ETV Bharat / state

ದೇವರ ದರ್ಶನಕ್ಕೆ ಹೊರಟಿದ್ದ ವೇಳೆ ಭೀಕರ ಅಪಘಾತ.. ದಂಪತಿ ಸಾವು, ಮಕ್ಕಳ ಸ್ಥಿತಿ ಗಂಭೀರ - couple died due to accident

ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಗೆ ಕಾರು ಡಿಕ್ಕಿ- ಗಂಡ ಹೆಂಡ್ತಿ ಸಾವು - ಇಬ್ಬರು ಮಕ್ಕಳ ಸ್ಥಿತಿ ಗಂಭೀರ- ಹಾಸನ ಜಿಲ್ಲೆಯಲ್ಲಿ ದುರಂತ

couple died due to accident
ದೇವಸ್ಥಾನ ಹೋಗುತ್ತಿದ್ದ ದ್ವಿಚಕ್ರ ವಾಹನ ಕಾರು ಡಿಕ್ಕಿ ದಂಪತಿ ಸಾವು
author img

By

Published : Jan 3, 2023, 7:51 PM IST

Updated : Jan 3, 2023, 8:09 PM IST

ಹಾಸನ: ಜಿಲ್ಲೆಯಲ್ಲಿ ಮನಕಲಕುವ ದುರಂತ ಘಟನೆಯೊಂದು ಇಂದು ಸಂಭವಿಸಿದೆ. ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿಯ ತೋಟಿ ಗ್ರಾಮದ ರಸ್ತೆಯಲ್ಲಿ ದೇವಸ್ಥಾನಕ್ಕೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ದಂಪತಿಗೆ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದಿದ್ದು, ಚಿಕಿತ್ಸೆ ಫಲಿಸದೇ ಇಬ್ಬರೂ ಮೃತಪಟ್ಟಿದ್ದಾರೆ. ಅಪ್ಪ-ಅಮ್ಮನೊಂದಿಗೆ ಬೈಕ್​ನಲ್ಲಿ ತೆರಳುತ್ತಿದ್ದ ಇಬ್ಬರು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆ ಹೋಬಳಿಯ ತೋಟಿ ಗ್ರಾಮದ ಸುನಿಲ್ ಮತ್ತು ದಿವ್ಯ ಮೃತಪಟ್ಟ ದಂಪತಿ. ಹಿರಿಸಾವೆಯ ಚೌಡೇಶ್ವರಿ ದೇವಾಲಯಕ್ಕೆ ದರ್ಶನಕ್ಕಾಗಿ ಬರುವ ವೇಳೆ, ಎದುರಿನಿಂದ ಅತಿ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆದ ಪರಿಣಾಮ ದಂಪತಿ ಮತ್ತು ಮಕ್ಕಳು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆ ಸೇರಿಸಲಾಗಿತ್ತು, ಪತಿ ಭಾನುವಾರ ಮೃತಪಟ್ಟರೆ, ಪತ್ನಿ ಚಿಕಿತ್ಸೆಗೆ ಸ್ಪಂದಿಸದ ಸೋಮವಾರ ರಾತ್ರಿ ಕೊನೆಯುಸಿರೆಳೆದಿದ್ದಾರೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಂಪತಿ ಚಿಕಿತ್ಸೆಗೆ ಸ್ಪಂದಿಸದೆ ಸಾವಿಗೀಡಾಗಿದ್ದಾರೆ. ಇಬ್ಬರು ಮಕ್ಕಳು ಚಿಂತಾಜನಕ ಸ್ಥಿತಿಯಲ್ಲಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ವೈದ್ಯರು ಹೆಚ್ಚಿನ ಚಿಕಿತ್ಸೆ ನೀಡುತ್ತಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು, ಹಾಸನ ಜಿಲ್ಲೆಯ ಈ ರಸ್ತೆಯಲ್ಲಿ ಇತ್ತೀಚೆಗೆ ಅಪಘಾತಗಳು ಸರ್ವೇಸಾಮಾನ್ಯ ಎಂಬಂತಾಗಿದೆ ಎನ್ನುವುದು ಸ್ಥಳೀಯರ ಆತಂಕವಾಗಿದೆ. ಇಲ್ಲಿ ಸಂಭವಿಸುವ ಅಪಘಾತಗಳು ಕಲ್ಲು ಹೃದಯದವರಲ್ಲೂ ಕಣ್ಣೀರು ತರಿಸುವಂತಿರುತ್ತವೆ.

ಒಟ್ಟಿನಲ್ಲಿ ಹಾಸನ ಜಿಲ್ಲೆಯ ಎಂದರೇ ಸಾಕು ಅಪಘಾತಗಳು ನಡೆದರೆ ಒಂದು ತರ ಮನಕಲಕುವ ರೀತಿಯಲ್ಲಿ ಇರುತ್ತದೆ. ಕಳೆದ ಎರಡು ತಿಂಗಳ ಹಿಂದೆ ಜವರಾಯಿನ ಹಟ್ಟಹಾಸಕ್ಕೆ ಒಂದೇ ಕುಟುಂಬದ 9 ಮಂದಿ ದಾರುಣವಾಗಿ ಸಾವಿಗೀಡಾದ ಘಟನೆ ಅರಸೀಕೆರೆಯಲ್ಲಿ ನಡೆದಿತ್ತು. ಕಳೆದ ವರ್ಷ ಬೈಕಿಗೆ ಲಾರಿ ಡಿಕ್ಕಿ ಹೊಡೆದು ಸುಮಾರು ಅರ್ಧ ಕಿಲೋ ಮೀಟರ್ ಮಗುವಿನ ದೇಹ ಚಕ್ರದಲ್ಲಿ ಸಿಲುಕಿಕೊಂಡು ಭೀಕರವಾಗಿ ಮಗು ಸಾವಿಗೀಡಾದ ಘಟನೆ ನಡೆದಿತ್ತು. ವಾಹನ ಚಾಲನೆ ಮಾಡುವವರು ಜಾಗರೂಕತೆಯಿಂದ ಚಾಲನೆ ಮಾಡುವ ಮೂಲಕ ಹೆಲ್ಮೆಟ್ ಹಾಗೂ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸಿದರೆ ಪ್ರಾಣಾಪಾಯ ತಪ್ಪುತ್ತದೆ.

ಇದನ್ನೂ ಓದಿ:ಸ್ವಗ್ರಾಮದಲ್ಲಿ ರಾತ್ರಿ ವಾಸ್ತವ್ಯ ಮಾಡಿ ಬೆಳಗ್ಗೆ ಹೊರಟಿದ್ದ ಚಾಲಕ.. ಲಾರಿ ಸಮೇತ ಹಳ್ಳಕ್ಕೆ ಬಿದ್ದು ಸಾವು

Last Updated : Jan 3, 2023, 8:09 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.