ETV Bharat / state

ಚನ್ನರಾಯಪಟ್ಟಣದಲ್ಲಿ ಕೊಬ್ಬರಿ ಹರಾಜು ಆರಂಭಿಸುತ್ತೇವೆ: ಶಾಸಕ ಬಾಲಕೃಷ್ಣ ಭರವಸೆ - Agricultural Product Market in Channarayapatnam

ತೆಂಗು ಬೆಳೆಗಾರರಿಗೆ ಪಾರದರ್ಶಕ ಬೆಲೆ ದೊರಕಿಸಿಕೊಡುವ ಉದ್ದೇಶದೊಂದಿಗೆ 2020ರ ಜನವರಿಯಿಂದ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ರೈತರಿಗೆ ಭರವಸೆ ನೀಡಿದ್ದಾರೆ.

ಶಾಸಕ ಸಿ.ಎನ್.ಬಾಲಕೃಷ್ಣ
author img

By

Published : Nov 10, 2019, 10:55 AM IST

ಹಾಸನ: ತೆಂಗು ಬೆಳೆಗಾರರಿಗೆ ಪಾರದರ್ಶಕ ಬೆಲೆ ದೊರಕಿಸಿಕೊಡುವ ಉದ್ದೇಶದೊಂದಿಗೆ 2020ರ ಜನವರಿಯಿಂದ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ರೈತರಿಗೆ ಭರವಸೆ ನೀಡಿದ್ದಾರೆ.

ಚನ್ನರಾಯಪಟ್ಟಣದದಲ್ಲಿ ಕೊಬ್ಬರಿ ಹರಾಜು ಆರಂಭಿಸುತ್ತೇವೆ: ಶಾಸಕ ಸಿ.ಎನ್.ಬಾಲಕೃಷ್ಣ ಭರವಸೆ

ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಮಾತನಾಡಿದ ಅವರು, 2018-19ನೇ ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ 1.80 ಕೋಟಿ ರೂ.ಗಳಲ್ಲಿ ಹೊಸದಾಗಿ ಎರಡು ತರಕಾರಿ ಮಾರುಕಟ್ಟೆ ಪ್ರಾಂಗಣ, 1.19 ಕೋಟಿ ರೂ. ವೆಚ್ಚದಲ್ಲಿ ತರಕಾರಿ ಮಾರುಕಟ್ಟೆಯ ನೆಲಹಾಸು, ಚರಂಡಿ, ರಸ್ತೆ ನಿರ್ಮಾಣದ ಕಾಮಗಾರಿ ಹಾಗೂ 20 ಲಕ್ಷ ರೂ.ಗಳಲ್ಲಿ ವೇ ಬ್ರಿಡ್ಜ್ ನಿರ್ಮಾಣ, ಗ್ರಾಮೀಣ ಸಂತೆ ನಡೆಯುವ ಜುಟ್ಟನಹಳ್ಳಿಯಲ್ಲಿ 15 ಲಕ್ಷ ರೂ.ನಲ್ಲಿ ಪ್ರಾಂಗಣ ನಿರ್ಮಿಸಲು ಟೆಂಡರ್ ಕರೆಯಲಾಗಿದೆ ಎಂದರು.

ಇದರೊಂದಿಗೆ ನಬಾರ್ಡ್‌ನ ಅಡಿ 3 ಕೋಟಿ ರೂ. ಕಾಮಗಾರಿ ಮಂಜೂರಾಗಿದೆ. ಪಟ್ಟಣದಲ್ಲಿನ ಮಾರುಕಟ್ಟೆಯಲ್ಲಿ 99 ಲಕ್ಷ ರೂ. ವೆಚ್ಚದಲ್ಲಿ 4 ಮುಚ್ಚಿದ ಹರಾಜು ಕಟ್ಟೆ ನಿರ್ಮಾಣ, ಶ್ರವಣಬೆಳಗೊಳದಲ್ಲಿನ ಉಪ ಮಾರುಕಟ್ಟೆಯಲ್ಲಿ 86 ಲಕ್ಷ ರೂ. ವೆಚ್ಚದಲ್ಲಿ ಕಾಂಕ್ರಿಟ್​ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ. ಇದಲ್ಲದೇ, ಅವಶ್ಯವಿರುವ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲು ಹೆಚ್ಚುವರಿಯಾಗಿ 3 ಕೋಟಿ ಮಂಜೂರಾಗಿದೆ. ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ 9 ಕೋಟಿ ವೆಚ್ಚದ ನಾನಾ ಕಾಮಗಾರಿಗಳು ಪ್ರಗತಿ ಹಂತದಲ್ಲಿರುವುದಾಗಿ ತಿಳಿಸಿದರು.

ಇದೇ ವೇಳೆ ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಆರ್.ರಂಗಸ್ವಾಮಿ ಅವರನ್ನು ಅಭಿನಂದಿಸಲಾಯಿತು.

Intro:ಹಾಸನ : ತೆಂಗು ಬೆಳೆಗಾರರಿಗೆ ಪಾರದರ್ಶಕ ಬೆಲೆ ದೊರಕಿಸಿಕೊಡುವ ಉದ್ದೇಶದೊಂದಿಗೆ ೨೦೨೦ರ ಜನವರಿಯಿಂದ ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಕೊಬ್ಬರಿ ಹರಾಜು ಪ್ರಾರಂಭಿಸಲಾಗುವುದು ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.
ಚನ್ನರಾಯಪಟ್ಟಣ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ವಿ.ಆರ್.ರಂಗಸ್ವಾಮಿಯವರನ್ನು ಅಭಿನಂದಿಸಿ, ಸಮಿತಿಯು ನಿರ್ಮಾಣ ಮಾಡುತ್ತಿರುವ ಅಭಿವೃದ್ಧಿ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದ ಅವರು ತಿಪಟೂರಿನ ಮಾರುಕಟ್ಟೆಯಲ್ಲಿ ನಡೆಯುವ ಕೊಬ್ಬರಿ ಹರಾಜಿನ ಆಧಾರದ ಮೇಲೆ ಇಲ್ಲಿನ ಕೊಬ್ಬರಿ ವಹಿವಾಟು ನಡೆಯುತ್ತಿದ್ದು, ಇದರಿಂದ ರೈತರಿಗೆ ತೊಂದರೆಯಾಗುತ್ತಿರುವುದನ್ನು ಮನಗಂಡು ಜನವರಿ ೧ರಿಂದ ಪಟ್ಟಣದಲ್ಲಿನ ಮಾರುಕಟ್ಟೆಯಲ್ಲಿಯೇ ಹರಾಜು ಪ್ರಕಿಯೆ ಪ್ರಾರಂಭಿಸಲಾಗುವುದು, ೨೦೧೮-೧೯ನೇ ವಾರ್ಷಿಕ ಕ್ರಿಯಾ ಯೋಜನೆಯಡಿಯಲ್ಲಿ ೧.೮೦ ಕೋಟಿ ರು.ಗಳಲ್ಲಿ ಹೊಸದಾಗಿ ಎರಡು ತರಕಾರಿ ಮಾರುಕಟ್ಟೆ ಪ್ರಾಂಗಣ, ೧.೮೯ ಕೋಟಿ ರು.ವೆಚ್ಚದಲ್ಲಿ ತರಕಾರಿ ಮಾರುಕಟ್ಟೆಯ ನೆಲಹಾಸು, ಚರಂಡಿ, ರಸ್ತೆ ನಿರ್ಮಾಣದ ಕಾಮಗಾರಿ, ಅತಿ ಅವಶ್ಯಕವೆನ್ನಿಸಿದ್ದ ೨೦ ಲಕ್ಷ ರು.ಗಳಲ್ಲಿ ವೇ ಬ್ರಿಡ್ಜ್ ನಿರ್ಮಾಣ, ಮತ್ತು ಗ್ರಾಮೀಣ ಸಂತೆ ನಡೆಯುವ ಜುಟ್ಟನಹಳ್ಳಿಯಲ್ಲಿ ೧೫ ಲಕ್ಷ ರು.ವೆಚ್ಚದಲ್ಲಿ ಪ್ರಾಂಗಣ ನಿರ್ಮಿಸಲು ಟೆಂಡರ್ ಕರೆಯಲಾಗಿದೆ. ಇದರೊಂದಿಗೆ ನಬಾರ್ಡ್‌ನಡಿ ೩ ಕೋಟಿ. ರು. ಕಾಮಗಾರಿ ಮಂಜೂರಾತಿಯಾಗಿದ್ದು, ಪಟ್ಟಣದಲ್ಲಿನ ಮಾರುಕಟ್ಟೆಯಲ್ಲಿ ೯೯ ಲಕ್ಷ ರು. ವೆಚ್ಚದಲ್ಲಿ ೪ಮುಚ್ಚಿದ ಹರಾಜು ಕಟ್ಟೆ ನಿರ್ಮಾಣ, ಶ್ರವಣಬೆಳಗೊಳದಲ್ಲಿನ ಉಪ ಮಾರುಕಟ್ಟೆಯಲ್ಲಿ ೮೬ ಲಕ್ಷ ವೆಚ್ಚದಲ್ಲಿ ಕ್ರಾಂಕೀಟ್ ರಸ್ತೆ, ಚರಂಡಿ ನಿರ್ಮಾಣ ಮಾಡಲಾಗಿದೆ ಇದರೊಂದಿಗೆ ಅವಶ್ಯವಿರುವ ಮತ್ತಷ್ಟು ಅಭಿವೃದ್ಧಿ ಕೈಗೊಳ್ಳಲು ಹೆಚ್ಚುವರಿಯಾಗಿ ೩ ಕೋಟಿ ಮಂಜೂರಾತಿ ಆಗಿದ್ದು, ಒಟ್ಟಾರೆ ಪ್ರಸಕ್ತ ಸಾಲಿನಲ್ಲಿ ೯ಕೋಟಿ ವೆಚ್ಚದ ನಾನಾ ಕಾಮಗಾರಿಗಳು ಪ್ರಗತಿ ಹಂತದಲ್ಲಿರುವುದಾಗಿ ತಿಳಿಸಿದರು.

ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ವಿ.ಆರ್.ರಂಗಸ್ವಾಮಿ, ಉಪಾಧ್ಯಕ್ಷ ಎನ್.ಆರ್.ಶಿವಸ್ವಾಮಿ, ಮಾಜಿ ಅಧ್ಯಕ್ಷರು ಹಾಲಿ ನಿರ್ದೇಶಕರುಗಳಾದ ಬಿ.ಎಚ್.ಶಿವಣ್ಣ, ತಿಮ್ಮೇಗೌಡ, ಜಿ.ಪ.ಮಾಜಿ ಉಪಾಧ್ಯಕ್ಷ ಎ.ಇ.ಚಂದ್ರಶೇಖರ್ ಸೇರಿ ಇತರರು ಹಾಜರಿದ್ದರು.
Body:ಬೈಟ್-೧ : ಸಿ.ಎನ್. ಬಾಲಕೃಷ್ಣ, ಶಾಸಕ.Conclusion:- ಅರಕೆರೆ ಮೋಹನಕುಮಾರ, ಈಟಿವಿ ಭಾರತ, ಹಾಸನ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.