ETV Bharat / state

ಹಾಸನ ಜಿಲ್ಲಾ ಗಡಿಭಾಗ ಸಂಚಾರ ಸ್ಥಗಿತಗೊಳಿಸಿ: ಸಚಿವರ ಆರ್ಡರ್​ - ಕರ್ನಾಟಕ ಕೊರೊನಾ ವೈರಸ್​ ಪ್ರಕರಣಗಳು

ರಾಜ್ಯದಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ನಗರದಲ್ಲಿ ಸಭೆ ನಡೆಸಿ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ ಜಿಲ್ಲೆಯ ಗಡಿ ಭಾಗ ಸೇರಿದಂತೆ ಹಳ್ಳಿಗಳಲ್ಲಿಯೂ ಕಟ್ಟೆಚ್ಚರ ವಹಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

corona-virus-awareness-meeting-in-hassan
ಜೆ ಸಿ ಮಾಧುಸ್ವಾಮಿ
author img

By

Published : Mar 28, 2020, 9:15 PM IST

ಹಾಸನ : ಜಿಲ್ಲೆಯ ಸುತ್ತಮುತ್ತಲಿನ ಎಲ್ಲ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ಪತ್ತೆಯಾಗಿರುವುದರಿಂದ ಜಿಲ್ಲೆಯ ಗಡಿಭಾಗಗಳನ್ನು ಬಂದ್ ಮಾಡಿ ಸಾರ್ವಜನಿಕರ ಓಡಾಟವನ್ನು ನಿರ್ಬಂಧಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜೆ. ಸಿ. ಮಾಧುಸ್ವಾಮಿ ತಿಳಿಸಿದ್ದಾರೆ.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಮಾರುಕಟ್ಟೆಗಳಲ್ಲಿ, ದಿನಸಿ ಅಂಗಡಿಗಳಲ್ಲಿ ಜನಸಂದಣಿ ನಿಯಂತ್ರಿಸಬೇಕು. ಅದಕ್ಕೆ ವಿವಿಧ ಕಡೆಗಳಲ್ಲಿ ಮಾರುಕಟ್ಟೆ ವಿಸ್ತರಣೆ ಅಗತ್ಯ, ಜೊತೆಗೆ ಇನ್ನು ಮುಂದೆ ನಿತ್ಯ ಮಧ್ಯಾಹ್ನದವರೆಗೆ ಮಾತ್ರ ದಿನಸಿ ಅಂಗಡಿಗಳು ತೆಗೆದಿರಬೇಕು. ಸಾರ್ವಜನಿಕರು ಅನಗತ್ಯ ಓಡಾಟ ತಪ್ಪಿಸಬೇಕು ಎಂದು ಹೇಳಿದರು.

ಇನ್ನು ಎರಡು ಮೂರು ತಿಂಗಳಿಗೆ ಸಾಕಾಗುವಷ್ಟು ಪಡಿತರ ಆಹಾರ ಸಾಮಗ್ರಿಗಳನ್ನು ಆದಷ್ಟು ಬೇಗ ವಿತರಣೆಯಾಗಬೇಕು. ಸಾಧ್ಯವಾದರೆ ಮನೆಮನೆಗೆ ತಲುಪಿಸಬೇಕು. ಆಹಾರ ಇಲ್ಲದೆ ಪರದಾಡುವವರು, ನಿರ್ಗತಿಕರುಗಳಿಗೆ ಜಿಲ್ಲಾಡಳಿತ ಆಹಾರ ತಯಾರಿಸಿ ಪೂರೈಕೆ ಮಾಡಬೇಕು ಎಂದು ಸೂಚಿಸಿದರು.

ಕೊರೊನಾ ಮುಂಜಾಗೃತ ಸಭೆ

ಆರೋಗ್ಯ ಇಲಾಖೆಗೆ ಬೇಕಾದ ಮಾಸ್ಕ್, ಸ್ಯಾನಿಟೈಸರ್‌ಗಳ ಪೂರೈಕೆ ಹಾಗೂ ಪಿ.ಪಿ ಕಿಟ್‌ಗಳ ಪೂರೈಕೆ ಸರ್ಕಾರದಲ್ಲಿ ನಿರ್ಧರಿಸಲಾಗಿದೆ. ಅನುದಾನದಲ್ಲಿ ಕೊರತೆ ಇಲ್ಲ. ಎಲ್ಲಾ ಇಲಾಖೆ ಅಧಿಕಾರಿಗಳು ಗರಿಷ್ಠ ಜಾಗೃತಿ ವಹಿಸಬೇಕು, ತಾಲೂಕು ಆಡಳಿತಗಳು ಗ್ರಾಮ ಮಟ್ಟದಲ್ಲಿ ಹೆಚ್ಚು ಅರಿವು ಹಾಗೂ ಸುರಕ್ಷಾ ಕ್ರಮಗಳನ್ನು ಅನುಸರಿಸಬೇಕು ಎಂದರು.

ಜಿಲ್ಲೆಯಲ್ಲಿ ಈವರೆಗೂ ಸೋಂಕಿತ ಪ್ರಕರಣಗಳು ಪತ್ತೆಯಾಗದೇ ಇರುವುದು ಸಂತೋಷದ ವಿಚಾರ. ಆದರೆ, ಇದೇ ಪರಿಸ್ಥಿತಿಯನ್ನು ಮುಂದಿನ ಒಂದು ತಿಂಗಳವರೆಗೆ ಕಾಯ್ದುಕೊಳ್ಳುವ ಸವಾಲು ನಮ್ಮ ಮುಂದಿದೆ. ಆಶಾ, ಅಂಗನವಾಡಿ ಕಾರ್ಯಕರ್ತೆಯರನ್ನು ಮನೆಮನೆಗೆ ಕಳಿಸಿ ತಪಾಸಣೆ ನಡೆಸಿ, ಜ್ವರದ ಲಕ್ಷಣ ಇರುವವರನ್ನು ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಕರೆತಂದು ಇನ್ನಷ್ಟು ತಪಾಸಣೆ ನಡೆಸಿ ಗರಿಷ್ಠ ಮುಂಜಾಗ್ರತೆ ವಹಿಸಿ ಎಂದರು.

ವೈನ್ ಸ್ಟೋರ್, ಬಾರ್ ರೆಸ್ಟೋರೆಂಟ್‌ಗಳಲ್ಲಿ ಮಧ್ಯ ಮಾರಾಟ ನಿಷೇಧಿಸಿ ಸೀಲ್ ಮಾಡಿದ್ದರೂ ಅಕ್ರಮ ಮಧ್ಯ ಮಾರಾಟ ನಡೆಯುತ್ತಿದೆ. ಸ್ಟಾಕ್‌ಗಳನ್ನು ಗಮನಿಸಿ ಅಕ್ರಮದಲ್ಲಿ ತೊಡಗಿದ್ದವರ ಪರವಾನಗಿ ರದ್ದು ಪಡಿಸಿ ಎಂದು ಅಬಕಾರಿ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಖಾಸಗಿ ಆಸ್ಪತ್ರೆಗಳು ಸೇರಿದಂತೆ ಎಲ್ಲಾ ಆಸ್ಪತ್ರೆಗಳು ನಿರಂತರ ಸೇವೆ ಸಲ್ಲಿಸಬೇಕು. ಒ.ಪಿ.ಡಿಯಲ್ಲಿ ರೋಗಿಗಳ ತಪಾಸಣೆ ಮಾಡಬೇಕು. ಯಾವುದೇ ಸರ್ಕಾರಿ ವೈದ್ಯರು ರಜೆ ತೆಗೆದುಕೊಳ್ಳುವಂತಿಲ್ಲ. ಸೇವೆ ನೀಡದ ಖಾಸಗಿ ನರ್ಸಿಂಗ್ ಹೊಂಗಳು ಹಾಗೂ ವೈದ್ಯರ ಪರವಾನಗಿ ರದ್ದುಪಡಿಸಲು ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು. ಅಲ್ಲದೆ ದ್ವಿಚಕ್ರ ವಾಹನ ಸವಾರರು ಸುಮ್ಮನೆ ಅತ್ತಿಂದಿತ್ತ ಓಡಾಡುವುದನ್ನು ತಪ್ಪಿಸಲು ಪೆಟ್ರೋಲ್ ವಿತರಣೆಯಲ್ಲಿ ಮಿತಿ ಹೇರಬೇಕಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಕ್ರಮ ವಹಿಸಬೇಕು ಎಂದು ತಿಳಿಸಿದರು.

ಆಹಾರ ಸಾಮಗ್ರಿಗಳ ಸಾಗಾಟಕ್ಕೆ ಯಾವುದೇ ನಿರ್ಬಂಧ ಇಲ್ಲ. ಜಿಲ್ಲೆ ಹಾಗೂ ರಾಜ್ಯದ ನಿರ್ಬಂಧವನ್ನು ತೆಗೆಯಲಾಗಿದೆ. ಔಷಧ ಮಾರಾಟಗಾರರು ಸ್ವತಃ ಹಾಸನಕ್ಕೆ ಬಂದು ದಾಸ್ತಾನು ಪಡೆದು ಹೋಗಲು ಪಾಸ್ ವಿತರಣೆ ಮಾಡಬೇಕು. ಎಲ್ಲಿಯೂ ಮಧುಮೇಹ ಹಾಗೂ ಬಿ.ಪಿ ಮಾತ್ರೆ ಸೇರಿದಂತೆ ಅತ್ಯಂತ ಅಗತ್ಯ ಔಷಧಗಳ ಕೊರತೆ ಉಂಟಾಗದಂತೆ ಆರೊಗ್ಯ ಇಲಾಖೆ ನಿಗಾವಹಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.