ಗದಗ: ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಶಾಸಕ ಎಚ್. ಕೆ. ಪಾಟೀಲ್ ಗದಗನಲ್ಲಿ ಆರೋಪಿಸಿದ್ದಾರೆ.
ಪ್ರವಾಹ ಹಾಗೂ ಅತಿವೃಷ್ಟಿಯಿಂದ ಸುಮಾರು 20 ಕ್ಕೂ ಹೆಚ್ಚು ಜಿಲ್ಲೆಗಳ ಜನ್ರ ಜೀವನ ಸಂಕಷ್ಟಕ್ಕೆ ಸಿಲುಕಿದೆ. ಮೇಲಿಂದ ಮೇಲೆ ಪ್ರವಾಹ ಬಂದಿದ್ದರಿಂದ ಜನರ ಬದುಕು ಬೀದಿಗೆ ಬಂದಿದೆ. ಈ ಸಂದರ್ಭದಲ್ಲಿ ಸರ್ಕಾರ ಮಾಡಬೇಕಾದ ತಕ್ಷಣದ ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ನಡೆದಿಲ್ಲ ಅಂತ ಆರೋಪಿಸಿದ್ರು. ಹಾಗೇ ನಮಗೆ ₹ 38 ಸಾವಿರ ಕೋಟಿ ಪರಹಾರ ಕೊಡಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ರೆ. ಅದೇ ಸರ್ಕಾರದ ಸಚಿವರು ಅಷ್ಟು ಹಣ ಬರಲ್ಲ ಅಂತಾರೆ. ಇಷ್ಟು ದಿನವಾದ್ರೂ ಕೇಂದ್ರದಿಂದ ಒಂದು ಬಿಡಿಗಾಸೂ ಬಂದಿಲ್ಲ ಅಂತ ಆರೋಪಿಸಿದ್ರು.
ಇನ್ನು ಇದಕ್ಕೆ ಕೌಂಟರ್ ಕೊಟ್ಟ ಗಣಿ ಇಲಾಖೆ ಸಚಿವ ಸಿ. ಸಿ. ಪಾಟೀಲ್, ಎಚ್ ಕೆ ಪಾಟೀಲ್ ಅವರ ವಿರುದ್ಧ ಹರಿಹಾಯ್ದಿದ್ದಾರೆ. ಪ್ರವಾಹ ಪರಿಸ್ಥಿತಿಯನ್ನು ರಾಜ್ಯ ಸರ್ಕಾರ ಯಶಸ್ವಿಯಾಗಿ ನಿಭಾಯಿಸಿದೆ. ಯಾವುದಕ್ಕೂ ತೊಂದರೆಯಾಗದಂತೆ ಪರಿಹಾರ ಕಾಮಗಾರಿಗಳು ನಡೆಯುತ್ತಿವೆ. ನಾವು ಘೋಷಣೆ ಮಾಡಿರೋ ಪರಿಹಾರದಷ್ಟು ಮೊತ್ತವನ್ನು, ಎಚ್. ಕೆ. ಪಾಟೀಲರು ಸರ್ಕಾರದಲ್ಲಿದ್ದಷ್ಟು ದಿನವೂ ಅವರು ಕೊಟ್ಟಿಲ್ಲ ಅಂತ ಖಾರವಾಗಿ ಪ್ರತಿಕ್ರಿಯೆ ನೀಡಿದ್ರು. ಕೇಂದ್ರದಿಂದ ನೆರವು ಬಂದಿಲ್ಲ ಅಂತ ನಮ್ಮ ಕಾಮಗಾರಿಗಳೇನೂ ನಿಂತಿಲ್ಲ. ಇದನ್ನು ಶಾಸಕ ಎಚ್. ಕೆ. ಪಾಟೀಲ್ ಅವರ ಗಮನಕ್ಕೆ ತರಲು ಬಯಸ್ತೀನಿ. ಪರಿಹಾರ ಬಂದಾಗ ಅವ್ರಿಗೆ ಉತ್ತರ ಸಿಗುತ್ತೆ ಅಂತ ಕೆಂಡಾಮಂಡಲವಾದ್ರು.