ಬೆಂಗಳೂರು: ಹಾಸನ ಜಿಲ್ಲಾ ಪಂಚಾಯತ್ನಿಂದ ಜಿಲ್ಲಾ ಆಯುಷ್ ಇಲಾಖೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದೆ. ವೈದ್ಯಕೀಯ ಮತ್ತು ಅರೆವೈದ್ಯಕೀಯ ಹುದ್ದೆಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಕಾತಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಸಕಲೇಶಪುರ ಮತ್ತು ಅರಸೀಕೆರೆ ಆಸ್ಪತ್ರೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗಿದೆ.
ಹುದ್ದೆಗಳ ವಿವರ:
- ಸ್ಪೆಷಲಿಸ್ಟ್ ಡಾಕ್ಟರ್ (ಆಯುಷ್) - 1
- ಸ್ಪೆಷಲಿಸ್ಟ್ ಡಾಕ್ಟರ್ (ಬಿಎನ್ವೈಎಸ್) - 1
- ಫಾರ್ಮಸಿಸ್ಟ್ - 5
- ಮಸಾಜಿಸ್ಟ್ - 2
- ಮಲ್ಟಿ ಪರ್ಪಸ್ ವರ್ಕರ್ - 1
- ಸಮುದಾಯ ಆರೋಗ್ಯ ಅಧಿಕಾರಿ - 3
ವಿದ್ಯಾರ್ಹತೆ: ಸ್ಪೆಷಲಿಸ್ಟ್ ಡಾಕ್ಟರ್ (ಆಯುಷ್) - ಬಿಎಎಂಎಸ್, ಎಂಎಸ್, ಎಂಡಿ ಸ್ಪೆಷಲಿಸ್ಟ್ ಡಾಕ್ಟರ್ (ಬಿಎನ್ವೈಎಸ್) - ಬಿಎನ್ವೈಎಸ್, ಸ್ನಾತಕೋತ್ತರ ಪದವಿ ಫಾರ್ಮಸಿಸ್ಟ್ - 10ನೇ ತರಗತಿ, ಡಿಪ್ಲೊಮಾ ಮಸಾಜಿಸ್ಟ್ - 7ನೇ ತರಗತಿಮಲ್ಟಿ ಪರ್ಪಸ್ ವರ್ಕರ್ - 10ನೇ ತರಗತಿಸಮುದಾಯ ಆರೋಗ್ಯ ಅಧಿಕಾರಿ - ಬಿಎಎಂಎಸ್, ಬಿಯುಎಂಎಸ್
ವಯೋಮಿತಿ: ಕನಿಷ್ಠ 18 ವರ್ಷ ಮತ್ತು ಗರಿಷ್ಠ 28 ವರ್ಷ ವಯೋಮಿತಿ. ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪ್ರವರ್ಗ 2ಎ, 2ಬಿ, 3ಎ ಮತ್ತು 3 ಬಿ ಅಭ್ಯರ್ಥಿಗಳಿಗೆ 3 ವರ್ಷ ವಯೋಮಿತಿ ಸಡಿಲಿಕೆ ಇದೆ.
ಆಯ್ಕೆ: ಮೆರಿಟ್ ಮತ್ತು ಸಂದರ್ಶನದ ಮೂಲಕ ಆಯ್ಕೆ.
ಅರ್ಜಿ ಸಲ್ಲಿಕೆ ವಿಧಾನ: ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಧಿಕೃತ ಅಧಿಸೂಚನೆಯ ಜೊತೆಯಲ್ಲಿ ಜಿಲ್ಲಾಡಳಿತದ ವೆಬ್ಸೈಟ್ನಲ್ಲಿ ನೀಡಲಾಗಿರುವ ನಿಗದಿತ ಅರ್ಜಿಯನ್ನು ಭರ್ತಿ ಮಾಡಿ, ಅಗತ್ಯ ಶೈಕ್ಷಣಿಕ ದಾಖಲಾತಿ, ಮೀಸಲಾತಿ ಪ್ರಮಾಣ ಸೇರಿದಂತೆ ಇನ್ನಿತರ ಪ್ರಮಾಣಪತ್ರಗಳನ್ನು ಸೇರಿಸಿ ಈ ಕೆಳಗಿನ ವಿಳಾಸಕ್ಕೆ ಸಲ್ಲಿಕೆ ಮಾಡಬೇಕಿದೆ. ಕಾರ್ಯದರ್ಶಿಗಳು, ಜಿಲ್ಲಾ ಆಯುಷ್ ಅಧಿಕಾರಿಗಳು, ಹೊಸಲೈನ್ ರೋಡ್, ಹಾಸನ- 573201
ನವೆಂಬರ್ 29ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಡಿಸೆಂಬರ್ 28 ಕಡೆಯ ದಿನಾಂಕ. ಈ ಕುರಿತ ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hassanzp.kar.nic.in ಇಲ್ಲಿಗೆ ಭೇಟಿ ನೀಡಬಹುದು.
ಇದನ್ನೂ ಓದಿ: ಯುಪಿಎಸ್ಸಿಯಿಂದ ಎನ್ಡಿಎ ನೇಮಕಾತಿ: ಸೇನೆ ಸೇರ ಬಯಸುವ ಅಭ್ಯರ್ಥಿಗಳಿಗೆ ಸುವರ್ಣಾವಕಾಶ