ETV Bharat / state

ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ಹಳ್ಳಕ್ಕೆ ಬಿದ್ದು  ಜಿಂಕೆ ಸಾವು!

ನಾಯಿಗಳಿಂದ ತಪ್ಪಿಸಿ‌ಕೊಳ್ಳಲು ಓಡಿ ಹೋದ ಜಿಂಕೆಯೊಂದು ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ನಡೆದಿದೆ.

ಸಾವನ್ನಪ್ಪಿರುವ ಜಿಂಕೆಗಳು
author img

By

Published : Nov 4, 2019, 1:32 PM IST

ಶಿವಮೊಗ್ಗ: ನಾಯಿಗಳಿಂದ ತಪ್ಪಿಸಿ‌ಕೊಳ್ಳಲು ಓಡಿ ಹೋದ ಜಿಂಕೆಯೊಂದು ಹಳ್ಳದಲ್ಲಿ ಬಿದ್ದು ಸಾವನ್ನಪ್ಪಿದ ಘಟನೆ ಜಿಲ್ಲೆಯ ಹೊಸನಗರ ಪಟ್ಟಣದಲ್ಲಿ ನಡೆದಿದೆ.

ಸಾವನ್ನಪ್ಪಿರುವ ಜಿಂಕೆಗಳು

ನಿನ್ನೆ ಸಂಜೆ ನಾಯಿಗಳ ಹಿಂಂಡೊಂದು ಜಿಂಕೆ ಓಡಿಸಿಕೊಂಡು ಬಂದಿದ್ದು,ಅವುಗಳಿಂದ ತಪ್ಪಿಸಿಕೊಂಡು ಜೀವ ಉಳಿಸಿಕೊಳ್ಳಲು ಓಡಿದ ಜಿಂಕೆ ಜಯರಾಮ್ ಎಂಬುವರ ತೋಟದ ಬಳಿಯಲ್ಲಿದ್ದ ಗುಂಡಿಗೆ ಬಿದ್ದಿದೆ. ಗುಂಡಿಗೆ ಬಿದ್ದ ಪರಿಣಾಮ ಜಿಂಕೆಗೆ ತಲೆ ಹಾಗೂ ಕಣ್ಣಿಗೆ ಗಾಯವಾಗಿದ್ದು, ಸ್ಥಳೀಯರು ಜಿಂಕೆಯನ್ನ ಗುಂಡಿಯಿಂದ ಮೇಲೆತ್ತಿ ರಕ್ಷಿಸಲು ಪ್ರಯತ್ನಪಟ್ಟಿದ್ದರೂ ಜಿಂಕೆ ಮೃತಪಟ್ಟಿದೆ.

ಅಪರಿಚಿತ ವಾಹನ ಡಿಕ್ಕಿ..ಹೆಣ್ಣು ಜಿಂಕೆ ಸಾವು

ಹಾಸನ: ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸುಮಾರು 5 ವರ್ಷದ ಹೆಣ್ಣು ಜಿಂಕೆಯೊಂದು ಮೃತಪಟ್ಟಿರುವ ಘಟನೆ ಬೇಲೂರು ತಾಲೂಕಿನ ಕಡೇಗರ್ಜೆ ಗ್ರಾಮದ ಇಟ್ಟಿಗೆ ಕಾರ್ಖಾನೆಯ ತಿರುವಿನಲ್ಲಿ ನಡೆದಿದೆ.

ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ, ಜಿಂಕೆ ತೀವ್ರ ರಕ್ತಸ್ರಾವದಿಂದ ಬಳಲುತ್ತಿತ್ತು, ತಕ್ಷಣ ಸ್ಥಳೀಯರು ಚಿಕಿತ್ಸೆಗಾಗಿ ಹಾಸನ ಅರಣ್ಯ ಇಲಾಖೆಯ ಡಿವಿಜನ್ ಕಚೇರಿಗೆ ಕೊಂಡೊಯ್ಯತ್ತಿದ್ದ ವೇಳೆ ಮಾರ್ಗ ಮಧ್ಯಯೆ ಜಿಂಕೆ ಸಾವನ್ನಪ್ಪಿದೆ.

Intro:ಹಾಸನ : ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಸುಮಾರು ೫ ವರ್ಷದ ಹೆಣ್ಣು ಜಿಂಕೆಯೊಂದನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಂಡೊಯ್ಯುವ ಸಂದರ್ಭ ಮಾರ್ಗ ಮಧ್ಯೆಯೆ ಮೃತಪಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.

ಶನಿವಾರ ಸಂಜೆ ಸುಮಾರು ೬ಗಂಟೆಯ ಸಮಯದಲ್ಲಿ ಬೇಲೂರು ತಾಲ್ಲೂಕಿನ ಅರೇಹಳ್ಳಿ ಸಮೀಪದ ಕಡೇಗರ್ಜೆ ಗ್ರಾಮದ ಇಟ್ಟಿಗೆ ಕಾರ್ಖಾನೆಯ ತಿರುವಿನ ಬಳಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮವಾಗಿ ಹೆಣ್ಣು ಜಿಂಕೆಯೊಂದು ತೀವ್ರ ರಕ್ತಸ್ರಾವದಿಂದ ಬಳಲಿತ್ತು. ಈ ವಿಚಾರವನ್ನು ತಿಳಿದ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಆಗಿಮಿಸುವಷ್ಟರಲ್ಲಿ ಗಾಯಗೊಂಡ ಜಿಂಕೆ ಪಕ್ಕದಲ್ಲಿದ್ದ ಕಾಫಿ ತೋಟದಲ್ಲಿ ಕಣ್ಮರೆಯಾಗಿತ್ತು. ಜಿಂಕೆಯನ್ನು ಹಿಡಿದು ಪ್ರಥಮ ಚಿಕಿತ್ಸೆ ನೀಡೋಣವೆಂದು ಸ್ಥಳೀಯರು ಎಷ್ಟೇ ಪ್ರಯತ್ನ ಪಟ್ಟರು ಜಿಂಕೆ ಕತ್ತಲೆಯಲ್ಲಿ ಕಣ್ತಪ್ಪಿಸಿ ಓಡಾಡುತ್ತಿತ್ತು. ಇದೇ ಸಮಯಕ್ಕೆ ಹಾಸನದಿಂದ ವೈಯಕ್ತಿಕ ಕಾರ್ಯವನ್ನು ಮುಗಿಸಿಕೊಂಡು ಕಡೇಗರ್ಜೆ ಮಾರ್ಗವಾಗಿ ಅರೇಹಳ್ಳಿಗೆ ವಾಪಾಸ್ಸಾಗುತ್ತಿದ್ದ ಜೆ.ಡಿ.ಎಸ್ ಮುಖಂಡ ಡಿ.ಎನ್ ಪ್ರವೀಣ್ ಕುಮಾರ್ ಹಾಗೂ ಸ್ನೇಹಿತ ಬಳದಕಲ್ಲು ಗ್ರಾಮದ ವಿಕ್ರಮ್ ತೀವ್ರವಾಗಿ ಗಾಯಗೊಂಡು ತೋಟದಲ್ಲಿ ಅವಿತುಕೊಂಡಿದ್ದ ಜಿಂಕೆಯನ್ನು ಬೆನ್ನಟ್ಟಿ ಹಿಡಿಯುವಲ್ಲಿ ಯಶಸ್ವಿಯಾದರು.

ಜಿಂಕೆಗೆ ಅಪಘಾತವಾಗಿ ಗಾಯಗೊಂಡ ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಹಾಗೂ ಅರೇಹಳ್ಳಿ ಪಶು ಆಸ್ಪತ್ರೆಯ ಸಿಬ್ಬಂದಿ ಜಿಂಕೆಯ ಮುಂದಿನ ಎಡಗಾಲು ಮುರಿತಗೊಂಡಿದ್ದ, ಕಿವಿ ಹಾಗೂ ಕುತ್ತಿಗೆಯ ಭಾಗಗಳಿಗೆ ಗಾಯಗಳಾಗಿ ರಕ್ತಸ್ರಾವವಾಗುತ್ತಿದ್ದನ್ನು ಖಾತ್ರಿಪಡಿಸಿಕೊಂಡ ನಂತರ ಜಿಂಕೆಗೆ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹಾಸನ ಅರಣ್ಯ ಇಲಾಖೆಯ ಡಿವಿಜನ್ ಕಚೇರಿಗೆ ಕೊಂಡೊಯ್ಯಲು ಕ್ರಮ ಕೈಗೊಳ್ಳಲಾಯಿತಾದ್ರೂ ಮಾರ್ಗ ಮಧ್ಯಯೆ ಜಿಂಕೆ ಸಾವನಪ್ಪಿದೆ.

ಇಲಾಖಾ ನಿಯಮಾವಳಿಯಂತೆ ಜಿಂಕೆಯ ಕಳೇಬರವನ್ನು ಸುಟ್ಟು ಹಾಕಲಾಯಿತು. ಜಿಂಕೆ ಹಿಡಿಯುವ ಕಾರ್ಯಾಚರಣೆಯಲ್ಲಿ ಉಪವಲಯ ಅರಣ್ಯಾಧಿಕಾರಿ ಗುರುರಾಜ್, ಅರಣ್ಯಪಾಲಕರುಗಳಾದ ವೇದರಾಜು ಹಾಗೂ ರಘು, ಪ್ರಕಾಶ್, ಅರೇಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಶಿವಶಂಕರ್, ಜೆ.ಡಿ.ಎಸ್ ಮುಖಂಡ ಡಿ.ಎನ್ ಪ್ರವೀಣ್ ಕುಮಾರ್ ಹಾಗೂ ಕಡೇಗರ್ಜೆ ಗ್ರಾಮದ ಯುವಕರು ಪಾಲ್ಗೊಂಡಿದ್ದರು.Body:-ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.Conclusion:೦
ETV Bharat Logo

Copyright © 2024 Ushodaya Enterprises Pvt. Ltd., All Rights Reserved.