ಹಾಸನ: ಜಿಲ್ಲಾ ಪಂಚಾಯಿತಿಯ ನೌಕರರೊಬ್ಬರ ಮೇಲೆ ಉಪ ವಿಭಾಗಾಧಿಕಾರಿ ಬಿ ಎ ಜಗದೀಶ್ ಹಲ್ಲೆ ನಡೆಸಿರುವ ಘಟನೆ ಹಾಸನಾಂಬೆಯ ಸನ್ನಿಧಿಯಲ್ಲಿ ನಡೆದಿದೆ. ಕಳೆದ ರಾತ್ರಿ ದರ್ಶನಕ್ಕೆ ಬಂದಿದ್ದ ಜಿಲ್ಲಾ ಪಂಚಾಯಿತಿಯ ನೌಕರ ಶಿವೇಗೌಡ ಎಂಬುವರಿಗೆ ಎಸಿ ಜಗದೀಶ್ ಕಪಾಳಮೋಕ್ಷ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಕುಟುಂಬ ಸಮೇತ ಬಂದ ಶಿವೇಗೌಡನ ಜೊತೆ ಮಾತಿಗೆ ಮಾತು ಬೆಳೆಸಿ ಎಸಿಯವರು ಕಪಾಳ ಮೋಕ್ಷ ಮಾಡಿ ದರ್ಶನಕ್ಕೆ ಅವಕಾಶ ನೀಡದಿರುವುದು ಸಾರ್ವಜನಿಕ ವಲಯದಲ್ಲಿ ಖಂಡನೆ ವ್ಯಕ್ತವಾಗಿದೆ. ದೇವಸ್ಥಾನಕ್ಕೆ ಆಗಮಿಸುವಂತಹ ಭಕ್ತರನ್ನ ಬಹಳ ಗೌರವದಿಂದ ನಡೆದುಕೊಳ್ಳಬೇಕಾದದ್ದು ಅಧಿಕಾರಿಯಾದವರ ಕರ್ತವ್ಯ.
ಹಾಸನಾಂಬ ದರ್ಶನ ಪ್ರಾರಂಭವಾದ ಬಳಿಕ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ ಸಾವಿರಾರು ಭಕ್ತರು ದರ್ಶನ ಪಡೆಯುತ್ತಿದ್ದಾರೆ. ಆದರೆ, ದರ್ಶನಕ್ಕೆ ಬಂದ ಭಕ್ತರ ನಡುವೆಯೇ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಕಪಾಳಮೋಕ್ಷ ಮಾಡಿರುವ ಘಟನೆ ಸಂಬಂಧ ಪೊಲೀಸ್ ಅಧಿಕಾರಿಯೊಬ್ಬರು ಕ್ಷಮೆಯಾಚಿಸಿದ್ದಾರೆ.
ಜಿಲ್ಲಾ ಪಂಚಾಯತಿಯ ನೌಕರನ ಮೇಲೆ ಹಲ್ಲೆ ಮಾಡಿರುವುದು ಸಾರ್ವಜನಿಕರಿಂದ ಭಾರಿ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಕ್ಷಮೆಯಾಚಿಸಬೇಕೆಂದು ಆಗ್ರಹ ಮಾಡಿದ್ದಾರೆ.
ಓದಿ: ದಾವಣಗೆರೆ: ಬಿಜೆಪಿಗರಿಂದಲೇ ಶಾಸಕ ರೇಣುಕಾಚಾರ್ಯರ ಪಿಎ ಮೇಲೆ ಹಲ್ಲೆ?