ETV Bharat / state

ನನ್ನ ವಿರುದ್ಧದ ದೂರಿನ ಪತ್ರದಲ್ಲಿ ಜೆಡಿಎಸ್‌ ಪೋರ್ಜರಿ ಸಹಿ: ಹಾಸನ ಜಿ.ಪಂ.ಅಧ್ಯಕ್ಷೆ ಆರೋಪ - ಸಚಿವ ಎಚ್​.ಡಿ.ರೇವಣ್ಣ

ಹಾಸನದಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ನಡುವಿನ ಜಟಾಪಟಿ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಆದ್ರೆ ಇವೆಲ್ಲದರ ನಡುವೆ ಹಾಸನ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಶ್ವೇತಾ ದೇವರಾಜ್​ ಜೆಡಿಎಸ್​ ಮುಖಂಡರ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ.

jds
jds
author img

By

Published : Jun 24, 2020, 10:48 AM IST

ಹಾಸನ: ನನ್ನ ವಿರುದ್ಧ ದೂರು ನೀಡಲು ಸದಸ್ಯರು ಪತ್ರ ಬರೆದಿದ್ದಾರೆ. ಆದ್ರೆ ಈ ಪತ್ರದಲ್ಲಿ ಜೆಡಿಎಸ್​ ಮುಖಂಡರು ಕಾಂಗ್ರೆಸ್​ ಸದಸ್ಯರ ಹೆಸರಿನಲ್ಲಿ ಪೋರ್ಜರಿ ಸಹಿ ಹಾಕಿದ್ದಾರೆ ಎಂದು ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಶ್ವೇತಾ ದೇವರಾಜ್​ ಜೆಡಿಎಸ್ ಮುಖಂಡರ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಇದಕ್ಕೆ ಪೂರಕವಾಗಿ ಮಹಿಳಾ ಸದಸ್ಯೆಯೊಬ್ಬರು, ಹೊಳೆನರಸೀಪುರದ ತಮ್ಮ ಮನೆಯಲ್ಲಿ ನಮ್ಮ ಎಲ್ಲಾ ಸದಸ್ಯರ ಬಳಿ ಖಾಲಿ ಹಾಳೆಗೆ ಮಾಜಿ ಸಚಿವ ಎಚ್​.ಡಿ.ರೇವಣ್ಣ ಹಾಗೂ ಭವಾನಿ ರೇವಣ್ಣ ಸಹಿ ಹಾಕಿಸಿಕೊಂಡಿದ್ದರು ಎಂಬ ಹೇಳಿಕೆ ಕೊಟ್ಟಿದ್ದಾರೆ.

ಜೆಡಿಎಸ್​ ಮುಖಂಡರ ವಿರುದ್ಧ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಆರೋಪ

ಹಾಸನದಲ್ಲಿ ಜೆಡಿಎಸ್​ ಹಾಗೂ ಕಾಂಗ್ರೆಸ್​ ನಡುವಿನ ಜಟಾಪಟಿ ನಿಲ್ಲುವ ಯಾವ ಲಕ್ಷಣಗಳು ಕಾಣುತ್ತಿಲ್ಲ. ಆದ್ರೆ ಇವೆಲ್ಲದರ ನಡುವೆ ಹಾಸನ ಜಿಲ್ಲಾ ಪಂಚಾಯತ್​ ಅಧ್ಯಕ್ಷೆ ಶ್ವೇತಾ ದೇವರಾಜ್​ ಜೆಡಿಎಸ್​ ಮುಖಂಡರ ವಿರುದ್ಧ ಗುರುತರ ಆರೋಪ ಮಾಡಿದ್ದಾರೆ.

ನನ್ನ ವಿರುದ್ಧ ದೂರು ನೀಡಲು ಸದಸ್ಯರು ಪತ್ರ ಬರೆದಿದ್ದಾರೆ. ಆದ್ರೆ ಈ ಪತ್ರದಲ್ಲಿ ಜೆಡಿಎಸ್​ ಮುಖಂಡರು ಕಾಂಗ್ರೆಸ್​ ಸದಸ್ಯರ ಹೆಸರಿನಲ್ಲಿ ಪೋರ್ಜರಿ ಸಹಿ ಹಾಕಿದ್ದಾರೆ ಎಂದು ಹೇಳಿದ್ದಾರೆ.

ಮುಖ್ಯವಾಗಿ ಜೆಡಿಎಸ್​ ಸದಸ್ಯರು ತನ್ನ ವಿರುದ್ಧ ದೂರು ನೀಡಿದ ದೂರಿನ ಪತ್ರದಲ್ಲಿ ಹಾಸನ ಬಾಣಾವರ ಜಿಲ್ಲಾ ಪಂಚಾಯತ್​ ಸದಸ್ಯ ಅಶೋಕ್​ ಬಿ.ಎಸ್.​ ಎಂಬುವವರ ಹೆಸರಲ್ಲಿ ಜೆಡಿಎಸ್​ ನಾಯಕರೇ ಪೋರ್ಜರಿ ಸಹಿ ಹಾಕಿದ್ದಾರೆ. ಯಾಕಂದ್ರೆ ಅಶೋಕ್​ 2018ರಲ್ಲೇ ಹಾಸನ ಜಿಲ್ಲಾ ಪಂಚಾಯತ್​ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹೀಗಾಗಿ ಅವರು ಇತ್ತೀಚೆಗೆ ನೀಡೀರುವ ದೂರಿನ ಪತ್ರಕ್ಕೆ ಸಹಿ ಹಾಕಲು ಹೇಗೆ ಸಾಧ್ಯ ಎಂದು ಶ್ವೇತಾ ದೇವರಾಜ್​ ಪ್ರಶ್ನೆ ಮಾಡಿದ್ದಾರೆ.

ಆದ್ರೆ ಶ್ವೇತಾ ದೇವರಾಜ್​ ಮಾಡಿರುವ ಮತ್ತೊದು ಬಲವಾದ ಆರೋಪ ಅಂದ್ರೆ ತಮ್ಮ ಕಾಂಗ್ರೆಸ್​ ಜಿಲ್ಲಾ ಪಂಚಾಯತ್​ ಸದಸ್ಯೆ ಶ್ವೇತಾ ಆನಂದ್​ ಕಾಂಗ್ರೆಸ್​ ಪಕ್ಷದವರು. ಆದ್ರೆ ತನ್ನ ವಿರುದ್ಧ ದೂರಿನ ಪತ್ರದಲ್ಲಿ ಅವರ ಸಹಿಯೂ ಇದೆ. ಈಗ ಅವ್ರನ್ನ ಕೇಳಿದ್ರೆ ನಾನು ಸಹಿ ಹಾಕಿಲ್ಲ ಎಂದಿದ್ದಾರೆ. ಹೀಗಾಗಿ ಜೆಡಿಎಸ್​ ನಾಯಕರು ಪೋರ್ಜರಿ ಹಾಕಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

ಈ ಬಗ್ಗೆ ಚನ್ನರಾಯಪಟ್ಟಣ ಬಾಗೂರು ಜಿಲ್ಲಾಪಂಚಾಯತ್​ ಸದಸ್ಯೆ ಶ್ವೇತಾ ಆನಂದ್​ ಪ್ರತಿಕ್ರಿಯೆ ನೀಡಿದ್ದು, ನಾನು ಯಾವುದೇ ದೂರಿನ ಪತ್ರಕ್ಕೆ ಸಹಿ ಹಾಕಿಲ್ಲ. ಬದಲಾಗಿ ಎರಡು ವರ್ಷದ ಹಿಂದೆ ನನ್ನನ್ನೂ ಸೇರಿದಂತೆ 23 ಸದಸ್ಯರ ಬಳಿ ಖಾಲಿ ಹಾಳೆಗೆ ರೇವಣ್ಣ ಹಾಗೂ ಭವಾನಿ ರೇವಣ್ಣ ಸಮ್ಮುಖದಲ್ಲಿ ಹೊಳೆನರಸೀಪುರದ ಅವರ ಮನೆಯಲ್ಲಿ ಖಾಲಿ ಹಾಳೆಗೆ ಸಹಿ ಹಾಕಿಸಿಕೊಂಡಿದ್ದರು ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.