ETV Bharat / state

ಬಂಧಿಸಲು ಬಂದ ಪಿಎಸ್​ಐಗೆ ಚಾಕು ಹಾಕಿದ ರೌಡಿಶೀಟರ್​ಗೆ ಗುಂಡೇಟು! - ಹಾಸನ ಪೊಲೀಸರಿಂದ ಗುಂಡಿನ ದಾಳಿ

ಪಿಎಸ್​ಐಗೆ ಚಾಕುವಿನಿಂದ ಇರಿದು ತಪ್ಪಿಸಿಕೊಳ್ಳಲು ಯತ್ನಿಸಿದ ರೌಡಿಶೀಟರ್​ಗೆ ಪೊಲೀಸರು ಗುಂಡೇಟು ನೀಡಿದ್ದಾರೆ.

fire-on-rowdy-sheeter
ರೌಡಿಶೀಟರ್​ಗೆ ಗುಂಡೇಟು
author img

By

Published : Nov 4, 2020, 2:23 AM IST

Updated : Nov 4, 2020, 2:46 AM IST

ಹಾಸನ: ಬಂಧಿಸಲು ಹೋದ ಗ್ರಾಮಾಂತರ ಪಿಎಸ್​ಐ ಬಸವರಾಜ್ ಮೇಲೆ ಹಲ್ಲೆ ಮಾಡಿದ ರೌಡಿಶೀಟರ್ ಸುನೀಲ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಹಾಸನದ ಹೊರವಲಯದಲ್ಲಿ ಈ ಘಟನೆ ನಡೆದಿದೆ.

ಅರೆಕಲ್ಲು ಹೊಸಹಳ್ಳಿಯ ಸುನೀಲ್ (32) ವಿರುದ್ಧ ಮಾರಣಾಂತಿಕ ಹಲ್ಲೆ ಸೇರಿ 7 ಪ್ರಕರಣಗಳಿವೆ.

ಬಂಧಿಸಲು ಬಂದ ಪಿಎಸ್​ಐಗೆ ಚಾಕು ಹಾಕಿದ ರೌಡಿಶೀಟರ್​ಗೆ ಗುಂಡೇಟು

ಮಾರಣಾಂತಿಕ ಹಲ್ಲೆ ಮತ್ತು ಜಾತಿನಿಂದನೆ ಸೇರಿ 7 ಪ್ರಕರಣಗಳಲ್ಲಿ ಭಾಗಿಯಾಗಿದ್ದ ಸುನೀಲ್ ಮತ್ತು ಆತನ ಸಹಚರರಾದ ಅರೆಕಲ್ಲು ಹೊಸಹಳ್ಳಿ ಸಂತೋಷ್, ದೊಡ್ಡ ಮಂಡಿಗನಹಳ್ಳಿ ಪ್ರತಾಪ್, ಸೂರಿ, ರವಿ, ಸಂತೋಷ್ ಹಾಗೂ ಆಲೂರು ತಾಲೂಕಿನ ಸತೀಶ್ ಅ. 23ರಂದು ಮೂರು ಮಂದಿ ಮೇಲೆ ದಾಳಿ ಮಾಡಿ, ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾಗಿದ್ದರು. ಖಚಿತ ಮಾಹಿತಿಯ ಮೇರೆಗೆ ಸುನೀಲ್ ಸೇರಿದಂತೆ ಆರು ಮಂದಿ ಹಾಸನ ಹೊರವಲಯದ ಕೃಷ್ಣ ನಗರದ ಬಳಿ ಇರುವುದನ್ನ ದೃಢಪಡಿಸಿಕೊಂಡು, ಅವರನ್ನು ಬಂಧಿಸಲು ಪೊಲೀಸರು ಮುಂದಾಗಿದ್ದರು.

psi
ಚಿಕಿತ್ಸೆ ಪಡೆಯುತ್ತಿರುವ ಪಿಎಸ್​ಐ ಬಸವರಾಜ್

ಮದ್ಯಪಾನ ಮಾಡುತ್ತಾ ಕುಳಿತಿದ್ದ ಆರೋಪಿಗಳ ವಶಕ್ಕೆ ಪಡೆಯಲು ಪೊಲೀಸರು ಮುಂದಾದರು. ಈ ವೇಳೆ ಮೂವರು ತಪ್ಪಿಸಿಕೊಂಡಿದ್ದು, ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಆದರೆ ರೌಡಿಶೀಟರ್ ಸುನೀಲ್ ತಪ್ಪಿಸಿಕೊಳ್ಳಲು ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಬಸವರಾಜ್ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು, ಬಸವರಾಜ್ ಎಡಭಾಗದ ಹೊಟ್ಟೆಗೆ ಮತ್ತು ಎಡಗೈಗೆ ಗಂಭೀರ ಗಾಯವಾಗಿದೆ.

ಸಹೋದ್ಯೋಗಿಯ ಮೇಲೆ ಹಲ್ಲೆ ಮಾಡಿದ ಹಿನ್ನೆಲೆಯಲ್ಲಿ ಅವರ ರಕ್ಷಣೆ ಮಾಡುವ ಸಲುವಾಗಿ ಸ್ಥಳದಲ್ಲಿದ್ದ ಗ್ರಾಮಾಂತರ ವೃತ್ತ ನಿರೀಕ್ಷಕ ಪಿ.ಸುರೇಶ್ ಅವರು ಆರೋಪಿ ಸುನೀಲ್ ಕಾಲಿಗೆ ಗುಂಡು ಹಾರಿಸಿದ್ದಾರೆ.

psi
ಪಿಎಸ್​ಐ ಬಸವರಾಜ್

ಇನ್ನು ಪ್ರಕರಣ ಸಂಬಂಧ ಮೂರು ಮಂದಿಯನ್ನು ವಶಕ್ಕೆ ಪಡೆದಿದ್ದು, ಗುಂಡೇಟು ತಿಂದ ರೌಡಿ ಸುನೀಲ್ ಮತ್ತು ಹಲ್ಲೆಗೊಳಗಾದ ಪಿಎಸ್ಐ ಬಸವರಾಜ್ ಇಬ್ಬರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಸೆಪ್ಟೆಂಬರ್ 1ರಂದು ಚನ್ನರಾಯಪಟ್ಟಣದಲ್ಲಿ ನಡೆದಿದ್ದ ದಂಪತಿ ಕೊಲೆ ಪ್ರಕರಣದಲ್ಲಿ ಕೂಡ ಆರೋಪಿ ಪುನೀತ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಒಂದು ಪ್ರಕರಣ ಮಾಸುವ ಮುನ್ನವೇ ಹಾಸನದಲ್ಲಿ ಮತ್ತೆ ಗುಂಡಿನ ಶಬ್ದ ಕೇಳಿದೆ. ಮುಂದಿನ ದಿನಗಳಲ್ಲಿ ಇಂತಹ ರೌಡಿಗಳನ್ನು ಹೆಡೆಮುರಿಕಟ್ಟಲು ನಮ್ಮ ಪೊಲೀಸ್ ಇಲಾಖೆ ಸಜ್ಜುಗೊಂಡಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಶ್ರೀನಿವಾಸಗೌಡ ತಿಳಿಸಿದ್ದಾರೆ.

Last Updated : Nov 4, 2020, 2:46 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.