ಹಾಸನ : ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಬಸ್ ರಸ್ತೆಯಿಂದ ಜೋಳದ ಹೊಲದ ಗುಂಡಿಗೆ ಇಳಿದ ಘಟನೆ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಚೌಡೇನಹಳ್ಳಿ ಬಳಿ ಜರುಗಿದೆ.
ಹಾಸನದಿಂದ ಬೆಂಗಳೂರಿಗೆ ಹೊರಟಿದ್ದ ನಾನ್ಸ್ಟಾಪ್ ಬಸ್ ಹೊಲಕ್ಕೆ ಇಳಿದಿದೆ. ಇಳಿಜಾರಿನಲ್ಲಿ ನ್ಯೂಟ್ರಲ್ ಗೇರ್ನಲ್ಲಿ ಬಂದ ವೇಳೆ ಚಾಲಕನ ನಿಯಂತ್ರಣಕ್ಕೆ ಸಿಗದೇ ಬಸ್ ಗುಂಡಿಗೆ ಇಳಿದಿದೆ ಎನ್ನಲಾಗಿದೆ. ಘಟನೆಯಲ್ಲಿ 10 ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಚನ್ನರಾಯಪಟ್ಟಣ ಹಾಗೂ ಉದಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲಿಸಿಕೊಂಡಿದ್ದಾರೆ.