ETV Bharat / state

47 ವರ್ಷಗಳ ಕಾಲ ಗ್ರಾಹಕರ ಮೆಚ್ಚುಗೆ ಗಳಿಸಿದ್ದ ಹೋಟೆಲ್​ ಇನ್ನು ನೆನಪು ಮಾತ್ರ: ಕಾರಣ?

ಕಳೆದ 47 ವರ್ಷಗಳಿಂದ ಹಾಸನದ ಜನರಿಗೆ ದೋಸೆಯ ರುಚಿ ತೋರಿಸಿ ಗ್ರಾಹಕರ ಮೆಚ್ಚುಗೆ ಗಳಿಸಿದ್ದ ಮೋತಿ ಹೋಟೆಲ್​ ಬಾಗಿಲು ಮುಚ್ಚಿದೆ. ವೈಯಕ್ತಿಕ ಕಾರಣ ಸೇರಿದಂತೆ ಕೋವಿಡ್​​ ಎಫೆಕ್ಟ್​​ನಿಂದ ಮೋತಿ ಹೋಟೆಲ್​​​ಅನ್ನು ಮಾಲೀಕರು ಸಂಪೂರ್ಣವಾಗಿ ಬಂದ್​​ ಮಾಡಿದ್ದು, ಇಲ್ಲಿನ ಗ್ರಾಹಕರಿಗೆ ಬೇಸರವನ್ನುಂಟುಮಾಡಿದೆ.

author img

By

Published : Dec 11, 2020, 7:40 AM IST

hassan mothi hotel closed due to covid effects
ಕೋವಿಡ್​​ ಎಫೆಕ್ಟ್​​; 47 ವರ್ಷಗಳ ಕಾಲ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮೋತಿ ಹೋಟೆಲ್ ಇನ್ನು ನೆನಪು ಮಾತ್ರ

ಹಾಸನ: 47 ವರ್ಷಗಳ ಇತಿಹಾಸವುಳ್ಳ ನಗರದ ಮೋತಿ ಹೋಟೆಲ್ ಇನ್ನು ನೆನಪು ಮಾತ್ರ. ಯಾಕೆ ಅಂತೀರಾ, ವೈಯಕ್ತಿಕ ಕಾರಣ ಸೇರಿದಂತೆ ಕೋವಿಡ್​​ ಎಫೆಕ್ಟ್​​ನಿಂದ ಮೋತಿ ಹೋಟೆಲ್​​​ಅನ್ನು ಮಾಲೀಕರು ಸಂಪೂರ್ಣವಾಗಿ ಬಂದ್​​ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಹೆಚ್ಚಿನ ಗ್ರಾಹಕರಿಗೆ ಬೇಸರವನ್ನುಂಟುಮಾಡಿದೆ.

ಕೋವಿಡ್-19 ಹಿನ್ನೆಲೆ ಸತತವಾಗಿ 8 ತಿಂಗಳುಗಳ ಕಾಲ ಹೋಟೆಲ್ ಬಾಗಿಲು ಹಾಕಿದ್ದರಿಂದ 47 ವರ್ಷಗಳ ಇತಿಹಾಸವುಳ್ಳ ಹೋಟೆಲ್ ಅಂತಿಮವಾಗಿ ಬಾಗಿಲು ಮುಚ್ಚಿದೆ.

47 ವರ್ಷಗಳ ಕಾಲ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮೋತಿ ಹೋಟೆಲ್ ಬಂದ್​​

ಉಡುಪಿ ಜಿಲ್ಲೆಯ ಕೋಟೇಶ್ವರ ಮೂಲದ ನಾರಾಯಣ ಎಂಬುವರು 1973ರಲ್ಲಿ ಹಾಸನದ ಹಳೆ ಬಸ್ ನಿಲ್ದಾಣದ ಎದುರು ಮೋತಿ ಎಂಬ ಹೆಸರಿನಡಿ ಹೋಟೆಲ್​​ ತೆರೆದಿದ್ದರು. ಸುಮಾರು 47 ವರ್ಷಗಳ ಕಾಲ ಉಪಹಾರ ಮಂದಿರದಲ್ಲಿ ಲಕ್ಷಾಂತರ ಮಂದಿಗೆ ರವಾ ದೋಸಾದಿಂದ ಹಿಡಿದು ಬಿಸಿ ಬೇಳೆಬಾತ್, ಮದ್ದೂರು ವಡೆ, ದಕ್ಷಿಣ ಭಾರತದ ಊಟ ಮತ್ತು ಕಾಫಿ ಸಮೇತ ಉತ್ತಮ ಗುಣಮಟ್ಟದ ಆಹಾರವನ್ನು ನೀಡುವ ಮೂಲಕ ಗ್ರಾಹಕರ ಮೆಚ್ಚುಗೆ ಗಳಿಸಿತ್ತು. ನಾರಾಯಣ ಅವರು ನಡೆಸಿಕೊಂಡು ಬರುತ್ತಿದ್ದ ಈ ಹೋಟೆಲ್ ಅನ್ನು ನಂತರ ಅವರ ಪುತ್ರ ಗೋಪಿಕೃಷ್ಣ ಮುಂದುವರಿಸಿಕೊಂಡು ಬಂದರು. ಆದ್ರೀಗ ಅನ್ನು ಸಂಪೂರ್ಣವಾಗಿ ಮುಚ್ಚಲಾಗಿದೆ.

ಈ ಸುದ್ದಿಯನ್ನೂ ಓದಿ: ಬೆಣ್ಣೆ ನಗರಿಯ ಈ ಕುಟುಂಬದ ಬದುಕು ಬದಲಿಸಿತು ಮೋದಿ ಧರಿಸಿದ ‘ಆ’ ಮಾಸ್ಕ್!

ಕೋವಿಡ್-19 ಸೇರಿ ವೈಯಕ್ತಿಕ ಸಮಸ್ಯೆಗಳಿಂದ ಹೋಟೆಲ್ ಮುಚ್ಚುವಂತಹ ನಿರ್ಧಾರವನ್ನು ಮಾಡಿದ್ದೇವೆ. ಗ್ರಾಹಕರು ನಮ್ಮ ಸಮಸ್ಯೆಗೆ ಸ್ಪಂದಿಸುತ್ತಾರೆ ಎಂದು ಭಾವಿಸಿದ್ದೇವೆಂದು ಮೋತಿ ಹೋಟೆಲ್ ಮಾಲೀಕ ಗೋಪಿ ಕೃಷ್ಣ ತಿಳಿಸಿದ್ದಾರೆ.

ಅಡುಗೆಭಟ್ಟರಾದ ರಾಜು ಮಾತನಾಡಿ, ಹೋಟೆಲ್ ಮಾಲೀಕರು ​ನಮ್ಮನ್ನು ಮಕ್ಕಳಂತೆ ಕಾಣುತ್ತಿದ್ದರು. ಆದ್ರೀಗ ​ಹೋಟೆಲ್​​ ಮುಚ್ಚಿದ ಕಾರಣ ಬೇರೆ ಕಡೆ ಕೆಲಸ ಹುಡುಕುವ ಅನಿವಾರ್ಯತೆ ಬಂದೊದಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹೋಟೆಲ್​​ನ ಆಹಾರವನ್ನು ಇಷ್ಟಪಡುವವರಿಗೂ ಕೂಡ ಇದು ಬೇಸರದ ಸಂಗತಿಯಾಗಿದೆ. ಒಟ್ಟಾರೆ ಕಳೆದ 47 ವರ್ಷಗಳ ಕಾಲ ನಿರಂತರವಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದ್ದ ಮೋತಿ ಹೋಟೆಲ್ ಇನ್ನು ನೆನಪು ಮಾತ್ರ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.