ಹಾಸನ:ನಗರದ ಆರ್.ಎಸ್.ರಸ್ತೆ ಬದಿಯ ವ್ಯಾಪಾರಿಗಳು ಸ್ವಚ್ಛತೆಗೆ ಒತ್ತು ನೀಡಿದ್ದು, ಸಾಂಕ್ರಾಮಿಕ ಕಾಯಿಲೆ ತಡೆಗೆ ಆರೋಗ್ಯ ಇಲಾಖೆ ಹೊರಡಿಸಿದ್ದ ಆದೇಶವು ಪರಿಣಾಮಕಾರಿಯಾಗಿದೆ.
ಜೀವನೋಪಾಯಕ್ಕೆ ನಿತ್ಯ ನಡೆಸುವ ಆಹಾರ, ತರಕಾರಿ ವ್ಯಾಪಾರವೇ ಇವರ ಕಷ್ಟದ ಬದುಕಿಗೆ ಊರುಗೋಲಾಗಿದೆ
ಇದಕ್ಕೆ ನಿದರ್ಶನವೆಂಬಂತೆ ಮಾರ್ಚ್ 8ರಿಂದ ಬೀದಿ ಬದಿ ವ್ಯಾಪಾರಿಗಳೇ ಒಂದು ತಂಡ ರಚಿಸಿ ರಸ್ತೆಯ ಸ್ವಚ್ಛತೆಗೆ ಮುಂದಾಗಿದ್ದಾರೆ. ಮಾಂಸಾಹಾರ, ತರಕಾರಿ ಮತ್ತಿತರ ಇತರೆ ಬೀದಿ ವ್ಯಾಪರಸ್ಥರು ಒಳ್ಳೆಯ ರುಚಿ ಹಾಗೂ ಗುಣಮಟ್ಟದಲ್ಲಿ, ಕಡಿಮೆ ದರದದಲ್ಲಿ ಆಹಾರ ವಿತರಿಸುತ್ತಿದ್ದಲಾಗುತ್ತಿದೆ.
ಆತಂಕ ಸೃಷ್ಟಿಸಿದ ಕೊರೊನಾ ರೋಗದ ಭೀತಿ ಹಿನ್ನೆಲೆ, ವ್ಯಾಪಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಿರುವುದು ಉತ್ತಮ ಬೆಳವಣಿಗೆ ಎಂದು ಹೇಳಿದರು. ಎಲ್ಲ ಬೀದಿ ವ್ಯಾಪಾರಿಗಳು ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.