ಅರಕಲಗೂಡು/ಹಾಸನ: ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಅರಕಲಗೂಡು ತಾಲೂಕಿನ ಹೊನ್ನವಳ್ಳಿ ಗ್ರಾಮದ ಅಲ್ಪಸಂಖ್ಯಾತರ ವಸತಿ ನಿಲಯದಲ್ಲಿ ನಡೆದಿದೆ.
ಮಹಮ್ಮದ್ ಕೈಫ್ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಹಮ್ಮದ್ ಕೈಫ್ ಕೆಲ್ಲೂರು ಗ್ರಾಮದ ಮಹಮ್ಮದ್ ಷರೀಪ್ ಎಂಬುವರ ಪುತ್ರನಾಗಿದ್ದು, ಈತ 9ನೇ ತರಗತಿಯಲ್ಲಿ ಓದುತ್ತಿದ್ದ. ಆದರೆ ಮಹಮದ್ ಕೈಫ್ ಹಲವಾರು ಬಾರಿ ಹಾಸ್ಟೆಲ್ನಿಂದ ಮನೆಗೆ ವಾಪಸ್ ಬಂದಿದ್ದ. ಆದರೂ ಆತನ ಪೋಷಕರು ಮಗನನ್ನು ಪುನಃ ಹಾಸ್ಟೆಲ್ಗೆ ಬಿಟ್ಟು ಬಂದಿದ್ದರು ಎನ್ನಲಾಗ್ತಿದೆ.
ಸೋಮವಾರ ಸಂಜೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಕುರಿತು ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಬಸವಲಿಂಗ ಸ್ವಾಮೀಜಿ ಆತ್ಮಹತ್ಯೆ ಕೇಸ್.. ಮಹಿಳೆ ಸೇರಿ ಮೂವರು ಪೊಲೀಸ್ ವಶಕ್ಕೆ