ಹಾಸನ: ಕಾಲೇಜಿನ ಎಲೆಕ್ಷನ್ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಪ್ರತ್ಯೇಕ ವಿದ್ಯಾರ್ಥಿಗಳ ತಂಡದ ನಡುವೆ ಮಾರಮಾರಿ ಸಂಭವಿಸಿರುವ ಪ್ರಕರಣ ಈಗ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ಹಾಸನದ ಪ್ರತಿಷ್ಠಿತ ಎಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಮಂಗಳವಾರ ಸಂಜೆ ಈ ಘಟನೆ ಜರುಗಿದ್ದು, ಕಾಲೇಜಿನ ಪ್ರತಿನಿಧಿಗಳನ್ನು ಆಯ್ಕೆ ಮಾಡುವ ಸಲುವಾಗಿ ಚುನಾವಣೆ ನಡೆಯಿತು.
ವಿದ್ಯಾರ್ಥಿಗಳು ಹಲ್ಲೆ: ಸೋತ ಮತ್ತು ಗೆದ್ದ ವಿದ್ಯಾರ್ಥಿಗಳ ನಡುವೆ ಮಾರಾಮಾರಿ ಸಂಭವಿಸಿದೆ. ಚುನಾವಣೆ ಅಂದ್ರೆ ಅದು ಕಾಲೇಜು ಆವರಣದ ಒಳಭಾಗದಲ್ಲಿ ಸೌಹಾರ್ದಯುತವಾಗಿ ನಡೆಯಬೇಕು. ಆದ್ರೆ ಹೊರಗಡೆ ವಿದ್ಯಾರ್ಥಿಗಳು ಈ ರೀತಿ ನಡೆದುಕೊಂಡಿರುವುದಕ್ಕೆ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ.
ಲಘು ಲಾಠಿ ಪ್ರಹಾರ: ಈ ಘಟನೆಯಿಂದಾಗಿ ಸಾರ್ವಜನಿಕರಿಗೆ ಕೆಲಕಾಲ ಕಿರಿಕಿರಿ ಉಂಟಾಯಿತು. ಸ್ಥಳಕ್ಕೆ ಬಂದ ಪೊಲೀಸರು ವಿದ್ಯಾರ್ಥಿಗಳ ಗುಂಪು ಚದುರಿಸಲು ಲಘು ಲಾಟಿ ಪ್ರಹಾರ ಮಾಡಿದರು.
ಇದನ್ನೂಓದಿ:ಹುಬ್ಬಳ್ಳಿಯಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ದರ್ಗಾ ತೆರವು ಕಾರ್ಯಾಚರಣೆ... ಸಂಚಾರ ಮಾರ್ಗ ಬದಲಾವಣೆ