ಹಾಸನ: ಲಾಕ್ಡೌನ್ ಹಿನ್ನೆಲೆಯಲ್ಲಿ ರಸ್ತೆಯಲ್ಲಿ ಅನವಶ್ಯಕವಾಗಿ ಓಡಾಡುವ ಬೈಕ್ ಸವಾರರಿಗೆ ಹಾಸನ ಎಸ್ಪಿ ಶ್ರೀನಿವಾಸ ಗೌಡ ದಂಡ ವಿಧಿಸಿ ಎಚ್ಚರಿಕೆ ನೀಡಿದ್ದಾರೆ.
ಅನಗತ್ಯವಾಗಿ ರಸ್ತೆಗಿಳಿದವರ ವಾಹನಗಳನ್ನು ಸೀಜ್ ಮಾಡಿದ್ದು, ಸರ್ಕಾರದ ಆದೇಶ ಮೀರಿ ರಸ್ತೆಯಲ್ಲಿ ಸಂಚರಿಸುತ್ತಿದ್ದವರ ವಿರುದ್ಧ ನಿಯಮ ಬಾಹಿರ ಚಟುವಟಿಕೆ ಆಧಾರದಲ್ಲಿ ಕೇಸ್ ದಾಖಲಿಸಿದ್ದಾರೆ. ಮೇ 3ರವರೆಗೆ ರಸ್ತೆಗಿಳಿಯದಂತೆ ವಾರ್ನಿಂಗ್ ನೀಡಿದ್ದು ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಸ್ಥಳದಲ್ಲೇ 500, 1000 ರೂ. ದಂಡ ವಿಧಿಸಿದ್ದಾರೆ.
ಈ ವೇಳೆ ಜಿಲ್ಲಾಧಿಕಾರಿ ಆರ್. ಗಿರೀಶ್ ವಾಹನ ತಪಾಸಣಾ ಸ್ಥಳಕ್ಕೆ ಭೇಟಿ ನೀಡಿ, ವಾಹನಗಳನ್ನು ಹೆಚ್ಚು ಸೀಜ್ ಮಾಡಬೇಡಿ. ಮತ್ತೆ ಬಿಡಿಸಿಕೊಳ್ಳಲು ಜನರು ಓಡಾಡುತ್ತಾರೆ. ಅವರಿಗೆ ಸ್ಥಳದಲ್ಲೇ ದಂಡ ವಿಧಿಸಿ ಎಂದು ಆದೇಶ ನೀಡಿದರು.