ETV Bharat / state

ಹಾಸನ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾದ ಜಿಲ್ಲೆಯ ಟ್ಯಾಕ್ಸಿ ಸ್ಟ್ಯಾಂಡ್... ತಲೆನೋವಾದ ನಾಯಕರ ಫೋಟೊಗಳು

ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲೆಯ ಶಾಸಕ ಪ್ರೀತಂ ಜೆ .ಗೌಡ ಶಾಸಕರ ನಿಧಿಯಡಿ ಟ್ಯಾಕ್ಸಿ ಸ್ಟ್ಯಾಂಡ್ ನಿರ್ಮಾಣ ಮಾಡಲಾಗಿದ್ದು, ಸಹಜವಾಗಿಯೇ ಅಲ್ಲಿ ಕೊಡುಗೆ ನೀಡಿದ ಶಾಸಕ ಪ್ರೀತಂ ಜೆ ಗೌಡ ಎಂದು ಅವರ ಭಾವಚಿತ್ರವನ್ನು ಹಾಕಲಾಗಿದೆ. ಆದರೆ ಇದರ ಪಕ್ಕದಲ್ಲೇ ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್. ಡಿ .ದೇವೇಗೌಡ ಭಾವಚಿತ್ರವನ್ನು ಹಾಕಲಾಗಿದ್ದು, ಇದೀಗ ಇದು ಬಿಜೆಪಿಯನ್ನು ಪೆಚ್ಚಿಗೆ ಸಿಲುಕುವಂತೆ ಮಾಡಿದೆ.

taxi stand
author img

By

Published : Sep 6, 2019, 10:24 AM IST

ಹಾಸನ: ನಗರದ ಹೇಮಾವತಿ ಪ್ರತಿಮೆ ಬಳಿ ನಿರ್ಮಾಣವಾಗಿರುವ ಟ್ಯಾಕ್ಸಿ ಸ್ಟ್ಯಾಂಡ್ ಮತ್ತೆ ಸುದ್ದಿಯಲ್ಲಿದ್ದು, ಜೆಡಿಎಸ್, ಬಿಜೆಪಿ ನಡುವಿನ ರಾಜಕೀಯ ತಿಕ್ಕಾಟದ ವೇದಿಕೆಯಾಗಿ ಮಾರ್ಪಟ್ಟಿದೆ.

ನಗರದ ಹೇಮಾವತಿ ಪ್ರತಿಮೆ ಬಳಿ ಜಿಲ್ಲೆಯ ಶಾಸಕ ಪ್ರೀತಂ ಜೆ .ಗೌಡ ಶಾಸಕರ ನಿಧಿಯಡಿ ಟ್ಯಾಕ್ಸಿ ಸ್ಟ್ಯಾಂಡ್ ನಿರ್ಮಾಣ ಮಾಡಲಾಗಿದ್ದು, ಸಹಜವಾಗಿಯೇ ಅಲ್ಲಿ ಕೊಡುಗೆ ನೀಡಿದ ಶಾಸಕ ಪ್ರೀತಂ ಜೆ ಗೌಡ ಎಂದು ಅವರ ಭಾವಚಿತ್ರವನ್ನು ಹಾಕಲಾಗಿದೆ.

ನಗರದ ಹೇಮಾವತಿ ಪ್ರತಿಮೆ ಬಳಿ ನಿರ್ಮಾಣವಾಗಿರುವ ಟ್ಯಾಕ್ಸಿ ಸ್ಟ್ಯಾಂಡ್

ಆದರೆ ಈಗಿರುವ ನಾಮಫಕಲಕ ಪಕ್ಕದಲ್ಲಿ ಮತ್ತೊಂದು ನಾಮಫಲಕವನ್ನು ಹಾಕಲು ಸಿದ್ಧತೆ ನಡೆಸಲಾಗಿತ್ತು. ಇದನ್ನು ಸಹಿಸಲಾಗದ ಜೆಡಿಎಸ್ ಬೆಂಬಲಿತ ಟ್ಯಾಕ್ಸಿ ಚಾಲಕರು ಪ್ರೀತಮ್ ಜೆ ಗೌಡರ ಫೋಟೋ ಹಾಕಲೆಂದು ಮೀಸಲಿರಿಸಿದ್ದ ಸ್ಥಳದಲ್ಲಿ ಪ್ರಜ್ವಲ್ ರೇವಣ್ಣರ ಫೋಟೋ ಹಾಕಿದರೆ ಕಿತ್ತಾಟ ಆಗುತ್ತದೆ ಎಂದು ಮಾಜಿ ಪ್ರಧಾನಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್. ಡಿ .ದೇವೇಗೌಡ ಭಾವಚಿತ್ರವನ್ನು ಹಾಕಲಾಗಿದೆ. ಇದೀಗ ಇದು ಬಿಜೆಪಿಯನ್ನು ಪೆಚ್ಚಿಗೆ ಸಿಲುಕುವಂತೆ ಮಾಡಿದೆ.

ಈ ಹಿಂದೆ ಜಿಲ್ಲೆಯ ಜನಪರ ಜಿಲ್ಲಾಧಿಕಾರಿ ಎಂದೆ ಹೆಸರಾಗಿದ್ದ ಡಿಸಿ ಅಕ್ರಂಪಾಷ ಅವರು ಇದೇ ಸ್ಥಳದ ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಟ್ಯಾಕ್ಸಿ ಸ್ಟಾಂಡ್​ಗೆ ಮೇಲ್ಚಾವಣಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಕ್ಕೆ ವರ್ಗಾವಣೆ ಮಾಡಿಸಲಾಯಿತು ಎಂಬ ಮಾತುಗಳು ಕೇಳಿ ಬಂದಿದ್ದವು.

Intro:ಹಾಸನ : ನಗರದ ಹೇಮಾವತಿ ಪ್ರತಿಮೆ ಬಳಿ ನಿರ್ಮಾಣವಾಗಿರುವ ಟ್ಯಾಕ್ಸಿ ಸ್ಟ್ಯಾಂಡ್ ಜೆಡಿಎಸ್ ಹಾಗೂ ಬಿಜೆಪಿ ನಡುವಿನ ರಾಜಕೀಯ ಮೇಲಾಟಕ್ಕೆ ವೇದಿಕೆಯಾಗಿದ್ದು, ಫೋಟೋ ಕಿತ್ತಾಟ ಇಂದೂ ಸಹ ಮುಂದುವರಿದಿದೆ.

Body:ಹೌದು... ನಗರದ ಹೇಮಾವತಿ ಪ್ರತಿಮೆ ಬಳಿ ಹಾಸನದ ಶಾಸಕ ಪ್ರೀತಂ ಜೆ ಗೌಡ ಶಾಸಕರ ನಿಧಿಯಡಿ ಟ್ಯಾಕ್ಸಿ ಸ್ಟ್ಯಾಂಡ್ ನಿರ್ಮಾಣ ಮಾಡಲಾಗಿದ್ದು, ಸಹಜವಾಗಿಯೇ ಅಲ್ಲಿ ಕೊಡುಗೆ ಶಾಸಕ ಪ್ರೀತಂ ಜೆ ಗೌಡ ಅಂತ ಹಾಕಲಾಗಿದೆ, ಜೊತೆಗೆ ಪಕ್ಕದಲ್ಲೊಂದು ಅವರ ಫೋಟೋ ಸಹ ಹಾಕಲಾಗಿದೆ. ಇದು ಸತ್ಯ ಹಲವು ರಾಜಕೀಯ ಬೆಳವಣಿಗೆಗೆ ವೇದಿಕೆಯಾಗಿ ನಿರ್ಮಾಣವಾಗಿದೆ.

ನಗರದ ಹೃದಯ ಭಾಗದಲ್ಲಿ ರಾರಾಜಿಸುತ್ತಿರುವ ಶಾಸಕರ ನಾಮಫಲಕ ಹಾಗೂ ಫೋಟೋ ಸ್ಥಳೀಯ ಜೆಡಿಎಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಕಣ್ಣು ಕುಕ್ಕುವಂತೆ ಮಾಡಿದ್ದಂತೂ ಸುಳ್ಳಲ್ಲ. ಇದೇ ಕಾರಣಕ್ಕೆ ಬಿಜೆಪಿ ಶಾಸಕ ಪ್ರೀತಮ್ ಜೆ ಗೌಡ್ರಿಗೆ ಪೈಪೋಟಿ ನೀಡಲು ಸಂಸದ ಪ್ರಜ್ವಲ್ ರೇವಣ್ಣ ಪಕ್ಕದಲ್ಲಿ ನಿರ್ಮಾಣವಾಗದೇ ಇದ್ದ ಮತ್ತೊಂದು ಬದಿಯಲ್ಲಿ ತಮ್ಮ ಸಂಸದರ ನಿಧಿಯಿಂದ ಹಣ ಬಿಡುಗಡೆ ಮಾಡಿ ತಮ್ಮ ಫೋಟೋ ಹಾಕಿಸಿಕೊಳ್ಳುವ ಹುಮ್ಮಸ್ಸಿನಲ್ಲಿದ್ರು, ಆದರೆ ವಿಷಯ ತಿಳಿದ ಶಾಸಕ ಪ್ರೀತಮ್ ಜೆ ಗೌಡ ಪ್ರಜ್ವಲ್ ರೇವಣ್ಣ ಭೂಮಿಪೂಜೆ ನಿಗದಿಗೊಳಿಸಿದ ದಿನವೇ ಮುಂದುವರೆದ ಕಾಮಗಾರಿಯ ಅಂತಾ ಹೇಳಿ ತಮ್ಮ ಸಂತ ಹಣದಿಂದಲೇ ಪ್ರಾರಂಭಿಸುವ ಮೂಲಕ ಪಕ್ಕದಲ್ಲಿ ತಮ್ಮ ನಾಯಕ ಪ್ರಜ್ವಲ್ ರೇವಣ್ಣ ಅವರ ಫೋಟೋ ಹಾಕಿ ಉತ್ಸಾಹಕ್ಕೆ ನಿರಾಸೆಯನ್ನುಂಟು ಮಾಡಿದ್ರು, ಅಷ್ಟೇ ಅಲ್ಲದೆ ಈಗಾಗಲೇ ಹಾಕಲಾಗಿರುವ ನಾಮಫಲಕದ ಮತ್ತೊಂದು ಬದಿಯಲ್ಲಿ ಮತ್ತೊಂದು ನಾಮಫಲಕವನ್ನಾಕಲು ಬೋರ್ಡ್ ಸಿದ್ಧಪಡಿಸಿ ಬಿಳಿಬಣ್ಣವನ್ನು ಹಾಕಲಾಗಿತ್ತು. ಆದರೆ ಇದನ್ನು ಸಹಿಸಲಾಗದ ಜೆಡಿಎಸ್ ಬೆಂಬಲಿತ ಟ್ಯಾಕ್ಸಿ ಚಾಲಕರು ಪ್ರೀತಮ್ ಜೆ ಗೌಡರ ಫೋಟೋ ಹಾಗೂ ನಾಮಫಲಕ ಹಾಕಲೆಂದು ಮೀಸಲಿರಿಸಿದ್ದ ಸ್ಥಳದಲ್ಲಿ ಪ್ರಜ್ವಲ್ ರೇವಣ್ಣ ಅವರ ಫೋಟೋ ಹಾಕಿದ್ರೆ ಕಿತ್ತಾಬಹುದಂತಾ ಮಾಜಿ ಪ್ರಧಾನಿಗಳ ಭಾವಚಿತ್ರವನ್ನಾಕಿ ಇದೀಗ ಬಿಜೆಪಿ ಗರನೇ ಪೆಚ್ಚಿಗೆ ಸಿಲುಕುವಂತೆ ಮಾಡಿದ್ದಾರೆ.

ಕಾರು ನಿಲ್ದಾಣದ ಸ್ಥಳವನ್ನು ಮೀಸಲಿರಿಸಿ ಕೊಟ್ಟ ಮಾಜಿ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ಹೆಚ್ ಡಿ ದೇವೇಗೌಡ ರವರು ಅಂತ ಪ್ಲಾಸ್ಟಿಕ್ ಬ್ಯಾನರ್ ಹಾಕಿ ಪಕ್ಕದಲ್ಲಿ ದೇವೇಗೌಡರ ಫೋಟೋವನ್ನು ಸಹ ಹಾಕಲಾಗಿದೆ.

ಇನ್ನು ಈ ಹಿಂದೆ ಜಿಲ್ಲೆಯ ಜನಪದ ಜಿಲ್ಲಾಧಿಕಾರಿ ಎಂದೇ ಹೆಸರಾಗಿದ್ದ ಡಿಸಿ ಅಕ್ರಂಪಾಷ ಅವರು ಇದೆ ಸ್ಥಳದ ವಿಚಾರವಾಗಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಟ್ಯಾಕ್ಸಿ ಸ್ಟಾಂಡ್ ಗೆ ಮೇಲ್ಚಾವಣಿ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಕ್ಕೆ ವರ್ಗಾವಣೆ ಮಾಡಿಸಲಾಯಿತು ಎಂಬ ಮಾತುಗಳು ಕೇಳಿ ಬಂದಿದ್ವು.

Conclusion:ಒಟ್ಟಿನಲ್ಲಿ ಸರ್ಜಾ ನಿರ್ಮಾಣವಾಗಿರುವ ಟ್ಯಾಕ್ಸಿ ಸ್ಟಾಂಡ್ ರಾಜಕೀಯ ಜಿದ್ದಾಜಿದ್ದಿಗೆ ವೇದಿಕೆಯಾಗಿದ್ದು ಇದು ಎಲ್ಲಿಗೆ ಹೋಗಿ ನಿಲ್ಲಲಿದೆ ಎಂಬುದನ್ನು ಕಾದುನೋಡಬೇಕಾಗಿದೆ.

- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.