ETV Bharat / state

ಅರಕಲಗೂಡು: ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಪತ್ತೆ!

author img

By

Published : Jun 10, 2020, 10:20 PM IST

ಲಾರಿ ಚಾಲಕನಿಗೆ ತಗುಲಿದ್ದ ಕೊರೊನಾ ಇಂದು ಮತ್ತೆ ಆತನ ಕುಟುಂಬದ ಮೂರು ಮಂದಿಗೆ ತಗುಲಿದೆ. ಹೀಗಾಗಿ ಜಿಲ್ಲೆಯಲ್ಲಿ ಇಂದು ಕೊರೊನಾ ಪೀಡಿತರ ಸಂಖ್ಯೆ 215ಕ್ಕೆ ಏರಿಕೆಯಾಗಿದೆ. ಅಲ್ಲದೆ ಬೆಂಗಳೂರಿಗೆ ತರಕಾರಿ ಸಾಗಿಸುತ್ತಿದ್ದ ಲಾರಿ ಚಾಲಕ ಹಲವು ಜನರೊಂದಿಗೆ ಸಂಪರ್ಕ ಹೊಂದಿದ್ದಾನೆ ಎನ್ನಲಾಗಿದೆ.

Arakalagodu:  Coronavirus detection in three people of the same family
ಅರಕಲಗೋಡು: ಒಂದೇ ಕುಟುಂಬದ ಮೂವರಲ್ಲಿ ಕೊರೊನಾ ಸೋಂಕು ಪತ್ತೆ

ಅರಕಲಗೂಡು (ಹಾಸನ): ತಾಲೂಕಿನ ಗೌರಿಕೊಪ್ಪಲು ಗ್ರಾಮದಲ್ಲಿ ಓರ್ವ ವ್ಯಕ್ತಿಗೆ ಕೊರೊನಾ ಪಾಸಿಟಿವ್​ ಪತ್ತೆಯಾಗಿದ್ದರಿಂದ ಆ ಗ್ರಾಮವನ್ನು ಸೀಲ್‌ ಡೌನ್ ಮಾಡಲಾಗಿತ್ತು. ಇಂದು ಲಾರಿ ಚಾಲಕನ ಕುಟುಂಬದ ಮೂವರಲ್ಲಿ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಗ್ರಾಮದಲ್ಲಿ ಆತಂಕ ಹೆಚ್ಚಾಗಿದೆ.

ಕೇವಲ 1 ಪಾಸಿಟಿವ್ ಹೊಂದಿದ್ದ ಅರಕಲಗೂಡು ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗತೊಡಗಿದೆ. ಮೊನ್ನೆ ಲಾರಿ ಚಾಲಕನಿಗೆ ತಗುಲಿದ್ದ ಕೊರೊನಾ ಇಂದು ಮತ್ತೆ ಆತನ ಕುಟುಂಬದ ಮೂರು ಮಂದಿಗೆ ತಗುಲಿದೆ. ಹೀಗಾಗಿ ಜಿಲ್ಲೆಯಲ್ಲಿ ಇಂದು ಕೊರೊನಾ ಪೀಡಿತರ ಸಂಖ್ಯೆ 215ಕ್ಕೆ ಏರಿಕೆಯಾಗಿದೆ.

ಲಾರಿ ಚಾಲಕ ಅರಕಲಗೂಡು ಸೇರಿದಂತೆ ಸುತ್ತಮುತ್ತಲ ಗ್ರಾಮಗಳಿಂದ ತರಕಾರಿಗಳನ್ನು ಬೆಂಗಳೂರಿಗೆ ಸಾಗಿಸುತ್ತಿದ್ದ ಎನ್ನಲಾಗಿದೆ. ಅನಾರೋಗ್ಯ ನಿಮಿತ್ತ ಸ್ವಯಂ ಪ್ರೇರಿತವಾಗಿ ಆಸ್ಪತ್ರೆಗೆ ಬಂದು ತಪಾಸಣೆಗೆ ಒಳಗಾದ ವೇಳೆ ಕೊರೊನಾ ಪತ್ತೆಯಾಗಿದ್ದು, ಆತನನ್ನ ಹಾಸನದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದು ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಸಿಬ್ಬಂದಿಯೊಂದಿಗೆ ಗ್ರಾಮಕ್ಕೆ ಭೇಟಿ ನೀಡಿ ಆತನ ಕುಟುಂಬದ 5 ಮಂದಿಯನ್ನು ಹೋಮ್​ ಕ್ವಾರಂಟೈನ್‌ ಮಾಡಿದ್ದಾರೆ. ಇಂದು ಗಂಟಲು ದ್ರವ ಪರೀಕ್ಷೆಯಲ್ಲಿ ಮತ್ತೆ ಆ ಕುಟುಂಬದ ಮೂರು ಮಂದಿಗೆ ಪಾಸಿಟಿವ್ ಬಂದಿದೆ.

ಇವರಲ್ಲಿ ಓರ್ವ ಮಹಿಳೆ ಮತ್ತು ಇಬ್ಬರು ಮಕ್ಕಳಿಗೆ ಸೋಂಕು ದೃಢಪಟ್ಟಿದೆ. ಕೊರೊನಾ ಪಾಸಿಟಿವ್​ ಬಂದಿರುವ ವ್ಯಕ್ತಿ ಪಟ್ಟಣದಲ್ಲಿ ಎಪಿಎಂಸಿ ಮಾರುಕಟ್ಟೆ, ವಾರದ ಸಂತೆ ಮತ್ತು ತರಕಾರಿಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ. ವ್ಯಾಪಾರದ ಬಳಿಕ ಗ್ರಾಮದಲ್ಲಿ ಹಲವರೊಂದಿಗೆ ಸಂಪರ್ಕ ಇಟ್ಟುಕೊಂಡಿದ್ದ ಎನ್ನಲಾಗಿದೆ.

ಇದರಿಂದ ಇಡೀ ಪಟ್ಟಣದಲ್ಲಿ ಆತಂಕ ಮೂಡಿಸಿದೆ. ವಡ್ಡರಹಳ್ಳಿ ಗ್ರಾಪಂಗೆ ಒಳಪಡುವ ಗೌರಿಕೊಪ್ಪಲು ತಾಲೂಕು ಕೇಂದ್ರದಿಂದ ಕೇವಲ 2 ಕಿ.ಮೀ. ದೂರದಲ್ಲಿರುವುದರಿಂದ ಪಟ್ಟಣದ ಜನತೆಯಲ್ಲಿ ಆತಂಕ ಮನೆ ಮಾಡಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.