ಹಾಸನ : ತೊಗರಿ ಬೇಳೆಯಲ್ಲಿ ಕಳಪೆ ಕಂಡು ಬಂದರೆ ಅಂತಹ ಗುತ್ತಿಗೆದಾರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ತಿಳಿಸಿದರು.
ನಗರದ ಎಪಿಎಂಸಿ ಆವರಣದಲ್ಲಿರುವ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ ಸಗಟು ಮಳಿಗೆಗೆ ದಿಢೀರ್ ಭೇಟಿ ನೀಡಿದ ಸಚಿವರು, ಕಳಪೆ ತೊಗರಿ ಬೇಳೆ ಪೂರೈಕೆ ಬಗ್ಗೆ ಜಿಪಂ ಸಭೆ ಮತ್ತು ಆರೋಪ ಮಾಡಿದ್ದ ಶಾಸಕ ಸಿ ಎನ್ ಬಾಲಕೃಷ್ಣ ಹಾಗೂ ಎಂಎಲ್‌ಸಿ ಎಂ ಎ ಗೋಪಾಲಸ್ವಾಮಿ ಸಮ್ಮುಖದಲ್ಲಿ ಪರಿಶೀಲಿಸಿ ತೊಗರಿ ಗುಣಮಟ್ಟದ ಬಗ್ಗೆ ಶಾಸಕರ ಗಮನಕ್ಕೆ ತಂದರು. ಆದರೆ, ಅಂಗನವಾಡಿಗಳಿಗೆ ಪೂರೈಕೆಯಾದ ಬೇಳೆಗೂ ಇಲ್ಲಿರುವ ಬೇಳೆಗೂ ಸಾಕಷ್ಟು ವ್ಯತ್ಯಾಸವಿದೆ ಎಂದರು.
ತೊಗರಿಬೇಳೆ ಕಳಪೆ ಬಂದ್ರೆ ಗುತ್ತಿಗೆದಾರರ ಮೇಲೆ ಕ್ರಮ.. ಸಚಿವ ಗೋಪಾಲಯ್ಯ ಎಚ್ಚರಿಕೆ.. - Hassan latest news
ಕಳಪೆ ತೊಗರಿ ಬೇಳೆ ಪೂರೈಕೆ ಬಗ್ಗೆ ದೂರು ಬಂದ ಹಿನ್ನೆಲೆ ಗೋದಾಮಿಗೆ ಭೇಟಿ ನೀಡಿ ಗುಣಮಟ್ಟ ಪರಿಶೀಲಿಸಲಾಯಿತು. ಯಾವುದೇ ಆಹಾರವನ್ನು ನಾವು ತಿನ್ನುವಂತಿದ್ರೆ ಅದನ್ನೇ ಜನರಿಗೆ ಕೊಡಬೇಕು, ಚನ್ನರಾಯಪಟ್ಟಣ ಮತ್ತು ಹಾಸನ ಜಿಲ್ಲೆಯ ಎರಡು ಕಡೆ ಪರಿಶೀಲನೆ ಮಾಡಲಾಗಿದ್ರೂ ಜಿಲ್ಲಾಧಿಕಾರಿಗಳ ಮೂಲಕ ಇನ್ನೊಂದು ಬಾರಿ ಪರೀಕ್ಷೆ ಮಾಡಿಸಲು ಸೂಚಿಸಲಾಯ್ತು..
![ತೊಗರಿಬೇಳೆ ಕಳಪೆ ಬಂದ್ರೆ ಗುತ್ತಿಗೆದಾರರ ಮೇಲೆ ಕ್ರಮ.. ಸಚಿವ ಗೋಪಾಲಯ್ಯ ಎಚ್ಚರಿಕೆ.. Minister Gopalya](https://etvbharatimages.akamaized.net/etvbharat/prod-images/768-512-7820413-1007-7820413-1593441273612.jpg?imwidth=3840)