ETV Bharat / state

ಸಂಚಾರ ನಿಯಮ ಉಲ್ಲಂಘನೆ ಬಿಸಿಗೆ ಎಚ್ಚೆತ್ತ ವಾಹನ ಸವಾರರು... ಸಾರಿಗೆ ಕಚೇರಿ ಮುಂದೆ ಹಾಜರ್​

author img

By

Published : Oct 5, 2019, 12:15 PM IST

ಡಿಎಲ್ ಇಲ್ಲದ ವಾಹನ ಸವಾರರಿಗೆ 1000 ದಂಡ ವಿಧಿಸಲು ಆರಂಭಿಸಿದ್ದರಿಂದ, ಪ್ರಾದೇಶಿಕ ಸಾರಿಗೆ ಕಚೇರಿಗೆ ಮೊದಲ ವಾರದಲ್ಲಿ 30 ರಿಂದ 35 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಒಂದು ವಾರದಲ್ಲಿ 70ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.

ಸಂಚಾರಿ ನಿಯಮ ಉಲ್ಲಂಘನೆ

ಹಾಸನ : ಕೇಂದ್ರ ಸರ್ಕಾರದ ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಭಾರಿ ಮೊತ್ತದ ದಂಡ ವಿಧಿಸಿದ ನಂತರ ವಾಹನ ಸವಾರರು ಡ್ರೈವಿಂಗ್​​ ಲೈಸೆನ್ಸ್​ ಮತ್ತು ನವೀಕರಣ ಅರ್ಜಿ ಹಾಗೂ ವಾಹನ ಎಮಿಷನ್​ ಟೆಸ್ಟ್​ ಮಾಡಿಸಲು ಮುಗಿಬಿದ್ದಿದ್ದಾರೆ.

ಡಿಎಲ್ ಇಲ್ಲದ ವಾಹನ ಸವಾರರಿಗೆ 1000 ದಂಡ ವಿಧಿಸಲು ಆರಂಭಿಸಿದ್ದರಿಂದ, ಪ್ರಾದೇಶಿಕ ಸಾರಿಗೆ ಕಚೇರಿಗೆ ಮೊದಲ ವಾರದಲ್ಲಿ 30 ರಿಂದ 35 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಒಂದು ವಾರದಲ್ಲಿ 70ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ. ಆಗಸ್ಟ್​​ನಲ್ಲಿ 90, ಸೆಪ್ಟೆಂಬರ್​​ನಲ್ಲಿ 140 ವಾಹನ ಚಾಲನಾ ಪರವಾನಿಗೆ ವಿತರಿಸಲಾಗಿದೆ.

ಕೇಂದ್ರ ಸರ್ಕಾರ ಅನಕ್ಷರಸ್ಥರು ಸಹ ಡಿಎಲ್ ಪಡೆಯಲು ಅರ್ಹರು ಎಂಬ ಕಾನೂನು ಜಾರಿಗೊಳಿಸಿದ್ದು, ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕಿರುವ ಕಾರಣ ವಾಹನ ಸವಾರರು ಎಲ್​ಎಲ್​ಆರ್ ಹಾಗೂ ಡಿಎಲ್ ಪರೀಕ್ಷೆಗೆ ಹಾಜರಾಗಲು ತಿಂಗಳುಗಟ್ಟಲೆ ಕಾಯಬೇಕಾಗಿದೆ.

ಸಂಚಾರಿ ನಿಯಮ ಉಲ್ಲಂಘನೆ ಬಿಸಿಗೆ ಎಚ್ಚೆತ್ತ ವಾಹನ ಸವಾರರು

ವಾಹನ ಸವಾರರು ಗಣಕೀಕೃತ ವಾಯು ಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ಪರೀಕ್ಷೆಮಾಡಿ ಪ್ರಮಾಣ ಪತ್ರವನ್ನು ಪಡೆದಿರಬೇಕು. ಪೊಲೀಸರು ತಪಾಸಣೆ ಮಾಡುವಾಗ ಈ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಇಲ್ಲವಾದರೆ ಸಾವಿರ ರೂಪಾಯಿ ದಂಡ ಪಾವತಿಸಬೇಕು. ಇದರಿಂದ ಪಾರಾಗಲು ವಾಹನ ಮಾಲೀಕರು ತಪಾಸಣೆಗೆ ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 4,18,727 ಕ್ಕೂ ಹೆಚ್ಚು ವಾಹನಗಳಿವೆ. ಆದರೆ, ಎಮಿಷನ್ ಟೆಸ್ಟ್ ಮಾಡುವ ಕೇಂದ್ರಗಳು ಇರುವುದು ನಾಲ್ಕು ಮಾತ್ರ. ಹಾಸನ, ಸಕಲೇಶಪುರ ತಾಲೂಕುಗಳಲ್ಲಿ ಮಾತ್ರ ಮಾಲಿನ್ಯ ತಪಾಸಣಾ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಬೇಲೂರು ಮತ್ತು ಚನ್ನರಾಯಪಟ್ಟಣದಲ್ಲಿ ಕೇಂದ್ರ ಆರಂಭಿಸಲಾಗಿತ್ತು‌. ತಿಂಗಳ ಬಳಿಕ ಬಂದ್​ ಮಾಡಲಾಗಿದೆ. ಎಮಿಷನ್ ಟೆಸ್ಟ್ ಗೆ ಹಾಸನ ಅಥವಾ ಸಕಲೇಶಪುರಕ್ಕೆ ಹೋಗಬೇಕಾಗಿದೆ‌.

Intro:ಹಾಸನ : ಸಂಚಾರ ನಿಯಮಗಳ ಉಲ್ಲಂಘನೆ ಸಂಬಂಧಿಸಿದಂತೆ ಪರಿಷ್ಕೃತ ತಂಡ ಜಾರಿಯಾಗುತ್ತಿದೆ ಡ್ರೈವಿಂಗ್ ಲೈಸೆನ್ಸ್ ಮತ್ತು ನವೀಕರಣಕ್ಕೆ ಪ್ರಾದೇಶಿಕ ಸಾರಿಗೆ ಕಚೇರಿಗೆ ಅರ್ಜಿ ಹಾಕುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅಲ್ಲದೆ ವಾಹನದ ಹೊಗೆ ತಪಾಸಣೆ (ಎಮಿಷನ್ ಟೆಸ್ಟ್) ಮಾಡುವ ಕೇಂದ್ರಗಳಲ್ಲಿ ಜನ ಜಂಗುಳಿ ಕಂಡುಬರುತ್ತಿದೆ.

ಭಾರಿ ಮೊತ್ತದ ದಂಡದಿಂದ ತಪ್ಪಿಸಿಕೊಳ್ಳಲು ವಾಹನ ಸವಾರರು ಡ್ರೈವಿಂಗ್ ಲೈಸೆನ್ಸ್ ಮತ್ತು ತಮ್ಮ ವಾಹನಗಳಿಗೆ ಸಂಬಂಧಿಸಿದ ದಾಖಲೆಗಳನ್ನು ಸಿದ್ಧಪಡಿಸಿಕೊಳ್ಳಲು ನಿರತರಾಗಿದ್ದಾರೆ.

ಡಿಎಲ್ ಇಲ್ಲದೆ ವಾಹನ ಚಲಾಯಿಸುವ ಸವಾರರಿಗೆ 1 ಸಾವಿರ ರೂಪಾಯಿ ದಂಡ ವಿಧಿಸಲು ಆರಂಭಿಸಿದ್ದರಿಂದ ಜನರು ಎಚ್ಚೆತ್ತುಕೊಂಡಿದ್ದಾರೆ. ವಾರಕ್ಕೆ 30ರಿಂದ 35 ಅರ್ಜಿಗಳು ಸಲ್ಲಿಕೆಯಾಗಿದ್ದವು. ಕಳೆದ ಒಂದು ವಾರದಲ್ಲಿ 70ಕ್ಕೂ ಹೆಚ್ಚು ಅರ್ಜಿ ಸಲ್ಲಿಕೆಯಾಗಿವೆ ಆಗಸ್ಟ್ ನಳಲ್ಲಿ 90 ವಾಹನ ಚಾಲನಾ ಪರವಾನಿಗೆ ನೀಡಿದ್ದಾರೆ, ಸೆಪ್ಟೆಂಬರ್ನಲ್ಲಿ 140 ಡಿಎಲ್ ವಿತರಿಸಲಾಗಿದೆ.

ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆ ತಿದ್ದುಪಡಿಗೆ ತಂದು ಅನಕ್ಷರಸ್ಥರು ಡಿಎಲ್ ಪಡೆಯಲು ಅರ್ಹರು ಎಂಬ ಕಾನೂನು ಜಾರಿಗೊಳಿಸಿದೆ. ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು ಇರುವ ಕಾರಣ ಕೆಲವು ಎಲ್ ಎಲ್ ಆರ್ ಹಾಗೂ ಡಿಎಲ್ ಪರೀಕ್ಷೆಗೆ ಹಾಜರಾಗಲು ತಿಂಗಳುಗಟ್ಟಲೆ ಕಾಯಬೇಕಿದೆ.

ಗಣಕೀಕೃತ ಹೊಗೆ ತಪಾಸಣಾ ಕೇಂದ್ರದಲ್ಲಿ ಪರೀಕ್ಷೆಮಾಡಿ ಮಾಲಿನ್ಯ ಪರವಾಗಿಲ್ಲ ಎಂಬ ಪ್ರಮಾಣ ಪತ್ರವನ್ನು ಪಡೆದಿರಬೇಕು. ಪೊಲೀಸರು ತಪಾಸಣೆ ಮಾಡುವಾಗ ಈ ಪ್ರಮಾಣ ಪತ್ರ ನೀಡಬೇಕಾಗುತ್ತದೆ. ಇಲ್ಲವಾದರೆ ಸಾವಿರ ರೂಪಾಯಿ ದಂಡ ಪಾವತಿಸಬೇಕು ದಂಡ ಹೆಚ್ಚಿಸುವುದರಿಂದ ಪಾರಾಗಲು ವಾಹನ ಮಾಲೀಕರು ತಪಾಸಣೆಗೆ ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 4,18,727 ಕ್ಕೂ ಹೆಚ್ಚು ವಾಹನಗಳಿವೆ. ಆದರೆ, ಎಷ್ಟು ವಾಹನಗಳಿಗೆ ಎಮಿಷನ್ ಟೆಸ್ಟ್ ಮಾಡುವ ಕೇಂದ್ರಗಳು ಇರುವುದು ನಾಲ್ಕು ಮಾತ್ರ. ಹಾಸನ, ಸಕಲೇಶಪುರ ತಾಲೂಕುಗಳಲ್ಲಿ ಮಾತ್ರ ಮಾಲಿನ್ಯ ತಪಾಸಣಾ ಕೇಂದ್ರ ಕಾರ್ಯನಿರ್ವಹಿಸುತ್ತಿವೆ. ಬೇಲೂರು ಮತ್ತು ಚನ್ನರಾಯಪಟ್ಟಣದಲ್ಲಿ ಕೇಂದ್ರ ಆರಂಭಿಸಲಾಗಿತ್ತು‌. ತಿಂಗಳ ಬಳಿಕ ಬಂದ ಮಾಡಲಾಗಿದೆ. ಎಮಿಷನ್ ಟೆಸ್ಟ್ ಗೆ ಹಾಸನ ಅಥವಾ ಸಕಲೇಶಪುರಕ್ಕೆ ಹೋಗಬೇಕಾಗಿದೆ‌.

ನೊಂದಣಿ ವಾಹನಗಳ ಪೈಕಿ ಗೂಡ್ಸ್ ಕ್ಯಾರಿಯರ್, ಟ್ಯಾಕ್ಟರ್, ಬೈಕ್, ಕಾರುಗಳ ಸಂಖ್ಯೆ ಹೆಚ್ಚು. ವಾಹನಗಳು ನೋಂದಣಿ ವೇಳೆ ಎಮಿಷನ್ ಟೆಸ್ಟ್ ಮಾಡಿಸಿರುವುದು ಬಿಟ್ಟರೆ ನಂತರ ಮಾಡಿರುವುದಿಲ್ಲ. ಈಗ ದಂಡಕ್ಕೆ ಹೆದ್ದಾರಿ ಕೇಂದ್ರದ ಎದುರು ವಾಹನಗಳ ಮಾಲೀಕರು ತಪಾಸಣೆ ಮಾಡಿಸಲು ಸಾಲುಗಟ್ಟಿ ನಿಂತಿದ್ದಾರೆ.

ಸಂಚಾರಿ ಪೊಲೀಸರು ಸಹ ಸಾರ್ವಜನಿಕರಲ್ಲಿ ಪರಿಸರದ ಕುರಿತು ಕರಪತ್ರಗಳ ಮೂಲಕ ಜಾಗೃತಿ ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ.

ಹಾಸನ ಸಕಲೇಶಪುರ ಆರ್ ಟಿ ಓ ಕಚೇರಿಯಲ್ಲಿ ನೊಂದಣಿಯಾಗಿರುವ ವಾಹನಗಳು :

1. ಮೋಟರ್ ಸೈಕಲ್, ಸ್ಕೂಟರ್ : 2,87,057
2. ಮೊಪೆಡ್ : 28,147
3. ಮೋಟಾರು ಕಾರು : 51,402
4. ಗೂಡ್ಸ್ ಕ್ವಾರಿಯರ್ಸ್ : 11,579
5. ತ್ರಿವೀಲರ್ ಗೂಡ್ಸ್ : 1,559
6. ತ್ರಿವೀಲರ್ ಪ್ಯಾಸೆಂಜರ್ : 4,041
7. ಬಸ್ : 1,074
8. ಆಂಬುಲೆನ್ಸ್ : 75
9. ಮ್ಯಾಕ್ಸಿಕ್ಯಾಬ್ : 1,174
10. ಮೋಟರ್ ಕ್ಯಾಬ್ : 3,746
11. ಕೃಷಿ ಟ್ರ್ಯಾಕ್ಟರ್ : 15,893
12. ಕಮರ್ಷಿಯಲ್ ಟ್ಯಾಕ್ಟರ್ : 496
13. ಪವರ್ ಟಿಲ್ಲರ್ಸ್ : 839
14. ಸ್ಕೂಲ್ ಬಸ್ : 169
15. ಎಸ್ಕವೇಟರ್ಸ್ : 210

ಬೈಟ್ 1 : ಅನುರಾಗ್, ಕಾರು ಮಾಲೀಕರು.

ಬೈಟ್ 2 : ಚೇತನ್, ಹೊಗೆ ತಪಾಸಣೆ ಕೇಂದ್ರದ ಮಾಲೀಕ. ( ನೀಲಿ ಟೀಶರ್ಟ್ ಧರಿಸಿರುವ ವ್ಯಕ್ತಿ)

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
ETV Bharat Logo

Copyright © 2024 Ushodaya Enterprises Pvt. Ltd., All Rights Reserved.