ಗದಗ: ಜಿಲ್ಲೆಯಲ್ಲಿ ಇಂದು ಮೂವರು ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಗುಜರಾತ್‌ನಿಂದ ಹಿಂದಿರುಗಿದ ಕಾರಣ ಪಿ-905, 36 ವರ್ಷದ ಪುರುಷನಲ್ಲಿ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಮೇ 11 ರಂದು ಅವರನ್ನು ಜಿಮ್ಸ್‌ನ ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ದಾಖಲಿಸಿಲಾಗಿತ್ತು. ಪಿ – 913 ಇವರ ದ್ವಿತೀಯ ಸಂಪರ್ಕಿಯಾಗಿದ್ದ, 15 ವರ್ಷದ ಬಾಲಕ ಪಿ-1794, ಇವರನ್ನು ಪರೀಕ್ಷೆಗೊಳಪಡಿಸಿದಾಗ ಸೋಂಕು ಇರುವುದೆಂದು ದೃಢಪಟ್ಟಿದ್ದು ಅವರನ್ನು ಮೇ 22 ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಜೊತೆಗೆ ಗುಜರಾತ್‌ನಿಂದ ಹಿಂದಿರುಗಿದ ಕಾರಣ 47 ವರ್ಷದ ಪಿ- 971 ಗೆ ಸೋಂಕು ದೃಢಪಟ್ಟಿದ್ದು, ಮೇ 14 ರಂದು ಜಿಮ್ಸ್‌ನ ಕೋವಿಡ್ ಪ್ರತ್ಯೇಕತಾ ವಿಭಾಗದಲ್ಲಿ ದಾಖಲಿಸಿಲಾಗಿತ್ತು.
ಜಿಮ್ಸ್‌ನ ನುರಿತ ವೈದ್ಯರ ತಂಡದ ಚಿಕಿತ್ಸೆ ಫಲವಾಗಿ ಈ ಮೂವರೂ ಸೋಂಕಿತರು ಗುಣಮುಖರಾಗಿದ್ದಾರೆ. ಮಂಗಳವಾರ ಈ ಮೂವರ ಸ್ವಾಬ್ ಮಾದರಿಯನ್ನು ಪರೀಕ್ಷಿಸಲಾಗಿದ್ದು, ನೆಗೆಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಜಿಮ್ಸ್ ನಿರ್ದೇಶಕ ಪಿ.ಎಸ್.ಭೂಸರೆಡ್ಡಿ ಸ್ಪಷ್ಟಪಡಿಸಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 35 ಕೊರೊನಾ ಸೋಂಕಿತರ ಪೈಕಿ ಇದುವರೆಗೂ 17 ಜನ ಗುಣಮುಖರಾಗಿದ್ದು, ಓರ್ವ ವೃದ್ಧೆ ಮೃತಪಟ್ಟಿದ್ದರು. ಇನ್ನು ಉಳಿದ 17 ಜನಕ್ಕೆ ಜಿಮ್ಸ್ ಕೋವಿಡ್ ವಾರ್ಡ್ ನಲ್ಲಿ ಚಿಕಿತ್ಸೆ ಮುಂದುವರೆದಿದೆ.