ಹಾಸನ: ಕೊರೊನಾ ಪ್ರಕರಣದಿಂದ ದೇಶವೇ ಲಾಕ್ ಡೌನ್ ಆಗಿದೆ. ಜನ್ರು ತುರ್ತು ಕೆಲಸಗಳನ್ನು ಬಿಟ್ಟು ಇನ್ನಿತರೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಬರದಂತೆ ಸರ್ಕಾರ ಸೂಚನೆ ನೀಡಿದೆ. ಇಷ್ಟಿದ್ರೂ ಕೆಲವರು ಸರ್ಕಾರದ ಮಾತೇ ಕೇಳುತ್ತಿಲ್ಲ. ಹೊರಗೆ ಬಂದು ಸುಖಾ ಸುಮ್ಮನೆ ಸುತ್ತಾಡುತ್ತಾ ಕಾಲಹರಣ ಮಾಡ್ತಿರೋ ಮಂದಿಗೆ ಮೈಕ್ ಮೂಲಕ ಪ್ರಚಾರ ಮಾಡಿ ಅರಿವು ಮೂಡಿಸುವ ಕಾರ್ಯಕ್ಕೆ ಕೈ ಹಾಕಿದ್ದಾನೆ ಇಲ್ಲೊಬ್ಬ ಯುವಕ.
ಬೆಸ್ಟ್ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆಯ ಅಧ್ಯಕ್ಷ ಮತ್ತು ಸ್ಕೌಟ್ಸ್ ಮತ್ತು ಗೈಡ್ಸ್‌ನಲ್ಲಿ ರೇಂಜ್ ರೋವರ್ ಆಗಿ ಕೆಲಸ ಮಾಡ್ತಿರೋ ಇವರು, ತನ್ನದೇ ಒಂದು ಯುವ ಪಡೆ ಕಟ್ಟಿಕೊಂಡಿದ್ದಾರೆ. ಈಗಾಗಲೇ 2 ಲಕ್ಷಕ್ಕೂ ಅಧಿಕ ಗಿಡಗಳನ್ನು ಜಿಲ್ಲಾದ್ಯಂತ ನೆಡುವ ಮೂಲಕ ರಾಜ್ಯ ಪರಿಸರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಇದಲ್ಲದೇ ಸುಮಾರು 50ಕ್ಕೂ ಅಧಿಕ ಪಾಳು ಬಿದ್ದಿದ್ದ ಕಲ್ಯಾಣಿಗಳ ಪುನಶ್ಚೇತನ ಕಾರ್ಯವನ್ನೂ ಮಾಡುತ್ತಿದ್ದಾರೆ.
ಪ್ರತಿನಿತ್ಯ ಇವರಿಗೆ ಊಟೋಪಚಾರದಿಂದ ಹಿಡಿದು ಅರಿವು ಕಾರ್ಯಕ್ಕೆ ಬೇಕಾಗುವ ಆರ್ಥಿಕ ಸಹಾಯವನ್ನು ಬೆಸ್ಟ್ ಗ್ರಾಮೀಣಾಭಿವೃದ್ದಿ ಮತ್ತು ತರಬೇತಿ ಸಂಸ್ಥೆ ಮಾಡ್ತಿದೆ.