ETV Bharat / state

ಬಂಧಿಸಲು ಹೋದ ಪೊಲೀಸರ ಬೈಕ್​ಗೆ ಬೆಂಕಿ ಹಚ್ಚಿ ಎಸ್ಕೇಪ್​ ಆದ ಐನಾತಿ ಖದೀಮ..!

author img

By

Published : Aug 7, 2020, 12:15 PM IST

ಬಂಧಿಸಲು ಹೋದ ಪೊಲೀಸರ ಬೈಕ್​ಗೆ ಬೆಂಕಿ ಹಚ್ಚಿ ಖದೀಮನೊಬ್ಬ ಪರಾರಿಯಾದ ಘಟನೆ ಗದಗದ ನಾರಾಯಣಪುರದಲ್ಲಿ ನಡೆದಿದೆ.

thief set fire to a policeman's bike in Gadag
ಪೊಲೀಸರ ಬೈಕ್​ಗೆ ಬೆಂಕಿ ಹಚ್ಚಿ ಎಸ್ಕೇಪ್​ ಆದ ಖದೀಮ

ಗದಗ: ಬಂಧಿಸಲು ಹೋದ ಪೊಲೀಸರನ್ನು ಹೊಲದಲ್ಲಿ ಸುತ್ತಾಡಿಸಿ ಬಳಿಕ ಬೈಕ್​ಗೆ ಬೆಂಕಿ ಹಚ್ಚಿ ಖದೀಮನೊಬ್ಬ ಎಸ್ಕೇಪ್​ ಆದ ಪ್ರಕರಣ ತಾಲೂಕಿನ ನಾರಾಯಣಪುರದಲ್ಲಿ ನಡೆದಿದೆ.

ಸಂತೋಷ್ ರುದ್ರಯ್ಯ ಹಿರೇಮಠ ಪೊಲೀಸರಿಂದ ತಪ್ಪಿಸಿಕೊಂಡಿರುವ ಐನಾತಿ ಖದೀಮ. ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಈತನನ್ನು ಬಂಧಿಸಲು, ಗದಗ ಶಹರ್​ ಠಾಣೆಯ ಇಬ್ಬರು ಪೊಲೀಸರು ನಾರಾಯಣಪುರಕ್ಕೆ ತೆರಳಿದ್ದರು. ಪೊಲೀಸರನ್ನು ನೋಡಿದ ಖದೀಮ ಸಂತೋಷ್, ಹೊಲದಲ್ಲಿ ಓಡತೊಡಗಿದ್ದಾನೆ. ತುಂಬಾ ಹೊತ್ತು ಪೊಲೀಸರನ್ನು ಹೊಲದಲ್ಲಿ ಓಡಿಸಿದ ಆರೋಪಿ, ಬಳಿಕ ರಸ್ತೆ ಬದಿ ನಿಲ್ಲಿಸಿದ್ದ ಪೊಲೀಸರ ಬೈಕ್​ಗೆ ಬೆಂಕಿ ಹಚ್ಚಿ ಅಲ್ಲಿಂದ ಪರಾರಿ ಆಗಿದ್ದಾನೆ.

ಪೊಲೀಸರ ಎರಡು ಬೈಕ್​ಗಳು ಸುಟ್ಟು ಕರಕಲಾಗಿದ್ದು, ಸ್ಥಳಕ್ಕೆ ಗ್ರಾಮೀಣ ಠಾಣೆಯ ಪಿಎಸ್‌ಐ ಎಂ.ಜಿ. ಕುಲಕರ್ಣಿ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.