ETV Bharat / state

ಇತಿಹಾಸ ಪ್ರಸಿದ್ಧ ಹಾಸನಾಂಬೆ ದರ್ಶನ ಭಾಗ್ಯಕ್ಕೆ ಕ್ಷಣಗಣನೆ

author img

By

Published : Oct 17, 2019, 11:42 AM IST

Updated : Oct 17, 2019, 12:11 PM IST

ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದ್ದು, ದೇವಾಲಯ ತೆರೆದ ತಕ್ಷಣವೇ ಪೂಜಾ ಕೈಂಕರ್ಯಗಳು ನೆರವೇರಲಿವೆ. ಭಕ್ತರಿಗೆ ದೇವಿಯ ದರ್ಶನ ಭಾಗ್ಯವೂ ಸಿಗಲಿದೆ.

ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲ ಬಾಗಿಲು ತೆರೆಯಲು ಕ್ಷಣಗಣನೆ

ಹಾಸನ: ಸಾವಿರಾರು ಭಕ್ತರು ಅತ್ಯಂತ ಕಾತುರದಿಂದ ಕಾಯುತ್ತಿರುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲದ ಬಾಗಿಲು ತೆರೆಯಲು ಕ್ಷಣಗಣನೆ ಆರಂಭವಾಗಿದ್ದು, ದೇವಿಯ ಒಡವೆಗಳನ್ನು ದೇವಾಲಯದೊಳಗೆ ಪೂಜಾ ವಿಧಿವಿಧಾನಗಳ ಮೂಲಕ ಕೊಂಡೊಯ್ಯಲಾಯಿತು.

ಇತಿಹಾಸ ಪ್ರಸಿದ್ಧ ಹಾಸನಾಂಬೆ ದರ್ಶನ ಭಾಗ್ಯಕ್ಕೆ ಕ್ಷಣಗಣನೆ

ಹಾಸನಾಂಬೆ ದೇವಾಲಯವನ್ನು ವಿವಿಧ ಹೂವುಗಳಿಂದ ವಿಶೇಷ ರೀತಿಯಲ್ಲಿ ಅಲಂಕರಿಸಲಾಗಿದೆ. ದರ್ಶನಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಕಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಅಶ್ವಯುಜ ಮಾಸದ ಪೌರ್ಣಮಿಯ ನಂತರ ಬರುವ ಗುರುವಾರದಂದು ದೇಗುಲದ ಬಾಗಿಲು ತೆರೆದು ದೇವಿಯ ದರ್ಶನಕ್ಕೆ 11 ದಿನಗಳ ಕಾಲ ಅವಕಾಶವಿರುತ್ತದೆ.

ಪ್ರತೀ ವರ್ಷದಂತೆ ಈ ಬಾರಿಯೂ ಗುರುವಾರ ಮಧ್ಯಾಹ್ನ 12.30 ಕ್ಕೆ ದೇಗುಲದ ಬಾಗಿಲು ತೆರೆಯುವ ಹಿನ್ನೆಲೆ ಜಿಲ್ಲಾಧಿಕಾರಿ ಆರ್. ಗಿರೀಶ್, ದೇಗುಲ ಆಡಳಿತಾಧಿಕಾರಿ ಡಾ. ನಾಗರಾಜ್, ನೂತನ ಎ.ಸಿ ನವೀನ್ ಭಟ್, ತಹಶೀಲ್ದಾರ್ ಮೇಘನಾ ಸೇರಿದಂತೆ ಹಲವು ಅಧಿಕಾರಿಗಳು ಅಂತಿಮ ಹಂತದ ಸಿದ್ಧತಾಕಾರ್ಯದಲ್ಲಿ ನಿರತರಾಗಿದ್ದಾರೆ.

Intro:ಹಾಸನ : ಸಾವಿರಾರು ಭಕ್ತರು ಕಾತುರದಿಂದ ಕಾಯುತ್ತಿರುವ ಇತಿಹಾಸ ಪ್ರಸಿದ್ಧ ಹಾಸನಾಂಬೆ ದೇಗುಲ ಬಾಗಿಲು ತೆಗೆದು ಕ್ಷಣಗಣನೆ ಆರಂಭವಾಗಿದ್ದು, ಪೂಜಾಕೈಂಕರ್ಯಗಳು ನೆರವೇರಲಿವೆ.

11 ದಿನ ಭಕ್ತರಿಗೆ ದರ್ಶನ ಅವಕಾಶವಿದ್ದು ವರ್ಷಕ್ಕೊಮ್ಮೆ ಆಶ್ವಯುಜ ಮಾಸದ ಪೌರ್ಣಮಿಯ ನಂತರ ಬರುವ ಗುರುವಾರದಂದು ಬಾಗಿಲು ತೆರೆಯಲಿದೆ.

ದೇವಾಲಯನ್ನು ವಿವಿಧ ಹೂವುಗಳಿಂದ ಅಲಂಕರಿಸಲಾಗಿದೆ. ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ.

ಗುರುವಾರ ಮಧ್ಯಾಹ್ನ 12.30 ಕ್ಕೆ ದೇಗುಲ ಬಾಗಿಲು ತೆರೆಯುವ ಹಿನ್ನೆಲೆಯಲ್ಲಿ ಅಂತಿಮ ಹಂತದ ಸಿದ್ಧತೆಯನ್ನು ಜಿಲ್ಲಾಧಿಕಾರಿ ಆರ್. ಗಿರೀಶ್, ದೇಗುಲ ಆಡಳಿತಾಧಿಕಾರಿ ಡಾ. ನಾಗರಾಜ್ ನೂತನ ಎ.ಸಿ ನವೀನ್ ಭಟ್, ತಾಶಿಲ್ದಾರ್ ಮೇಘನಾ ಸೇರಿದಂತೆ ಹಲವು ಅಧಿಕಾರಿಗಳು ಪರಿಶೀಲನೆ ನಡೆಸಿ ಸಿಬ್ಬಂದಿಗೆ ಹಾಸನಾಂಬ ಕರ್ತವ್ಯ ನಿಯೋಜನೆ ಮಾಡಿದರು.

ಹಾಸನಾಂಬ ದೇವಿಯ ಒಡವೆಗಳನ್ನು ದೇವಾಲಯದೊಳಗೆ ಪೂಜಾ ವಿಧಿ ವಿಧಾನಗಳ ಮೂಲಕ ಕೊಂಡೊಯ್ಯಲಾಯಿತು.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.

Body:0

Conclusion:0
Last Updated : Oct 17, 2019, 12:11 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.