ETV Bharat / state

ಪರಿಹಾರ ನೀಡುವಂತೆ ಶಾಮಿಯಾನ ಮಾಲೀಕರಿಂದ ಜಿಲ್ಲಾಡಳಿತಕ್ಕೆ ಮನವಿ - appeal to the district administration by the owner of Shamiana

ಶಾಮಿಯಾನ, ದೀಪಾಲಂಕಾರ ಸೇರಿದಂತೆ ವಿವಿಧ ಅಲಂಕಾರಿಕ ವಸ್ತುಗಳನ್ನು ಬಾಡಿಗೆ ನೀಡುತ್ತಿದ್ದ ಮಾಲೀಕರಿಗೆ ಲಾಕ್​ಡೌನ್​ನಿಂದ ಭಾರಿ ನಷ್ಟ ಉಂಟಾಗಿದೆ. ಸರ್ಕಾರ ಸೂಕ್ತ ಪರಿಹಾರ ನೀಡಬೇಕು ಎಂದು ಹಾಸನ ಜಿಲ್ಲಾಡಳಿತಕ್ಕೆ ಶಾಮಿಯಾನ ಮಾಲೀಕರು ಮನವಿ ಸಲ್ಲಿಸಿದರು.

An appeal to the district administration by the owner of Shamiana
ಶಾಮಿಯಾನ ಮಾಲೀಕರಿಂದ ಜಿಲ್ಲಾಡಳಿತಕ್ಕೆ ಮನವಿ
author img

By

Published : Apr 23, 2020, 7:40 PM IST

ಹಾಸನ: ಲಾಕ್​ಡೌನ್​ ಆದೇಶದಿಂದ ಸಾಮೂಹಿಕ ಕಾರ್ಯಕ್ರಮಗಳು ಸ್ಥಗಿತಗೊಂಡಿವೆ. ಇದರಿಂದ ಶಾಮಿಯಾನ, ಧ್ವನಿವರ್ಧಕಗಳ ಮಾಲೀಕರು ಭಾರಿ ನಷ್ಟ ಅನುಭವಿಸುವಂತಾಗಿದೆ. ಅವರಿಗೆ ಸರ್ಕಾರ ಪರಿಹಾರ ನೀಡಬೇಕು ಎಂದು ಜಿಲ್ಲಾ ಧ್ವನಿವರ್ಧಕ ಮತ್ತು ವಿದ್ಯುತ್ ದೀಪಾಲಂಕಾರ ಮಾಲೀಕರ ಸಂಘವು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದೆ.

ಶಾಮಿಯಾನ ಮಾಲೀಕರಿಂದ ಜಿಲ್ಲಾಡಳಿತಕ್ಕೆ ಮನವಿ

ಶಾಮಿಯಾನದ ಎಲ್ಲಾ ಕೆಲಸಗಳು ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಲೇ ಜೀವನ ನಡೆಸುತ್ತಿದ್ದ ಸಾವಿರಾರು ಕುಟುಂಬಗಳು ಆರ್ಥಿಕ ನಷ್ಟ ಅನುಭವಿಸುತ್ತಿವೆ. ಏಪ್ರಿಲ್, ಮೇ ತಿಂಗಳಲ್ಲಿಯೇ ಹೆಚ್ಚಿನ ವ್ಯವಹಾರ ನಡೆಯುತ್ತಿತ್ತು. ಜಾತ್ರೆ, ಮದುವೆ, ಶಾಲಾ ಕಾರ್ಯಕ್ರಮಗಳು ಸೇರಿದಂತೆ ಹೆಚ್ಚಿನ ವಹಿವಾಟು ಈ ಎರಡು ತಿಂಗಳಲ್ಲಿ ನಡೆಯುತ್ತಿತ್ತು. ಸರ್ಕಾರ ಕೂಡಲೇ ಸೂಕ್ತ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.