಕಾಂಗ್ರೆಸ್‌ನವರು ಬೊಬ್ಬೆ ಹೊಡೆದಿದ್ದಾರೆ. ಸಹಾಯಕ ಪ್ರಾಧ್ಯಾಪಕರ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅದರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆ ಆಗಿದ ಎನ್ನುತ್ತೀರಿ. ಇದರ ಹಿ೦ದೆ ಯಾರ ಕೈವಾಡವಿದೆ. ಈ ಹುದ್ದೆಯ ಹಿ೦ದೆಯೂ ಶೇ 80 ರಷ್ಟು ಹಗರಣ ನಡೆದಿದೆ ಎನ್ನುತ್ತಿದ್ದಾರೆ.

ಇಲ್ಲಿಯೂ ಅಕ್ರಮವಾಗಿ ಪರೀಕ್ಷೆ ನಡೆದಿದೆ ಎಂಬ ಮಾಹಿತಿ ಇದೆ. ಹಳೆ ಮೈಸೂರು ಭಾಗದಲ್ಲಿ ದಳಪತಿಗಳನ್ನ ಚಿದ್ರ ಮಾಡುತ್ತೇವೆ ಎಂದು ಬಿಜೆಪಿ ನಾಯಕರು ಹೇಳಿದ್ದಾರೆ. ಈ ದಳಪತಿಗಳ ಕೋಟೆಯಲ್ಲ, ರಾಜ್ಯವನ್ನೇ ಚಿತ್ರನ್ನ ಮಾಡಿದ್ದಾರೆ. ನಮ್ಮ ಕೋಟೆಯನ್ನು ಚಿದ್ರ ಮಾಡಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಜನ ತೀರ್ಮಾನಿಸುತ್ತಾರೆ ಎಂದು ಹೆಚ್​ಡಿಕೆ ಹೇಳಿದ್ದಾರೆ.

ಇದನ್ನೂ ಓದಿ: ಬೊಮ್ಮಾಯಿ ಎಲೆಕ್ಟೆಡ್​ ಸಿಎಂ ಅಲ್ಲ, ಅಪೈಂಟೆಡ್​ ಸಿಎಂ:ಸಿದ್ದರಾಮಯ್ಯ ವ್ಯಂಗ್ಯ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.