ಹಾಸನ: ಗುಂಡೇಟು ಬಿದ್ದು ಜಿಂಕೆ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಬಿಳಿಸಾರೆ ಗ್ರಾಮದಲ್ಲಿ ನಡೆದಿದೆ. ಕುತ್ತಿಗೆ ಭಾಗದಲ್ಲಿ ಗುಂಡೇಟಿನ ಗುರುತು ಕಂಡು ಬಂದಿದ್ದು, ಮಾಂಸಕ್ಕಾಗಿ ಬಹುಶಃ ಬೇಟೆಗಾರರು ನಡೆಸಿದ ಕೃತ್ಯವಿರಬಹುದು ಎಂದು ಶಂಕಿಸಲಾಗಿದೆ.
ಗುಂಡಿನಿಂದ ತೀವ್ರವಾಗಿ ಗಾಯಗೊಂಡ ಜಿಂಕೆ ಬಳಿಕ ಗ್ರಾಮದ ಬಳಿ ಬಂದು ಸಾವನ್ನಪ್ಪಿರಬಹುದು ಎಂದು ಹೇಳಲಾಗ್ತಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಅಂತಿಮ ಸಂಸ್ಕಾರ ಮಾಡಿದ್ದಾರೆ.