ETV Bharat / state

ಕೊರೊನಾ ಆತಂಕ: ಅರಸೀಕೆರೆಯಲ್ಲಿ ಔಷಧಿ ಸಿಂಪರಣೆಗೆ ಚಾಲನೆ - Corona panic

ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ಸೋಂಕು ಪ್ರಮಾಣವನ್ನು ತಗ್ಗಿಸಲು ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆ ವತಯಿಂದ ಔಷಧಿ ಸಿಂಪರಣೆ ಕಾರ್ಯ ನಡೆಸಲಾಯಿತು.

Arasikere municipality
ಔಷಧಿ ಸಿಂಪಡಣೆ
author img

By

Published : Mar 24, 2020, 6:14 AM IST

ಹಾಸನ: ರಾಜ್ಯದಲ್ಲಿ ಕೊರೊನಾ ವೈರಸ್ ಹರಡುತ್ತಿರುವ ಹಿನ್ನಲೆಯಲ್ಲಿ ಅರಸೀಕೆರೆಯ ಪ್ರತಿ ವಾರ್ಡನಲ್ಲಿಯೂ ನಗರಸಭೆಯ ವತಿಯಿಂದ ಔಷಧಿ ಸಿಂಪರಣೆ ಕಾರ್ಯ ನಡೆಸಲಾಗುತ್ತಿದೆ.

ಅರಸೀಕೆರೆ ನಗರಸಭೆಯಿಂದ ಔಷಧಿ ಸಿಂಪಡಣೆ

ನಗರದ ರೈಲ್ವೆ ನಿಲ್ದಾಣ, ಬಸ್ ನಿಲ್ದಾಣ ಬಿ.ಎಚ್ ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ಔಷಧಿ ಸಿಂಪರಣೆ ಮಾಡಲಾಯಿತು. 'ಸಾರ್ವಜನಿಕರು ವೈಯಕ್ತಿಕ ಸ್ವಚ್ಛತೆಗೆ ಆದ್ಯತೆ ಕೊಟ್ಟು ಸೋಂಕು ತಡೆಯುವಲ್ಲಿ ನಗಸಭೆಯೊಂದಿಗೆ ಸಹಕರಿಸಬೇಕು' ಎಂದು ನಗರ ಸಭೆಯ ಪರಿಸರ ಇಂಜಿನಿಯರ್ ಯೋಗಿಶ್ ಮನವಿ ಮಾಡಿದರು.

ಮಂಗಳವಾರದಿಂದ ಪ್ರತಿ ವಾರ್ಡ್​ಗಳಿಗೆ ಸ್ವಚ್ಛತಾ ಕಾರ್ಮಿಕರು ತೆರಳಿ ಔಷಧಿ ಸಿಂಪರಣೆ ಮಾಡುತ್ತಾರೆ. ಸಾರ್ವಜನಿಕರು ತಮ್ಮ ಮನೆಯ ಸುತ್ತ-ಮುತ್ತಲ ಪರಿಸರವನ್ನು ಸ್ವಚ್ಚವಾಗಿ ಇರಿಸಿಕೊಳ್ಳಬೇಕು. ಸೋಂಕು ತಡೆಗಟ್ಟಲು ಜನರ ಸಹಕಾರ ಅತ್ಯಗತ್ಯವಾಗಿದೆ. ಹಸಿಕಸ ಮತ್ತು ಒಣಕಸವನ್ನು ಪ್ರತ್ಯೇಕವಾಗಿ ಬೇರ್ಪಡಿಸಿ ನಗರಸಭೆಯ ವಾಹನಗಳಲ್ಲಿ ಹಾಕಬೇಕು. ಇಲ್ಲವಾದಲ್ಲಿ ದಂಡ ವಿಧಿಸಲಾಗುವುದು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.