ಹಾಸನ: ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ಯಾರೂ ಅಡ್ಡಿಪಡಿಸಬಾರದು. ಸೂಕ್ತ ಅವಕಾಶ ಕಲ್ಪಿಸಬೇಕೆಂದು ಕಾಂಗ್ರೆಸ್ ಮುಖಂಡ ಬಿ.ಕೆ. ರಂಗಸ್ವಾಮಿ ಮನವಿ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರು ಬೆಳೆದ ಬೆಳೆಯನ್ನು ಮಾರಾಟ ಮಾಡಲು ತಡೆ ಮಾಡಬಾರದು. ಮಾಡಿದರೆ ನೇರವಾಗಿ ಸಿಎಂಗೆ ಕರೆ ಮೂಲಕ ತಿಳಿಸುವ ವ್ಯವಸ್ಥೆ ಮಾಡಬೇಕು. ಹಾಸನ ಜಿಲ್ಲೆ ಮಾದರಿ ಜಿಲ್ಲೆ ಆಗಲು ಜಿಲ್ಲೆಯಲ್ಲಿರುವ ರೈತರ ಬೆಳೆ ಸಾಗಣಿಕೆಗೆ ಅವಕಾಶ ಕಲ್ಪಿಸಬೇಕು ಎಂದರು.
ಕಂದಾಯ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ರೈತರು ಬೆಳೆದ ಬೆಳೆಯನ್ನು ದಾರಿಯಲ್ಲಿಯೇ ತಡೆದು ವಾಪಸ್ ಕಳುಹಿಸುವ ಪ್ರಕ್ರಿಯೇ ನಿಲ್ಲಿಸುವಂತೆ ಮನವಿ ಮಾಡಿದರು.
ರೈತರು ಬೆಳೆದ ಬೆಳೆಯನ್ನು ಸಮರ್ಪಕವಾಗಿ ಮಾರಾಟವಾಗಬೇಕು. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ಇಡೀ ದೇಶದ ಸುರಕ್ಷತೆ ಮುಖ್ಯ. ಕೂಲಿ ಕಾರ್ಮಿಕರಿಗೆ, ಬಡವರ ನೆರವಿಗೆ ಮುಂದಾಗಬೇಕು. ಬಡವರನ್ನು, ನಿರ್ಗತಿಕರನ್ನು ಗುರುತಿಸಿ ಕೆಲ ದಿನಗಳಲ್ಲಿ ಫುಡ್ ಕಿಟ್ ನೀಡಲಾಗುವುದು ಎಂದರು.
ಅಲ್ಲದೇ ಕೊರೊನಾ ನಿಯಂತ್ರಿಸುವಲ್ಲಿ ಎಲ್ಲರೂ ಸಹಕರಿಸಿದ್ದಾರೆ ಎಂದು ಇದೆ ವೇಳೆ, ನೆನಪಿಸಿಕೊಂಡರು.