ETV Bharat / state

ಸೋಮೇಶ್ವರ ದೇವಾಲಯದ ಮೂರ್ತಿಗಳ ಕೆಡವಿ ಕಿಡಿಗೇಡಿಗಳಿಂದ ನಿಧಿಗಾಗಿ ಶೋಧ - ಸೋಮೇಶ್ವರ ದೇವಾಲಯ

ಗುಂಡಿ ತೋಡಲಾಗಿದ್ದ ಸ್ಥಳದಲ್ಲಿ ಹೂವು, ವೀಳ್ಯದೆಲೆ ಮುಂತಾದ ಸಾಮಗ್ರಿಗಳು ಸಿಕ್ಕಿವೆ. ನಿಧಿ ಶೋಧಕ್ಕಿಂತ ಮೊದಲು ಪೂಜೆ ಮಾಡಿರಬಹುದು ಎನ್ನಲಾಗಿದ್ದು, ಎರಡು ದಿನಗಳ ಹಿಂದೆ ಈ ಕೃತ್ಯ ನಡೆದಿದೆ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

demolition-of-the-idols-of-someshwara-temple-for-treasury
ಸೋಮೇಶ್ವರ ದೇವಾಲಯದ ಮೂರ್ತಿಗಳ ಕೆಡವಿ ನಿಧಿಗಾಗಿ ಶೋಧ ನಡೆಸಿದ ಕಿಡಿಗೇಡಿಗಳು
author img

By

Published : Mar 10, 2021, 10:46 PM IST

ಹಾಸನ: ಆಲೂರು ತಾಲೂಕಿನ ಕಸಬಾ ಹೋಬಳಿ ಬಂಡಿ ತಿಮ್ಮನಹಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಪುರಾತನ ಸೋಮೇಶ್ವರ ಸ್ವಾಮಿ (ಈಶ್ವರ) ದೇವಸ್ಥಾನದಲ್ಲಿ ನಿಧಿಗಾಗಿ ದುಷ್ಕರ್ಮಿಗಳು ಶೋಧ ನಡೆಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಈ ದೇವಾಲಯವನ್ನು ಯಗಚಿ ನದಿ ದಡದಲ್ಲಿ 11-12ನೇ ಶತಮಾನದಲ್ಲಿ ಚಾಲುಕ್ಯರು ಹಾಗೂ ವಿಜಯನಗರ ಅರಸರು ನಿರ್ಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ದೇವಾಲಯದ ಆವರಣದಲ್ಲಿ ಸುಂದರವಾದ ಕಲ್ಲಿನ ಈಶ್ವರ ಲಿಂಗಗಳಿದ್ದು, ಗರ್ಭಗುಡಿಯ ಹಾಗೂ ಮುಂಭಾಗದಲ್ಲಿದ್ದ ಕಲ್ಲಿನ ಗಣೇಶ ಮೂರ್ತಿ ಹಾಗೂ ಈಶ್ವರ ಲಿಂಗಗಳನ್ನು ಕೆಡವಿ ಅದರಡಿ ಕಲ್ಲುಗಳನ್ನು ತೆಗೆದು ಕಳ್ಳರು ನಿಧಿಗಾಗಿ 15 ಅಡಿ ಆಳದ ಗುಂಡಿ ತೋಡಿ ಹುಡುಕಾಟ ನಡೆಸಿದ್ದಾರೆ.

ಗುಂಡಿ ತೋಡಲಾಗಿದ್ದ ಸ್ಥಳದಲ್ಲಿ ಹೂವು, ವೀಳ್ಯದೆಲೆ ಮುಂತಾದ ಸಾಮಗ್ರಿಗಳು ಸಿಕ್ಕಿವೆ. ನಿಧಿ ಶೋಧಕ್ಕಿಂತಲೂ ಮೊದಲು ಪೂಜೆ ಮಾಡಿರಬಹುದು ಎನ್ನಲಾಗಿದ್ದು, ಎರಡು ದಿನಗಳ ಹಿಂದೆ ಈ ಕೃತ್ಯ ನಡೆದಿರುವ ಅನುಮಾನ ಸ್ಥಳೀಯರದ್ದು.

ಇದನ್ನೂ ಓದಿ: ಕೊಡಗಿನಲ್ಲಿ ಮಿತಿ ಮೀರಿದ ಹುಲಿ ಹಾವಳಿ: ನರಭಕ್ಷಕನ ಸೆರೆಗೆ ಆಗ್ರಹಿಸಿ ಬೀದಿಗಿಳಿದ ಜನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.