ETV Bharat / state

ಹೇಮಾವತಿ‌ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಶವ ಪತ್ತೆ: ಮರಣೋತ್ತರ ಪರೀಕ್ಷೆಗೆ ರವಾನೆ - ದಂಪತಿ ಸಾವು

ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿದ್ದ ದಂಪತಿ ಆಕಸ್ಮಿಕವಾಗಿ ಹೇಮಾವತಿ ನದಿಗೆ ಬಿದ್ದು ಸಾವನ್ನಪ್ಪಿದ್ದು, ಪತ್ನಿಯ ಶವ ಗುರುವಾರ ಸಂಜೆ ಪತ್ತೆಯಾಗಿತ್ತು. ಇಂದು ಮುಂಜಾನೆ ಈಜುಗಾರರ ಸಹಾಯದಿಂದ ಪತಿ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Couple fell to the hemavathi river in hassan
ಹೇಮಾವತಿ‌ ನದಿಯಲ್ಲಿ ಮುಳುಗಿದ್ದ ವ್ಯಕ್ತಿಯ ಶವ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನೆ
author img

By

Published : May 8, 2020, 11:11 AM IST

Updated : May 8, 2020, 11:51 AM IST

ಸಕಲೇಶಪುರ (ಹಾಸನ): ಜಿಲ್ಲೆಯ ಸಕಲೇಶಪುರ ತಾಲೂಕಿನ‌ ಹೆನ್ನಲಿ ಗ್ರಾಮದ ಸಮೀಪ ತಿರುಗಾಡಲು ಹೋಗಿದ್ದ ನವದಂಪತಿ ಆಕಸ್ಮಿಕವಾಗಿ ಹೇಮಾವತಿ ನದಿಯಲ್ಲಿ ಬಿದ್ದು ಸಾವನ್ನಪ್ಪಿದ್ದಾರೆ.

ನಿನ್ನೆ ಸಂಜೆ ಮಹಿಳೆಯ ಶವ ಪತ್ತೆಯಾಗಿತ್ತು. ಇಂದು ಮುಂಜಾನೆ ಈಜುಗಾರರ ಸಹಾಯದಿಂದ ಆಕೆಯ ಪತಿಯ ಶವವನ್ನ ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಬೇಲೂರು ತಾಲೂಕು ಮುರಳ್ಳಿ ಗ್ರಾಮದ ಅರ್ಥೇಶ್ (27) ಹಾಗೂ ಹೆನ್ನಲಿ ಗ್ರಾಮದ ಕೃತಿಕಾ (23) ಕಳೆದ ಎರಡು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದರು. ಅರ್ಥೇಶ್ ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಲಾಕ್​ಡೌನ್ ಹಿನ್ನೆಲೆ ತನ್ನ ಸ್ವಗ್ರಾಮ ಬೇಲೂರು ತಾಲೂಕಿನ ಮುರಹಳ್ಳಿ ಗ್ರಾಮಕ್ಕೆ ಬಂದಿದ್ದ.

ಹೇಮಾವತಿ‌ ನದಿಯಲ್ಲಿ ನವದಂಪತಿ ನೀರುಪಾಲು: ಪತ್ನಿಯ ಶವ ಪತ್ತೆ!

ಬುಧವಾರ ಹೆನ್ನಲಿ ಗ್ರಾಮದಲ್ಲಿರುವ ಹೆಂಡತಿ ಮನೆಗೆ ಹೋಗಿದ್ದ. ಗುರುವಾರ ಸಂಜೆ ದಂಪತಿ ತಿರುಗಾಡಿಕೊಂಡು ಬರುತ್ತೇವೆ ಎಂದು ಬೈಕ್​ನಲ್ಲಿ ಹೊರಹೋಗಿದ್ದು, ಎಷ್ಟೊತ್ತಾದರೂ ಮನೆಗೆ ಹಿಂತಿರುಗಿ ಬಾರದ ಕಾರಣ, ಮನೆಯವರು ಹಾಗೆಯೆ ಹುಡುಕಿಕೊಂಡು ಹೋಗಿದ್ದಾರೆ. ಈ ವೇಳೆ, ಹೇಮಾವತಿ ನದಿ ಸಮೀಪದ ರಸ್ತೆಯಲ್ಲಿ ಬೈಕ್ ಕಾಣಿಸಿತ್ತು.

ಅಲ್ಲದೆ, ಅಲ್ಲೇ ಪಕ್ಕದಲ್ಲಿದ್ದ ಮೀನುಗಾರರ ಬಲೆಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಕತ್ತಲೆಯಾಗಿದ್ದರಿಂದ ಅರ್ಥೇಶ್​ ಶವ ಹೊರ ತೆಗೆಯಲಾಗಿರಲಿಲ್ಲ. ಇಂದು ಬೆಳಗ್ಗೆ ಈಜುಗಾರರ ಸಹಾಯದಿಂದ ಆತನ ಶವ ನೀರಿನಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Last Updated : May 8, 2020, 11:51 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.