ಗದಗ: ರಾಜ್ಯದಲ್ಲಿ ಕೆ.ಎಸ್.ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಕಾಂಗ್ರೆಸ್ ಹೋರಾಟ ಮಾಡುತ್ತಿದೆ. ಇತ್ತ ಸಚಿವರ ಪರವಾಗಿ ನಿಲ್ಲುವಂತೆ ಸ್ವಾಮೀಜಿಗಳು ಕರೆ ನೀಡಿದ್ದಾರೆ ಎಂದು ಸಿದ್ಧಲಿಂಗ ಸ್ವಾಮೀಜಿ ಹೇಳಿದರು.
ಗದಗ ಜಿಲ್ಲಾ ಶ್ರೀರಾಮ ಸೇನೆ ವತಿಯಿಂದ ಆಯೋಜಿಸಿದ್ದ ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಿವಾಜಿ ತಾಯಿ ಜೀಜಾಬಾಯಿ ಆಸೆಯಂತೆ ಶಿವಾಜಿ ಮಹಾರಾಜರು ಕೋಂಡಾಣ ಕೋಟೆ ಮೇಲೆ ಹಸಿರು ಧ್ವಜ ತೆಗೆದು ಕೇಸರಿ ಧ್ವಜವನ್ನು ಹಾರಿಸಿದ್ದರು. ಈಗ ಕೆ.ಎಸ್.ಈಶ್ವರಪ್ಪ ಕೂಡ ಕೆಂಪುಕೋಟೆ ಮೇಲೆ ಕೇಸರಿ ಧ್ವಜ ಹಾರಿಸುವ ಇಚ್ಛೆ ಹೊಂದಿದ್ದಾರೆ. ಈಶ್ವರಪ್ಪನವರು ಹೆದರುವ ಅಗತ್ಯವಿಲ್ಲ, ಈ ರಾಜ್ಯದ 6 ಕೋಟಿ ಹಿಂದೂಗಳು ನಿಮ್ಮ ಪರ ಇದ್ದಾರೆ. ಡಿ.ಕೆ.ಶಿವಕುಮಾರ್ ಅವರು ಈಶ್ವರಪ್ಪನವರಿಗೆ ಡಿಕ್ಕಿ ಹೊಡೆಯಲು ಬಂದ್ರೆ ಹಿಂದೂ ಸಮಾಜ ಸಹಿಸುವುದಿಲ್ಲ ಎಂದರು.
ಶಿವಾಜಿ ಜಯಂತಿ ಹಿನ್ನೆಲೆಯಲ್ಲಿ ಗದಗ ನಗರದ ರಾಚೋಟಿ ವೀರಭದ್ರೇಶ್ವರ ದೇವಸ್ಥಾನದಿಂದ ಮುನಿಸಿಪಲ್ ಕಾಲೇಜು ಮೈದಾನದವರೆಗೆ ಮೆರವಣಿಗೆ ಮಾಡಲಾಯಿತು. ಗದಗ, ಹುಬ್ಬಳ್ಳಿ, ಬೆಳಗಾವಿ ಸೇರಿದಂತೆ ನಾನಾ ಜಿಲ್ಲೆಗಳಿಂದ ಅನೇಕ ಯುವಕರು ಆಗಮಿಸಿದ್ದರು.