ಹಾಸನ: ಕಳೆದ 11ದಿನಗಳಿಂದ ಕೇವಲ ಗಣ್ಯಾತಿಗಣ್ಯ ವ್ಯಕ್ತಿಗಳಿಗೆ ಮಾತ್ರ ದರ್ಶನಭಾಗ್ಯ ನೀಡಿದ್ದ ಹಾಸನಾಂಬೆ ಈ ಬಾರಿ ಕೊನೆಯ ದಿನ ಸಾರ್ವಜನಿಕರಿಗೂ ದರ್ಶನ ಸಿಗುವ ಹಾಗೆ ಮಾಡಿರುವುದಕ್ಕೆ ಜಿಲ್ಲಾಡಳಿತ ಮತ್ತು ಹಾಸನಾಂಬ ಆಡಳಿತ ಮಂಡಳಿಗೆ ಸಾರ್ವಜನಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
![Hasanamba Temple closed again after 12 days](https://etvbharatimages.akamaized.net/etvbharat/prod-images/kn-hsn-02-hasanamba-last-day-pkg-7203289_16112020122628_1611f_00748_910.jpg)
ಕೋವಿಡ್ 19 ರ ಹಿನ್ನೆಲೆ ಮುನ್ನೆಚ್ಚರಿಕಾ ಕ್ರಮದೊಂದಿಗೆ ದರ್ಶನದ ವ್ಯವಸ್ಥೆ ಕಲ್ಪಿಸಿಕೊಡಲಾಗಿತ್ತು. ಈ ಬಾರಿ ನಮಗೆ ದರ್ಶನ ಸಿಗುವುದೇ ಇಲ್ಲ ಎಂದುಕೊಂಡಿದ್ದೆವು. ಆದರೆ, ದರ್ಶನ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಭಕ್ತರು ಹರ್ಷ ವ್ಯಕ್ತಪಡಿಸಿದ್ದಾರೆ.
![Hasanamba Temple closed again after 12 days](https://etvbharatimages.akamaized.net/etvbharat/prod-images/kn-hsn-02-hasanamba-last-day-pkg-7203289_16112020122636_1611f_00748_505.jpg)
ಸಾಮಾಜಿಕ ಅಂತರ ಮತ್ತು ಕೋವಿಡ್ 19ರ ನಿಯಮಗಳನ್ನು ಪಾಲಿಸದೇ ದರ್ಶನಕ್ಕೆ ಯಾರೂ ಬರಬಾರದು, ಸಾಮಾಜಿಕ ಅಂತರದೊಂದಿಗೆ ದರ್ಶನ ಮಾಡಬೇಕು ಎಂಬುದು ನನ್ನ ಭಾವನೆ. ಮುಂದೆ ಇಂತಹ ಯಾವುದೇ ಮಾರಣಾಂತಿಕ ಕಾಯಿಲೆ ಜಗತ್ತಿಗೆ ಬಾರದಿರಲಿ, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಬರೋಣ ಎಂದು ನಾನು ವೈಯಕ್ತಿಕವಾಗಿ ಪ್ರಾರ್ಥನೆ ಮಾಡಿದ್ದೇನೆ ಎಂದು ಭಕ್ತರೊಬ್ಬರು ತಮ್ಮ ಹರಕೆ ಹೇಳಿಕೊಂಡರು.
![Hasanamba Temple closed again after 12 days](https://etvbharatimages.akamaized.net/etvbharat/prod-images/kn-hsn-02-hasanamba-last-day-pkg-7203289_16112020122636_1611f_00748_249.jpg)
ಕೊನೆಯ ದರ್ಶನದ ವೇಳೆ ಜಿಲ್ಲಾಡಳಿತ ಮೊದಲಿಗೆ ದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಅಂತ ಹೇಳುವ ಮೂಲಕ ಆತಂಕ ಸೃಷ್ಟಿಸಿತ್ತು. ನಂತರ ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ ಜಿಲ್ಲಾಡಳಿತಕ್ಕೆ ಮನವಿ ಮಾಡಿಕೊಂಡಿದ್ದರಿಂದ ರಾತ್ರಿ 12ಗಂಟೆ ನಂತರ ಮತ್ತೆ ದರ್ಶನದ ವ್ಯವಸ್ಥೆ ಮಾಡಲಾಯಿತು. ದರ್ಶನಕ್ಕೆ ಬಂದಂತಹ ಭಕ್ತಗಣ ಮತ್ತೆ ಖುಷಿಯಿಂದ ದರ್ಶನ ಮಾಡಿ ಸಂಪನ್ನರಾದರು.
![Hasanamba Temple closed again after 12 days](https://etvbharatimages.akamaized.net/etvbharat/prod-images/kn-hsn-02-hasanamba-last-day-pkg-7203289_16112020122636_1611f_00748_619.jpg)
ಕೊರೊನಾ ಹಿನ್ನೆಲೆ ಕೇವಲ 12 ದನಕ್ಕೆ ಮಾತ್ರ ಮೀಸಲಿಟ್ಟಿದ್ದರಿಂದ ಈ ಸಾರಿ ಸ್ವಲ್ಪ ಸಂಪ್ರದಾಯವನ್ನು ಬದಲಾಯಿಸಿಕೊಳ್ಳಲಾಯಿತು. ಪ್ರತಿ ವರ್ಷದಂತೆ ನಡೆಯುತ್ತಿದ್ದ ಸಂಪ್ರದಾಯವನ್ನು ಈ ಸಾರಿ ಬದಿಗೆ ತಳ್ಳಿ ಬಾಗಿಲನ್ನು ಮುಚ್ಚಲಾಯಿತು. ಇದರಿಂದ ಸ್ವಲ್ಪ ಅರ್ಚಕರ ಕುಟುಂಬ ಆತಂಕ ವ್ಯಕ್ತಪಡಿಸಿದೆ.