ETV Bharat / state

ಮಠಾಧೀಶರಿಗೂ ಸ್ವಾಮೀಜಿಗಳಿಗೂ ಆದರ್ಶಪ್ರಾಯರಾಗಿ ಬಾಳಿದವರು ಪೇಜಾವರ ಶ್ರೀ... ಭಟ್ಟಾರಕ ಸ್ವಾಮೀಜಿ ಸಂತಾಪ - charukeerthi bhattaraka swamiji pays tribute to pejavara sri

ಉಡುಪಿ ಮಠದ ವಿಶ್ವೇಶತೀರ್ಥ ಶ್ರೀಗಳ ನಿಧನಕ್ಕೆ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಸಂತಾಪ ಸೂಚಿಸಿದ್ದಾರೆ.

swamiji
ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ
author img

By

Published : Dec 29, 2019, 8:05 PM IST

ಹಾಸನ: ಪೇಜಾವರ ಶ್ರೀಗಳು ಕೃಷ್ಣೈಕ್ಯರಾದ ಹಿನ್ನೆಲೆ ದಕ್ಷಿಣ ಕಾಶಿಯ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ಸಂತಾಪ ಸೂಚಿಸಿದ್ದಾರೆ.

ಪೇಜಾವರ ಶ್ರೀಗಳ ಅಂತಿಮ ದರ್ಶನದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಪೇಜಾವರ ಶ್ರೀಗಳ ರಾಷ್ಟ್ರಸೇವೆ ,ಸಮಾಜ ಸೇವೆ ಗಣನೀಯವಾಗಿತ್ತು. ರಾಷ್ಟ್ರೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತಿದ್ರು. ಇವರು ಇಂದು ವಿಧಿವಶರಾಗಿರುವುದು ನಮಗೆಲ್ಲರಿಗೂ ದುಃಖ ತಂದಿದೆ. ವೈಯುಕ್ತಿಕವಾಗಿ ನಮಗೂ ಕೂಡ ನೋವಾಗಿದೆ. ಸನಾತನ ಪರಂಪರೆಯಲ್ಲಿ ಅಗ್ರಗಣ್ಯರು.

ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ

ಉಡುಪಿಯ ಕೃಷ್ಣ ಮಠದಲ್ಲಿ 5 ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿರುವ ಪೂಜ್ಯರ ಸಾಧನೆಯನ್ನು ಸುವರ್ಣಾಕ್ಷರಗಳಿಂದ ಬರೆಯುವಷ್ಟು ಮಹತ್ವ ಪಡೆದಿದೆ.ಯಾವತ್ತೂ ಕೂಡ ಎಲ್ಲ ಮಠಾಧೀಶರಿಗೂ ಸ್ವಾಮೀಜಿಗಳಿಗೂ ಆದರ್ಶಪ್ರಾಯವಾಗಿ ಬಾಳಿದ್ದಾರೆ. ಅವರನ್ನು ನಾವು ಎಂದೂ ಮರೆಯುವಂತಿಲ್ಲ. ಅವರು ಮಾಡಿರುವ ಎಲ್ಲಾ ಕಾರ್ಯಗಳು ಇತಿಹಾಸ ಪುಟಸೇರುತ್ತವೆ ಎಂಬುದನ್ನು ನಾವು ಘಂಟಾಘೋಷವಾಗಿ ಹೇಳುತ್ತೇವೆ. ಅಂತ ವ್ಯಕ್ತಿತ್ವವುಳ್ಳ ಅವರ ಆತ್ಮಕ್ಕೆ ಶಾಂತಿ ದೊರಕಲಿ ಅಂತ ನಾನು ಭಗವಾನ್ ಬಾಹುಬಲಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದ್ರು.

Intro:ಪೇಜಾವರಶ್ರೀ ನಿಧನ ಭಾರತಕ್ಕೆ ಭಟ್ಟಾರಕ ಸ್ವಾಮೀಜಿ ಸಂತಾಪ

ಹಾಸನ: ಪೇಜಾವರ ಶ್ರೀಗಳ ರಾಷ್ಟ್ರ ಸೇವೆ ಸಮಾಜ ಸೇವೆ ಗಣನೀಯವಾಗಿತ್ತು ರಾಷ್ಟ್ರೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುವಂತಹ ಮತ್ತು ಎಲ್ಲ ಮಠಾಧೀಶರಿಗೂ ಆದರ್ಶಪ್ರಾಯವಾಗಿತ್ತು ಪೇಜಾವರಶ್ರೀಗಳು ಅಂತ ದಕ್ಷಿಣ ಕಾಶಿಯ ಪೀಠಾಧ್ಯಕ್ಷ ಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರು ಶ್ರೀಗಳ ಸಂತಾಪ ಸೂಚಿಸಿದ್ದಾರೆ

ಪೇಜಾವರ ಶ್ರೀಗಳ ಅಂತಿಮ ದರ್ಶನದ ಬಳಿಕ ಅವರು ಮಾಧ್ಯಮಗಳೊಂದಿಗೆ ಮಾತನಾಡಿ ಪೇಜಾವರ ಶ್ರೀಗಳು ಇಂದು ವಿಧಿವಶರಾಗಿರುವುದಕ್ಕೆ ನಮಗೆಲ್ಲರಿಗೂ ಕೂಡ ದುಃಖ ತಂದಿದೆ. , ವೈಯಕ್ತಿಕವಾಗಿ ನಮಗೂ ಕೂಡ ನೋವಾಗಿದೆ. ಕ್ಷೇತ್ರ ಮತ್ತು ಸಮಾಜದ ಪ್ರಗತಿಗೆ ಸದಾ ಶ್ರಮಿಸುತ್ತಿದ್ದರು. ಸನಾತನ ಪರಂಪರೆಯಲ್ಲಿ ಅಗ್ರಗಣ್ಯರು. ಅವರ ರಾಷ್ಟ್ರ ಸೇವೆ, ಸಮಾಜ ಸೇವೆ ಗಣನೀಯವಾಗಿದೆ. ರಾಷ್ಟ್ರೀಯ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ ಪರಿಹಾರ ಕಾರ್ಯದಲ್ಲಿ ಸ್ವತಹಃ ಕಾರ್ಯತತ್ಪರರಾಗಿದ್ದರು. ಅವರು ಎಲ್ಲಾ ಮಠಾಧೀಶರಿಗೆ ಆದರ್ಶ ಪ್ರಾಯರಾಗಿದ್ದರು. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸಿದ್ದಾರೆ. ಉಡುಪಿಯ ಕೃಷ್ಣ ಮಠದಲ್ಲಿ 5 ಪರ್ಯಾಯಗಳನ್ನು ಯಶಸ್ವಿಯಾಗಿ ಪೂರೈಸಿರುವ ಪೂಜ್ಯರ ಸಾಧನೆಯನ್ನು ಸುವರ್ಣಾಕ್ಷರಗಳಿಂದ ಬರೆಯುವಷ್ಟು ಮಹತ್ವ ಪಡೆದಿದ್ದು, ಉಡುಪಿ ಮಠ ದೇಶ-ವಿದೇಶ ಮಟ್ಟದಲ್ಲಿ ಖ್ಯಾತಿಯನ್ನು ಪಡೆಯಿತು ಎಂದ್ರು

ಇನ್ನು ಅವರ ಸರಳತೆ ಹಾಗೂ ಕ್ಷೇತ್ರ ನಿಷ್ಠೆ ಸರ್ವರಿಗೂ ಆದರ್ಶವಾಗಿದೆ. ಶ್ರೀಕೃಷ್ಣ ಪರಮಾತ್ಮನ ಅನನ್ಯ ಭಕ್ತರಾಗಿದ್ದರು. ಅವರ ಸಾಧನೆಯು ನಮಗೆಲ್ಲರಿಗೂ ಪ್ರೇರಣೆಯಾಗಿದೆ. ಅವರ ಆತ್ಮಕ್ಕೆ ಶಾಂತಿ ದೊರೆಯಲಿ ಅವರ ಆದರ್ಶವನ್ನು ನಾವೆಲ್ಲರೂ ಪರಿಪಾಲಿಸುತ್ತ ರಾಷ್ಟ್ರ ಸೇವೆ, ಸಮಾಜ ಸೇವೆ, ದಾನ-ಧರ್ಮ, ಧರ್ಮ ಜಾಗೃತಿ ಕಾರ್ಯಕ್ರಮದಲ್ಲಿ ಯಾವತ್ತೂ ಕೂಡ ಎಲ್ಲ ಮಠಾಧೀಶರಿಗೂ ಸ್ವಾಮೀಜಿಗಳಿಗೂ ಆದರ್ಶಪ್ರಾಯವಾಗಿ ಬಾಳಿದ್ದಾರೆ. ಅವರನ್ನು ನಾವು ಎಂದೂ ಮರೆಯುವಂತಿಲ್ಲ. ಅವರು ಮಾಡಿರುವಂತಹ ಒಳ್ಳೆ ಕಾರ್ಯಗಳು ಈ ದೇಶದಲ್ಲಿ ಶಾಶ್ವತವಾಗಿ ಉಳಿಯುತ್ತದೆ. ಅವರು ಮಾಡಿರುವ ಎಲ್ಲಾ ಕಾರ್ಯಗಳು ಇತಿಹಾಸ ಪುಟಗಳಲ್ಲಿ ಸೇರುತ್ತವೆ ಎಂಬುದನ್ನು ನಾವು ಘಂಟಾಘೋಷವಾಗಿ ಹೇಳುತ್ತೇವೆ. ಅಂತ ಅವರ ಆತ್ಮಕ್ಕೆ ಶಾಂತಿ ದೊರಕಲಿ ಅಂತ ನಾನು ಭಗವಾನ್ ಬಾಹುಬಲಿಯಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದ್ರು.

ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

Body:7203289

Conclusion:ಸುನೀಲ್ ಕುಂಭೇನಹಳ್ಳಿ, ಈಟಿವಿ ನ್ಯೂಸ್, ಹಾಸನ.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.