ETV Bharat / state

ಕುಮಾರಸ್ವಾಮಿ ಅವರದು ಸಣ್ಣತನದ ಆಲೋಚನೆ: ಸಚಿವ ಸಿ.ಟಿ.ರವಿ - ಕುಮಾರಸ್ವಾಮಿ ವಿರುದ್ಧ ಸಿಟಿ ರವಿ ವಾಗ್ದಾಳಿ

ಮೋದಿಯವರ ದೀಪ ಹಚ್ಚುವ ಸಂದೇಶ ವಿಚಾರವಾಗಿ ಕುಮಾರಸ್ವಾಮಿ ಹೇಳಿದ್ದ ಹೇಳಿಕೆಗೆ ಸಚಿವ ಸಿ.ಟಿ. ರವಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ct ravi reaction on hd kumarswamy tweet
ಸಚಿವ ಸಿ.ಟಿ.ರವಿ ಕಿಡಿ
author img

By

Published : Apr 5, 2020, 8:05 PM IST

ಹಾಸನ: ಕುಮಾರಸ್ವಾಮಿ ಅವರದು ಸಣ್ಣತನದ ಆಲೋಚನೆ ಅವರ ಮಾತಿಗೆ ನಾನು ಹೆಚ್ಚು ಪ್ರತಿಕ್ರಿಯಿಸಲಾರೆ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.

ಸಚಿವ ಸಿ.ಟಿ.ರವಿ ಕಿಡಿ
ದೇಶದ ಜನರು ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸಿಕೊಡಲು, ಭಾವೈಕ್ಯತೆಯನ್ನು ಎತ್ತಿಹಿಡಿಯುವ ಉದ್ದೇಶ ನಮ್ಮ ಪಕ್ಷದ್ದು. ಇಂತಹ ಪರಿಸ್ಥಿತಿಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ ಎಂಬುದನ್ನು ತೋರಿಸುವ ಉದ್ದೇಶವೇ ಮೋದಿಯವರ ಈ ದೀಪ ಬೆಳಗಿಸುವಿಕೆ ಸಂದೇಶ. ಇನ್ನು ಜೆಡಿಎಸ್‌ನವರು ದೀಪ ಹಚ್ಚುವುದು ಬಿಡುವುದು ಅವರಿಗೆ ಬಿಟ್ಟಿದ್ದು. ಆದರೆ ಇಂತಹ ಪರಿಸ್ಥಿತಿಯಲ್ಲಿಯೂ ರಾಜಕೀಯ ಮಾಡುವುದು ತರವಲ್ಲ ಎಂದ್ರು. 40ನೇ ವರ್ಷದ ಬಿಜೆಪಿ ಸಂಸ್ಥಾಪನಾ ದಿನಾಚರಣೆಯ ಅಂಗವಾಗಿ ದೀಪಾ ಹಚ್ಚುತ್ತಿರುವುದು ಎಂಬ ಮಾತು ಶುದ್ಧ ಸುಳ್ಳು. ಸಂಸ್ಥಾಪನಾ ದಿನ ಇರುವುದು ಏಪ್ರಿಲ್ 6. ಆದರೆ ಘೋಷಣೆಯಾಗಿರುವುದು ಏಪ್ರಿಲ್ 5ರಂದು. ಕುಮಾರಸ್ವಾಮಿಯವರು ಇದನ್ನ ಅರ್ಥಮಾಡಿಕೊಳ್ಳಬೇಕು. ರಾಜಕೀಯವಾಗಿ ಮಾತನಾಡುವ ಮೂಲಕ ಜನರಲ್ಲಿ ಗೊಂದಲ ಸೃಷ್ಟಿ ಮಾಡಬಾರದು. ಬದಲಿಗೆ ಮಹಾಮಾರಿಯನ್ನು ದೇಶದಿಂದ ಓಡಿಸುವ ಅಂತಹ ಪ್ರಯತ್ನ ನಮ್ಮ ನಿಮ್ಮೆಲ್ಲರದ್ದು. ಅದಕ್ಕೆ ಸಹಕಾರ ನೀಡಲಿ ಎಂದು ಸಲಹೆ ನೀಡಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.